ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ; ಗೌತಮ್ ತೆಕ್ಕೆಗೆ ಬಂತು ಕುಟುಂಬದ ಆಸ್ತಿ!

Amruthadhaare Serial: ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.

Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 2, 2026 1:47 PM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ಜೈದೇವ್‌ ಪಾಪದ ಕೊಡ ತುಂಬಿದೆ. ಗೌತಮ್‌ ದಿವಾನ್‌ ಈಗ ತನ್ನ ಹಳೆಯ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾನೆ. ಹರಾಜಿನಲ್ಲಿ ಗೌತಮ್‌ (Gowtham) ಅದನ್ನೆಲ್ಲವನ್ನು ಮರಳಿ ಪಡೆದಿದ್ದಾನೆ. ಜೈದೇವ್‌ಗೆ (Jaidev) ಕಪಾಳ ಮೋಕ್ಷ ಮಾಡಿ ಸಾಮ್ರಾಜ್ಯದಿಂದ ಹೊರ ಹಾಕಿದ್ದಾನೆ ಗೌತಮ್.‌

ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಜಯದೇವ್ ಪತ್ನಿ ದಿಯಾ ಓಡಿ ಹೋಗಿದ್ದಾಳೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಿದ್ದಾರೆ.

ಇದನ್ನೂ ಓದಿ: Nandamuri Balakrishna: ಕೊರಟಾಲ ಶಿವ ಜೊತೆ ನಂದಮೂರಿ ಬಾಲಕೃಷ್ಣ ಹೊಸ ಮೂವಿ ಅನೌನ್ಸ್‌!

ಗೌತಮ್‌ ದಿವಾನ್‌ ಆಸ್ತಿ ಖರೀದಿ

ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.

ಗೌತಮ್‌ ದಿವಾನ್‌ ಈಗ ಜಯದೇವ್‌ನನ್ನು ಮನೆಯಿಂದ ಹೊರಗಡೆ ಹಾಕಿದಮೇಲೂ ಕೂಡ ಅವನಿಗೆ ಬುದ್ಧಿಯೇ ಬಂದಿಲ್ಲ. ಇನ್ನೊಂದು ಕಡೆ ದಿಯಾ ಕೂಡ ಅವನಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದ್ದಾಳೆ. ಮುಂದೆ ಜಯದೇವ್‌, ಗೌತಮ್‌ ಕುಟುಂಬಕ್ಕೆ ತೊಂದರೆ ಕೊಡ್ತಾನಾ? ಅಥವಾ ಶಕುಂತಲಾ, ಜಯದೇವ್‌ ಆಡಿದ ಮತ್ತೆ ನಾಟಕ ಮಾಡಿದ್ರಾ ಅನ್ನೋ ಎಂಬ ಪ್ರಶ್ನೆ ವೀಕ್ಷರಲ್ಲಿ ಇದೆ.

ಈಗಾಗಲೇ ಗೌತಮ್​ಗೆ ಜಯದೇವ್ ಯಾವ ರೀತಿಯ ವ್ಯಕ್ತಿ ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವನು ಈತನ ಬೆಂಬಲಕ್ಕೆ ನಿಲ್ಲೋದು ಅನುಮಾನವೇ.

ಶಕುಂತಲಾ ಬೀದಿ ಪಾಲಾಗಿದ್ದಾಗ ಮತ್ತೆ ಗೌತಮ್‌ ಕರೆದುಕೊಂಡು ಬಂದು ತಾಯಿಯನ್ನು ಸಲಹುತ್ತಿದ್ದಾನೆ. ಭಾಗ್ಯಮ್ಮ ಹಾಗೂ ಶಕುಂತಲಾ ಮುಖಾಮುಖಿ ಆಗಿದ್ದಾರೆ. ಭಾಗ್ಯಮ್ಮ ಕೂಡ ಮಕ್ಕಳನ್ನು ನಾವು ಹೇಗೆ ಸಾಕುತ್ತೇವೋ ಹಾಗೆ ಇರ್ತಾರೆ. ಗೌತಮ್‌ಗೆ ಪ್ರೀತಿ ಕೊಡುದು ಅಷ್ಟೇ ಗೊತ್ತು. ಮತ್ತೆ ವಿಷದ ಹಾವಿಗೆ ಹಾಲು ಎರೆಯುವಂತೆ ಮಾಡಬೇಡ ಎಂದಿದ್ದಾಳೆ.

ಇದನ್ನೂ ಓದಿ: Amruthadhaare Serial: ಮುಳುಗುತ್ತಿರುವ ಸಾಮ್ರಾಜ್ಯವನ್ನ ಹೇಗೆ ಕಾಪಾಡಿಕೊಳ್ತಾನೆ ಗೌತಮ್ ದಿವಾನ್?

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.