ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಮುಖ್ಯಮಂತ್ರಿಗಳು, ಬಾಕಿ ಬಿಡುಗಡೆಗೆ ಶೀಘ್ರವೇ ಅಧಿಕಾರಿಗಳು, ಗುತ್ತಿಗೆದಾರರ ಸಭೆ ಕರೆಯಲಿ : ಆರ್.ಮಂಜುನಾಥ್ ಆಗ್ರಹ

ರಾಜ್ಯ ಸರಕಾರ ಕಳೆದ 3 ವರ್ಷಗಳಿಂದ ಗುತ್ತಿಗೆದಾರರಿಗೆ ಪಾವತಿಸ ಬೇಕಿದ್ದ 37370.76 ಕೋಟಿ ಬಾಕಿ ಉಳಿಸಿಕೊಂಡಿರುವುದರಿಂದ ನಮ್ಮ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಪರಿಣಾಮವಾಗಿ ಮಾ.6ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ರಾಜ್ಯ ಸರಕಾರವನ್ನು ಎಚ್ಚರಿಸಿದರು.

ಬಾಕಿ ಬಿಡುಗಡೆಗೆ ಶೀಘ್ರವೇ ಅಧಿಕಾರಿಗಳು, ಗುತ್ತಿಗೆದಾರರ ಸಭೆ ಕರೆಯಿರಿ

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿದರು. -

Ashok Nayak
Ashok Nayak Feb 25, 2026 12:44 AM

ಚಿಕ್ಕಬಳ್ಳಾಪುರ: ರಾಜ್ಯ ಸರಕಾರ ಕಳೆದ 3 ವರ್ಷಗಳಿಂದ ಗುತ್ತಿಗೆದಾರರಿಗೆ ಪಾವತಿಸ ಬೇಕಿದ್ದ 37370.76 ಕೋಟಿ ಬಾಕಿ ಉಳಿಸಿಕೊಂಡಿರುವುದರಿಂದ ನಮ್ಮ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಪರಿಣಾಮವಾಗಿ ಮಾ.6ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ(Karnataka State Contractors Association)ದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ರಾಜ್ಯ ಸರಕಾರವನ್ನು ಎಚ್ಚರಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷಿಯಲ್ಲಿ ಮಾತನಾಡಿದರು.

ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಸಂಬಂಧ ಸಂಘದ ವತಿಯಿಂದ ರಾಜ್ಯ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ನಮ್ಮ ಮನವಿಗೆ ಪೂರಕವಾಗಿ ಸ್ಪಂದನೆ ಇಲ್ಲವಾಗಿದೆ. 2021-22, 2022-23, 2023-24ರಿಂದ ಹಣ ಬಿಡುಗಡೆ ಆಗದೆ ಗುತ್ತಿಗೆ ದಾರರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈಗಲಾದರೂ ಸಿಎಂ ಕೂಡಲೇ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲದಿದ್ದಲ್ಲಿ ಮಾ.6ಕ್ಕೆ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆ ದಾರರ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Chikkaballapur News: ಸದಾಕಾಲ ಗುರುಚಿಂತನೆ ಮಾಡುವವರು ಸಹಜಯೋಗಿಗಳು: ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್

2021ರಿಂದ 30/12.2025ರ ತನಕ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪಟ್ಟಿ, ಲೋಕೋಪಯೋಗಿ ಇಲಾಖೆ-8370.76 ಕೋಟಿ, ಜಲಸಂಪನ್ಮೂಲ ಇಲಾಖೆ-13000 ಕೋಟಿ, ಆರ್.ಡಿ.ಪಿಆರ್-3800 ಕೋಟಿ, ಸಣ್ಣ ನೀರಾವರಿ-3000, ನಗರಾಭಿವೃದ್ದಿ ಇಲಾಖೆ-2000, ವಸತಿ ಮತ್ತು ವಕ್ಫ್-2600, ಕಾರ್ಮಿಕ ಇಲಾಖೆ-2000, ಬಿಬಿಎಂಪಿ-2600 ಕೋಟಿ ಒಟ್ಟು 37370.76 ಕೋಟಿ ಕಾಮಗಾರಿಗಳ ಬಿಲ್ಲನ್ನು ಸರಕಾರ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ದಿನಾಂಕ 7/01/2026ರಂದು ಮುಖ್ಯಮಂತ್ರಿಗಳಿಗೆ ಸಂಘದ ವತಿಯಿಂದ ಪತ್ರ ಬರೆದು ಮನವಿ ಮಾಡಿದ್ದರೂ ಈವರೆಗೂ ಕನಿಷ್ಠ ಮಾತುಕತೆಗೆ ಕರೆದಿಲ್ಲ ಎಂದು ಮಂಜುನಾಥ್ ಆರೋಪಿಸಿದರು.

