ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Special Story: ರಕ್ಷಿತಾ ಶೆಟ್ಟಿ ಹೀರೋಯಿನ್, ಅಶ್ವಿನಿ-ಜಾನ್ವಿ ವಿಲನ್: ಒಂದು ಘಟನೆಯಿಂದ ಎಲ್ಲವೂ ಬದಲು

ಬಿಗ್ ಬಾಸ್ ಕನ್ನಡ 12 ಶೋ ಆರಂಭವಾಗಿ ಮೂರು ವಾರ ಆಗಿದೆಯಷ್ಟೆ, ಅದಾಗಲೇ ರಕ್ಷಿತಾ ಶೆಟ್ಟಿ ಇಂದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಸಂಪಾದಿಸಿದ್ದಾರೆ. ಅತ್ತ ಅಶ್ವಿನಿ ಗೌಡ ಹಾಗೂ ಜಾನ್ವಿಯನ್ನು ಅನೇಕರು ಹೇಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಘಟನೆ.

ರಕ್ಷಿತಾ ಶೆಟ್ಟಿ ಹೀರೋಯಿನ್, ಅಶ್ವಿನಿ-ಜಾನ್ವಿ ವಿಲನ್

Ashwini Gowda and Rakshita Shetty and Jhanvi -

Profile Vinay Bhat Oct 21, 2025 7:18 AM

ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಗಗನಕ್ಕೇರಿಸಬಹುದು, ಅದೇರೀತಿ ಪಾತಾಳಕ್ಕೂ ಕುಸುಯುವಂತೆ ಮಾಡಬಹುದು. ಹೀಗೆ ನಡೆದ ಅನೇಕ ಸಂಗತಿಗಳನ್ನು ನಾವು ಹಿಂದಿನ ಸೀಸನ್​ಗಳಲ್ಲಿ ಕಂಡಿದ್ದೇವೆ. ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಕೂಡ ಇದೇರೀತಿಯ ಘಟನೆ ಸಂಭವಿಸುತ್ತಿದೆ. ಶೋ ಆರಂಭವಾಗಿ ಮೂರು ವಾರ ಆಗಿದೆಯಷ್ಟೆ, ಅದಾಗಲೇ ರಕ್ಷಿತಾ ಶೆಟ್ಟಿ ಇಂದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಸಂಪಾದಿಸಿದ್ದಾರೆ. ಅತ್ತ ಅಶ್ವಿನಿ ಗೌಡ ಹಾಗೂ ಜಾನ್ವಿಯನ್ನು ಅನೇಕರು ಹೇಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಘಟನೆ.

ಬಿಗ್ ಬಾಸ್ ಶೋ ಆರಂಭವಾಗುವ ಮುನ್ನ ರಕ್ಷಿತಾ ಶೆಟ್ಟಿ ಹೆಚ್ಚೇನು ಫೇಮಸ್ ಆಗಿರಲಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಇವರು ಚಿರಪರಿಚಿತರಾಗಿದ್ದಾರೆ. ಆದರೆ, ಕರಾವಳಿಯಲ್ಲಿ ಇವರು ಅತಿ ಹೆಚ್ಚು ಫೇಮಸ್ ಆಗಿದ್ದು ಟ್ರೋಲ್​ನಿಂದಲೇ. ಅನೇಕ ಟ್ರೋಲ್ ಪೇಜ್​ಗಳಿಗೆ ಇವರು ಆಹಾರವಾದರು. ಆದರೆ, ಇದನ್ನ ನೆಗೆಟಿವ್ ಆಗಿ ತೆಗೆದುಕೊಳ್ಳದ ರಕ್ಷಿತಾ, ಟ್ರೋಲ್ ಆದ ಕಾರಣವೇ ನಾನು ಇಂದು ಇಲ್ಲಿ ಇಂಟರ್​ವ್ಯೂ ಕೊಡಲು ಕಾರಣ ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದರು.

