ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

World Environment Day: ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಬಿಜೆಪಿ ಯುವಮೋರ್ಚಾ

ಹಸಿರು ಉಸಿರು ಎಂಬ ಘೋಷಣೆ ಪ್ರಸ್ತುತ ದಿನಮಾನದಲ್ಲಿ ಅನುಷ್ಠಾನಕ್ಕೆ ಬರಬೇಕಿದೆ. ಅರಣ್ಯ ಸಂಪತ್ತು ಈಗಾಗಲೇ ಕ್ಷೀಣಿಸಿ ಜಾಗತಿಕ ಉಷ್ಣತೆ ಹೆಚ್ಚಾಗಿದೆ. ಪರಿಸರದ ಮೇಲೆ ಬೀರುತ್ತಿರುವ ದುಷ್ಪರಿಣಾಮ ಮನುಷ್ಯ ಕುಲಕ್ಕೆ ಮಾರಕ ಆಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆ ಎರಡು ಗಿಡ ನೆಟ್ಟು ಪೋಷಿಸಿದರೆ ಹಸಿರು ಕ್ರಾಂತಿ (Green Revolution) ಗೆ ಮುನ್ನುಡಿ ಬರೆಯಬಹುದು

ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಬಿಜೆಪಿ ಯುವಮೋರ್ಚಾ

-

Profile
Ashok Nayak Jun 5, 2026 8:27 PM

ಗುಬ್ಬಿ: ವಿಶ್ವ ಪರಿಸರ ದಿನಾಚರಣೆ(World Environment Day) ಅಂಗವಾಗಿ ಬಿಜೆಪಿ ತಾಲ್ಲೂಕು ಘಟಕ ಹಾಗೂ ಯುವ ಮೋರ್ಚಾ ಸಹಕಾರದಲ್ಲಿ ಪಟ್ಟಣದ ತೊರೆಮಠದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ನಡೆಸಲಾಯಿತು.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಶಿಕಿರಣ್ ಮಾತನಾಡಿ, ಹಸಿರು ಉಸಿರು ಎಂಬ ಘೋಷಣೆ ಪ್ರಸ್ತುತ ದಿನಮಾನದಲ್ಲಿ ಅನುಷ್ಠಾನಕ್ಕೆ ಬರಬೇಕಿದೆ. ಅರಣ್ಯ ಸಂಪತ್ತು ಈಗಾಗಲೇ ಕ್ಷೀಣಿಸಿ ಜಾಗತಿಕ ಉಷ್ಣತೆ ಹೆಚ್ಚಾಗಿದೆ. ಪರಿಸರದ ಮೇಲೆ ಬೀರುತ್ತಿರುವ ದುಷ್ಪರಿಣಾಮ ಮನುಷ್ಯ ಕುಲಕ್ಕೆ ಮಾರಕ ಆಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆ ಎರಡು ಗಿಡ ನೆಟ್ಟು ಪೋಷಿಸಿದರೆ ಹಸಿರು ಕ್ರಾಂತಿ (Green Revolution) ಗೆ ಮುನ್ನುಡಿ ಬರೆಯಬಹುದು ಎಂದರು.

ಇದನ್ನೂ ಓದಿ: World Environment Day 2026 Special: ಪ್ರಕೃತಿಯೇ ಪರಿವಾರ, ಮರ-ಗಿಡಗಳೇ ಬಂಧು-ಬಳಗ; ಪರಿಸರ ಸೇನಾನಿಗಳಿವರು

ತೊರೆ ಮಠಾಧ್ಯಕ್ಷ ಶ್ರೀ ಅಟವಿ ಚನ್ನಬಸವ ಸ್ವಾಮೀಜಿ ಮಾತನಾಡಿ, ಕೈಗಾರಿಕಾ ಕ್ರಾಂತಿ ನಂತರದಲ್ಲಿ ಕೃಷಿ ಚಟುವಟಿಕೆ ಕೂಡಾ ಮಂಕಾಗಿದೆ. ಅರಣ್ಯ ಸಂಪತ್ತು ಲೂಟಿ ಮಾಡಿದ ಹಿನ್ನಲೆ ವನ್ಯಜೀವಿ ಗಳು ನಾಡಿನತ್ತ ಬರುತ್ತಿವೆ. ಮನುಕುಲ ಸ್ವಾರ್ಥ ಸಾಧನೆಗಾಗಿ ನಿರಂತರ ಅತ್ಯಾಚಾರ ಪರಿಸರದ ಮೇಲೆ ಮಾಡುತ್ತಿದ್ದಾನೆ. ಇದರ ಫಲ ಮಾರಕ ರೋಗಗಳ ಸರಮಾಲೆ ಮನುಷ್ಯನ ಜೀವ ಪಡೆಯು ತ್ತಿವೆ. ಕರೋನಾ, ಡೆಂಗ್ಯೂ, ಹಂದಿ ಜ್ವರ ಹೀಗೆ ಅನೇಕ ವೈರಸ್ ನಮ್ಮಗಳ ಮಧ್ಯೆ ಕಾಣಿಸಿಕೊಂಡಿರು ವುದು ಪರಿಸರ ನಾಶದಿಂದ ಎಂಬ ಸತ್ಯ ಅರಿತು ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸ ಬೇಕು ಎಂದು ಕರೆ ನೀಡಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ಹದಗೆಟ್ಟ ವಾತಾವರಣ ಜೊತೆಗೆ ವಾಯು ಮಾಲಿನ್ಯ, ಜಲಮಾಲಿನ್ಯ ನಮ್ಮ ಪರಿಸರ ನಾಶಕ್ಕೆ ಮೂಲವಾಗಿದೆ. ಹಸಿರು ಮರಗಳ ಮಾರಣ ಹೋಮ ಮಾಡುವವರ ಮಧ್ಯೆ ಪರಿಸರ ಕಾಪಾಡುವ ಪ್ರತಿಜ್ಞೆ ಎಲ್ಲರೂ ಮಾಡಬೇಕಿದೆ. ನಮ್ಮ ಗ್ರಾಮ, ಊರು ಮೊದಲು ಸ್ವಚ್ಛವಾಗಿಟ್ಟು ದಾರಿ ಬದಿ, ಸರ್ಕಾರಿ ಜಾಗಗಳು, ಉದ್ಯಾನವನ, ದೇವಸ್ಥಾನ ಆವರಣ ಹೀಗೆ ಅನೇಕ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಂಚಾಕ್ಷರಿ, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಂಗಣ್ಣ, ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಎಚ್.ಟಿ.ಭೈರಪ್ಪ, ಎಸ್.ನಂಜೇಗೌಡ, ಎಚ್.ಎಲ್. ಬಸವರಾಜು, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ, ಯುವಮೋರ್ಚಾ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.