cbpm5r

ಲೋಕೋಪಯೋಗಿ ಇಲಾಖೆ, ಬಿಬಿಎಂಪಿ, ಆರ್‌ಡಿಪಿಆರ್ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಹಣ ಬಿಡುಗಡೆ ವಿಚಾರದಲ್ಲಿ ಜೇಷ್ಠತೆ ಕಾಪಾಡಿಕೊಂಡು ಬಂದಿಲ್ಲ. ಹೊರ ರಾಜ್ಯದ ಬಲಾಢ್ಯ ಗುತ್ತಿಗೆದಾರರು ಪಾರದರ್ಶಕತೆ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಕೊಂಡು ಮಂತ್ರಿಮಂಡಳದ ಅನುಮೋದನೆ ಪಡೆದು ಪ್ಯಾಕೇಜ್ ಟೆಂಡರ್‌ಗಳನ್ನು ಪಡೆಯುತ್ತಾ ಬಂದಿದ್ದಾರೆ. ಇದರಿಂದ ಕರ್ನಾಟಕ ರಾಜ್ಯದ ಸಣ್ಣ ಮತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಅನಾನುಕೂಲವಾಗಿರುತ್ತದೆ, ಇದನ್ನು ಮುಖ್ಯಮಂತ್ರಿಗಳೇ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಲೋಕೋಪಯೋಗಿ ಇಲಾಖೆ, ಬಿಬಿಎಂಪಿ, ಮತ್ತು ಆರ್‌ಡಿಪಿಆರ್ ಹೊರತುಪಡಿಸಿ, ರಾಜ್ಯದ ಅಭಿವೃದ್ದಿ ಪಡಿಸುವ ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳು ಹೇಳುವುದಕ್ಕೆ ಸಾಧ್ಯವಾಗದ ಹಾಗೆ ಮೂರು ವರ್ಷಗಳ ಹಳೆಯ ಬಿಲ್ಲುಗಳ ಹಣ ಬಿಡುಗಡೆ ಸಮಯದಲ್ಲಿ ಹಿಂದಿನ ಸರಕಾರಕ್ಕಿಂತ ಹೆಚ್ಚಿನ ಕಮಿಷನ್ ಪಡೆಯುತ್ತಿದ್ದಾರೆಂದು ತಿಳಿಸಲು ಸಂಘವು ವಿಷಾದಿಸು ತ್ತದೆ. ಈ ವಿಚಾರವನ್ನು ಹಲವಾರು ಬಾರಿ ತಮಗೆ ತಿಳಿಸಿದ್ದರೂ ಗಮನಕ್ಕೆ ತಂದು ಕೊಂಡಿಲ್ಲ. ಸಚಿವರಿಗೆ ತಿಳಿಸಿದರೂ ಗುತ್ತಿಗೆದಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ 3 ಬಾರಿ ಸಭೆ ನಿಗದಿಪಡಿಸಿದ್ದರೂ ಯಾವುದೇ ಕಾರಣ ನೀಡದೆ ಅನಿರ್ದಿಷ್ಠ ಅವಧಿಗೆ ಮುಂದೂಡಿರುತ್ತೀರಿ. ಮೇಲಾಗಿ 2025ರ ಏಪ್ರಿಲ್ ಡಿಸೆಂಬರ್‌ನಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರೂ ಈವರೆಗೂ ಈಡೇರಿಲ್ಲ, ಕೂಡಲೇ ಕೊಟ್ಟ ಮಾತು ಉಳಿಸಿಕೊಂಡು ಗುತ್ತಿಗೆದಾರರನ್ನು ಸಮಸ್ಯೆಗಳಿಂದ ಪಾರು ಮಾಡಿ ಎಂದು ಹೇಳಿದರು.

ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರವನ್ನು ಹಲವು ಬಾರಿ ತಂದಿದ್ದರೂ, ಕನಿಷ್ಠ ಕರೆದು ಮಾತನಾಡುವ ಸೌಜನ್ಯವನ್ನೂ ತೋರಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿಗಳು ಕನಿಷ್ಠ ನಮ್ಮ ನೋವು ಕೇಳುವ ಸಹಾನುಭೂತಿ ತೋರಿಸಬೇಕು ಎಂದು ಆಗ್ರಹಿಸಿದರು.

ಸಚಿವ ಜಾರಕಿಹೋಳಿ ಅವರು ಮಾತ್ರ ಗುತ್ತಿಗೆದಾರರೊಂದಿಗೆ ಚರ್ಚಿಸಿ ಬಿಲ್ ಪಾವತಿಗೆ ಭರವಸೆ ನೀಡಿದ್ದಾರೆ. ಆದರೆ ಇದುವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಹೇಳಿದರು. ಈ ಪರಿಸ್ಥಿತಿ ಮುಂದುವರಿದರೆ ರಾಜ್ಯದ ಸುಮಾರು 1.5 ಲಕ್ಷ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ನಮ್ಮ ಬೇಡಿಕೆ ಕೇವಲ ಬಾಕಿ ಪಾವತಿಸುವುದಷ್ಟೇ; ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುವ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ, ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಬಿ.ಪ್ರಧಾನ ಕಾರ್ಯದರ್ಶಿ ಜಿ.ಎಂ.ನಂದ ಕುಮಾರ್, ಕಾರ್ಯಾಧ್ಯಕ್ಷ ಬಿ.ಎಂ,ರವೀಂದ್ರ,  ಕೆ.ರಾಧಾಕೃಷ್ಣ ನಾಯಕ್, ಉಪಾಧ್ಯಕ್ಷ ಎನ್.ಮಂಜುನಾಥ್, ಸಿ.ಡಿ.ಕೃಷ್ಣ, ಬಿ.ಎನ್.ಕೃಷ್ಣೇಗೌಡ, ಎಂ.ರಮೇಶ್, ಖಜಾಂಚಿ ಡಿ.ಎಂ. ನಾಗರಾಜ್, ಮತ್ತಿತರರು ಇದ್ದರು.