ಆದರೀಗ ರಕ್ಷಿತಾನ ದ್ವೇಷ ಮಾಡುವವರು ಕೂಡ ಅವರನ್ನು ಇಷ್ಟ ಪಡುವಂತೆ ಆಗಿದೆ. ಹೊರಗೆ ಟ್ರೋಲ್ ಮಾಡಿದ ಟ್ರೋಲ್ ಪೇಜ್​ನವರೇ ಇಂದು ರಕ್ಷಿತಾ ಫೇವರಿಟ್ ಸ್ಪರ್ಧಿ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅಶ್ವಿನಿ ಗೌಡ ಹಾಗೂ ಜಾನ್ವಿ. ಅಶ್ವಿನಿ ಹಾಗೂ ಜಾನ್ವಿ ಅವರು ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ರಕ್ಷಿತಾ ನಾಗವಲ್ಲಿ ರೀತಿ ಆಡ್ತಾರೆ ಎಂದೆಲ್ಲ ಸುಳ್ಳು ಆರೋಪ ಮಾಡಿದ್ದರು. ಇದೇ ವಿಚಾರ ಇಟ್ಟುಕೊಂಡ ವಾರ ಪೂರ್ತಿ ಎಳೆದಾಡಿದ್ದರು. ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಅಷ್ಟೇ ಅಲ್ಲದೆ ರಕ್ಷಿತಾಗೆ ಈಡಿಯೆಟ್, ಮುಚ್ಕೊಂಡು ಮಲ್ಕೋ ಎಂಬ ಪದವನ್ನೆಲ್ಲ ಉಪಯೋಗಿಸಿದ್ದಾರೆ.

ಈ ಘಟನೆಯಿಂದ ರಕ್ಷಿತಾ ಮೇಲೆ ಕರ್ನಾಟಕ ಜನತೆಗೆ ಸಿಂಪತಿ ಮೂಡಿತು. ಇದು ದೊಡ್ಡ ಮಟ್ಟದಲ್ಲಿ ಇವರಿಗೆ ಪ್ಲಸ್ ಆಗಿದೆ. ಅತ್ತ ಅಶ್ವಿನಿ-ಜಾನ್ವಿಗೆ ಈ ಒಂದು ಘಟನೆಯಿಂದ ಸಾಕಷ್ಟು ನೆಗೆಟಿವ್ ಆಗಿದೆ. ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ಮಾಡಿದ ತಪ್ಪಿಗೆ ದೊಡ್ಡ ದಂದ ತೆತ್ತುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ಹೇಟ್ ಕಮೆಂಟ್​ಗಳು ಬರುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಇರುವುದರಿಂದ ಇದು ಅವರ ಗಮನಕ್ಕೆ ಬಂದಿರೋದಿಲ್ಲ. ಆದರೆ, ಅವರ ಕುಟುಂಬದ ಮೇಲೆ ಇದು ನೇರವಾಗಿ ಪರಿಣಾಮ ಬಿರುವ ಸಾಧ್ಯತೆ ಇದೆ.

BBK 12: ಅಶ್ವಿನಿ ಗೌಡಾಗೆ ಶಾಕ್ ಮೇಲೆ ಶಾಕ್: ರಘು ಆಯ್ತು ಈಗ ರಿಷಾ ಗೌಡ ಸರದಿ

ಅಶ್ವಿನಿ ಗೌಡ ಅವರು ಕನ್ನಡ ಪರ ಹೋರಾಟಗಾರ್ತಿ ಎಂಬ ಪಟ್ಟ ಪಡೆದುಕೊಂಡಿದ್ದರು. ಆದರೆ, ಬಿಗ್ ಬಾಸ್ ಮನೆ ಬಂದು ಅವರ ವಿರುದ್ಧ ನೆಗೆಟಿವಿಟಿ ಹಬ್ಬುತ್ತಿದೆ. ಅತ್ತ ಜಾನ್ವಿ ನಿರೂಪಕಿಯಿಂದ ನಟನೆಯ ಕಡೆಗೆ ಮುಖ ಮಾಡಿದ್ದರು. ಹೀಗಿರುವಾಗ ಇವರ ನಡವಳಿಕೆ ಈಗ ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸ್ಪರ್ಧಿಗಳು ಕೂಡ ನನ್ನ ಫೇವರಿಟ್ ರಕ್ಷಿತಾ, ಅಶ್ವಿನಿ-ಜಾನ್ವಿಯ ಅಹಂಕಾರ ಬಿಡಿಸುತ್ತೇನೆ ಎಂದು ಹೇಳಿ ಮನೆಯೊಳಗೆ ಹೋಗಿದ್ದಾರೆ. ಒಟ್ಟಾರೆ ರಕ್ಷಿತಾಗೆ ಇದು ಪ್ಲಸ್ ಆಗಿದ್ದರೆ ಅಶ್ವಿನಿ-ಜಾನ್ವಿಗೆ ಇದು ಹಿನ್ನಡೆ ಆಗಿದೆ. ಶೋ ಮುಗಿಯುವ ಮುನ್ನ ಅಥವಾ ಎಲಿಮಿನೇಟ್ ಆಗುವ ಮುನ್ನ ಅಶ್ವಿನಿ-ಜಾನ್ವಿ ಕನ್ನಡಿಗರ ಮನದಲ್ಲಿ ಯಾವರೀತಿ ಸ್ಥಾನ ಪಡೆಯುತ್ತಾರೆ ಎಂಬುದು ನೋಡಬೇಕಿದೆ.