ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapura bandh today: ಇಂದು ಚಿಕ್ಕಬಳ್ಳಾಪುರ ಬಂದ್: ಸಂಘಟನೆಗಳ ಬೃಹತ್ ಬೆಂಬಲ

ಭಾನುವಾರ ಅಂಬೇಡ್ಕರ್ ವೃತ್ತದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ಭಾಗಿಯಾಗಲಿದ್ದು ಹೆಚ್.ಎನ್. ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಲಿದ್ದಾರೆ. ಚಿಕ್ಕಬಳ್ಳಾಪುರ ನಗರದ ಆಟೋ ಚಾಲಕರ ಸಂಘ, ಕನ್ನಡಪರ ಸಂಘಟನೆ ಗಳ ಮುಖಂಡರು, ರೈತ ಸಂಘದ ಮುಖಂಡರು, ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಹಲವಾರು ಸಂಘಟನೆಗಳು , ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ಇಂದು ಚಿಕ್ಕಬಳ್ಳಾಪುರ ಬಂದ್: ಸಂಘಟನೆಗಳ ಬೃಹತ್ ಬೆಂಬಲ

-

Ashok Nayak
Ashok Nayak Mar 15, 2026 6:13 AM

ಚಿಕ್ಕಬಳ್ಳಾಪುರ: ಹೆಚ್.ಎನ್.ವ್ಯಾಲಿ(HN Valley) 3ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿ ಹೋಗಿಲ್ಲ ಒಂದು ರೂಪಾಯಿ ಬಿಡಲ್ಲ ಸಮಾಜಸೇವಕ ಸಂದೀಪ್ ಬಿ ರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಬಂದ್ (Chikkaballapur bandh)ಗೆ ವಿವಿಧ ಸಂಘಟನೆ ಗಳು ಮತ್ತು ಸಾರ್ವಜನಿಕ ರಿಂದ ಬೃಹತ್ ಬೆಂಬಲ ವ್ಯಕ್ತವಾಗಿದೆ. 

ಭಾನುವಾರ ಅಂಬೇಡ್ಕರ್ ವೃತ್ತದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ಭಾಗಿಯಾಗಲಿದ್ದು ಹೆಚ್.ಎನ್. ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಲಿದ್ದಾರೆ. ಚಿಕ್ಕಬಳ್ಳಾಪುರ ನಗರದ ಆಟೋ ಚಾಲಕರ ಸಂಘ, ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಸಂಘದ ಮುಖಂಡರು, ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಹಲವಾರು ಸಂಘಟನೆಗಳು , ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ಇದನ್ನೂ ಓದಿ: Hotels bandh: ವಾಣಿಜ್ಯ ಸಿಲಿಂಡರ್‌ ಬ್ಲ್ಯಾಕ್‌ ಮಾರ್ಕೆಟ್‌ನಲ್ಲಿ 4000 ರೂ.! ಇಂದು ಬೆಂಗಳೂರಿನಲ್ಲಿ ಹೋಟೆಲ್‌ಗಳು ಮುಚ್ಚುವ ಭೀತಿ

ಈಗಾಗಲೇ ಹೆಚ್ ಎನ್ ವ್ಯಾಲಿ ಕಿಚ್ಚು ಜಿಲ್ಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಆರೋಪ ಪ್ರತ್ಯಾ ರೋಪಗಳಿಗೆ ಅವಕಾಶ ಮಾಡಿಕೊಟ್ಟಿದೆ. 

ಇದರ ರೂವಾರಿ ಸಂಸದ ಡಾಕ್ಟರ್ ಕೆ ಸುಧಾಕರ್ ಮೂರನೇ ಹಂತದ ಶುದ್ಧೀಕರಣ ಬೇಕು. ಈ ಬಗ್ಗೆ ಮೂರು ಜಿಲ್ಲೆಯ ಜನತೆಯನ್ನು ಒಟ್ಟುಗೂಡಿಸಿ ಸರ್ಕಾರದ ವಿರುದ್ಧ ಹೋರಾಟ ರೂಪಿಸುತ್ತೇವೆ. ಭಾನುವಾರದ ಬಂದ್ ಗೆ ನನ್ನ ಬೆಂಬಲವಿಲ್ಲ ಎಂದಿದ್ದಾರೆ. 

ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ ಬಂದ್ ಬಗ್ಗೆ ಪ್ರತಿಕ್ರಿಯಿಸಿ ಸಂದೀಪ್ ರೆಡ್ಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ .ಭಾನುವಾರದ ಬಂದ್ ಗೆ ನಮ್ಮ ಪಕ್ಷದ ವತಿಯಿಂದ ಬೆಂಬಲವಿಲ್ಲ .ಅವರು ನಮ್ಮೊಂದಿಗೆ ಮಾತನಾಡಿಲ್ಲ...

ಆದರೆ ಬಿಜೆಪಿ ಪಕ್ಷದ ವತಿಯಿಂದ ಶೀಘ್ರದಲ್ಲೇ ಜಿಲ್ಲೆಯ ಬಂಡಿಗೆ ಕರೆ ನೀಡಲಾಗುವುದು ಎಂದರು.