MLA Pradeep Eshwar: 3 ಕೋಟಿ ವೆಚ್ಚದ ನಾಗರಭಾವಿ ದೇವಕೊಂಡಹಳ್ಳಿ ಸಿ.ಸಿ. ರಸ್ತೆ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ ಅವರಿಂದ ಚಾಲನೆ
ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡುವ ಮುನ್ನ ಬೆಳಂಬೆಳಗ್ಗೆಯೇ ದಲಿತರೇ ಹೆಚ್ಚಾಗಿ ವಾಸಿಸುವ ನಾಗರಬಾವಿ ಮತ್ತು ದೇವರಕೊಂಡಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ್ದ ಶಾಸಕ ಪ್ರದೀಪ್ ಈಶ್ವರ್ ಅವರು ಗ್ರಾಮಗಳಲ್ಲಿ ಸಂಚರಿಸಿ ಜನರಿಂದ ಅಹವಾಲು ಆಲಿಸಿದರು. ಗ್ರಾಮದ ಪ್ರತಿಯೊಂದು ಮನೆ ಮನೆಗೂ ಭೇಟಿ ನೀಡಿದ್ದ ಶಾಸಕರು ಅವರ ಮನೆಯ ಬಳಿಯೇ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು
-
ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳ ಸಮಗ್ರ ಅಭಿವೃದ್ದಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಹೇಳಿದರು.
ತಾಲ್ಲೂಕಿನ ಹಳೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಭಾಗದ ಗ್ರಾಮಗಳಾದ ನಾಗರಬಾವಿ ಯಿಂದ ದೇವರಕೊಂಡಹಳ್ಳಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕೋಟಿ ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡುವ ಮುನ್ನ ಬೆಳಂಬೆಳಗ್ಗೆಯೇ ದಲಿತರೇ ಹೆಚ್ಚಾಗಿ ವಾಸಿಸುವ ನಾಗರಬಾವಿ ಮತ್ತು ದೇವರಕೊಂಡಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ್ದ ಶಾಸಕ ಪ್ರದೀಪ್ ಈಶ್ವರ್ ಅವರು ಗ್ರಾಮಗಳಲ್ಲಿ ಸಂಚರಿಸಿ ಜನರಿಂದ ಅಹವಾಲು ಆಲಿಸಿದರು. ಗ್ರಾಮದ ಪ್ರತಿಯೊಂದು ಮನೆ ಮನೆಗೂ ಭೇಟಿ ನೀಡಿದ್ದ ಶಾಸಕರು ಅವರ ಮನೆಯ ಬಳಿಯೇ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಇದನ್ನೂ ಓದಿ: MLA Pradeep Eshwar: ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಜನತೆಯ ಅಹವಾಲು ಆಲಿಸಿದ ಶಾಸಕ ಪ್ರದೀಪ್ ಈಶ್ವರ್
ಈ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ಒಂದಷ್ಟು ಮಂದಿ ಪಡಿತರ ಚೀಟಿ ಸಮಸ್ಯೆ ಪರಿಹರಿಸಿ (ರೇಷನ್ ಕಾರ್ಡ್), ಪಿಂಚಣಿ ಸೌಲಭ್ಯ ಒದಗಿಸಿ, ಕುಡಿಯುವ ನೀರಿನ ತೊಂದರೆ ಪರಿಹಾರದ ಮಾರ್ಗೋ ಪಾಯ ತೋರಿ, ಶಾಲಾ ಮಕ್ಕಳಿಗೆ ಆಟದ ಮೈದಾನದ ಸಮಸ್ಯೆಯಿದೆ. ಅದನ್ನು ಪರಿಹರಿಸಿ, ಮಳೆಗಾಲ ಶುರುವಾಗಿದೆ ವಸತಿಯಿಲ್ಲದವರಿಗೆ ಸೂರು ನೀಡಿ ಪುಣ್ಯಕಟ್ಟಿಕೊಳ್ಳಿ, ನಮ್ಮ ಮಕ್ಕಳಿಗೆ ಹಾಸ್ಟೆಲ್‌ನಲ್ಲಿ ಸೇರಿಸಲು ಸಮಸ್ಯೆಯಿದೆ.ಅದನ್ನು ಪರಿಹರಿಸಿ ಎಂದು ಮನವಿ ಮಾಡಿದರು.
ಇನ್ನೊಂದಷ್ಟು ಮಂದಿ ಸರ್ಕಾರದ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ತಮಗಿರುವ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಗ್ರಾಮಸ್ಥರ ಅಹವಾಲುಗಳನ್ನು ಅತ್ಯಂತ ತಾಳ್ಮೆ ಯಿಂದ ಆಲಿಸಿದ ಶಾಸಕರು, ಸ್ಥಳದಲ್ಲಿದ್ದ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಆಹಾರ ಪೂರೈಕೆ ಶಿರಸ್ಥೇದಾರ್, ಕಂದಾಯ,ಅರಣ್ಯ ಇಲಾಖೆ ಸೇರಿ 33 ಇಲಾಖೆ ಅಧಿಕಾರಿಗಳಿಗೆ ಪರಿಹಾರ ಮಾಡುವಂತೆ ಸೂಚನೆ ನೀಡಿದರು.
ಪಿಂಚಣಿ, ಹಾಸ್ಟೆಲ್ ಸಮಸ್ಯೆ, ಪಡಿತರ ಸಮಸ್ಯೆ,ಕುಡಿಯುವ ನೀರು ಸೇರಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಕೊಟ್ಟರು. ಬಾಕಿ ಇರುವ ಇತರೆ ಸಮಸ್ಯೆಗಳನ್ನು ಆದಷ್ಟು ಬೇಗ ಕಾಲಮಿತಿಯಲ್ಲಿ ಬಗೆಹರಿಸುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ನಾನು ಶಾಸಕ ನಾದ ಮೂಲದಲ್ಲಿಯೇ ಮಾತುಕೊಟ್ಟಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ ಕಡಗಣನೆಗೆ ಒಳಗಾಗಿರುವ ಮೂಲಸೌಕರ್ಯಗಳಿಂದ ವಂಚಿತರಾದ ಗಡಿಭಾಗದ ಹಳ್ಳಿಗಳ ಪುರೋಭಿವೃದ್ದಿಗೆ ಮೊದಲ ಆಧ್ಯತೆ ನೀಡಲಾಗುವುದು. ಮತದಾರರೇ ನನ್ನ ಪಾಲಿನ ದೇವರು. ಪ್ರಾಮಾಣಿಕವಾಗಿ ಅವರ ಸೇವೆ ಮಾಡಲು ನನಗೆ ದೊರೆತಿರುವ ಅವಕಾಶವನ್ನು ಬಳಸಿಕೊಂಡಿ ದ್ದೇನೆ ಎಂದರು.
ಕ್ಷೇತ್ರದ ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸುವ ಭಾಗ ವಾಗಿಯೇ ನಾಗರಬಾವಿ ಹಾಗೂ ದೇವರಕೊಂಡಹಳ್ಳಿ ಗ್ರಾಮಗಳ ದಶಕಗಳ ರಸ್ತೆ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು 3 ಕೋಟಿ ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು. ಕಳಪೆ ಕಾಮಗಾರಿ ಆಗುತ್ತಿದೆ ಎಂದು ಕಂಡು ಬಂದಲ್ಲಿ ಕೂಡಲೇ ಕೆಲಸ ನಿಲ್ಲಿಸಿ, ನನಗೆ ಕರೆ ಮಾಡಿ, ಆಗ ಗುಣಮಟ್ಟದ ಕೆಲಸಕ್ಕೆ ಆಧ್ಯತೆ ದೊರೆಯಲಿದೆ ಜನತೆಯಲ್ಲಿ ಮನವಿ ಮಾಡಿದರು.
ನಾಗರಬಾವಿ ಗ್ರಾಮದಲ್ಲಿರುವ ಶಿಥಿಲಗೊಂಡಿರುವ ಶಾಲಾಕೊಠಡಿಗಳನ್ನು ಕೆಡವಿ ಹೊಸ ಕಟ್ಟಡ ಕಟ್ಟುವಂತೆ, ಶಾಲೆಗೆ ಕಾಂಫೌಡ್‌ಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಕೂಡಲೇ ಪಿಆರ್‌ಡಿ ವಿಭಾಗಕ್ಕೆ ತಾಕೀತು ಮಾಡಿದ ಶಾಸಕರು ತುರ್ತಾಗಿ ಈ ಕೆಲಸ ಮಾಡಿ ಎಂದು ಮೌಖಿಕ ಆದೇಶ ಮಾಡಿದರು. ಇಷ್ಟೇ ಅಲ್ಲದೆ ಎರಡೂ ಗ್ರಾಮಗಳ ಜನತೆಗೆ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸಲು ಕ್ರಮವಹಿಸುವಂತೆಯೂ ಹೇಳುವ ಮೂಲಕ ನಾಗರಬಾವಿ ಮತ್ತು ದೇವರಕೊಂಡಹಳ್ಳಿ ಗ್ರಾಮಸ್ಥರ ಮೊಗದಲ್ಲಿ ಸಂತೋಷ ಉಕ್ಕುವಂತೆ ಮಾಡಿದರು.
ದೇವರಕೊಂಡಹಳ್ಳಿ ಗ್ರಾಮಸ್ಥರು ನಮ್ಮ ಹಳ್ಳಿಗೆ ಶಾಲೆ ಮಂಜೂರು ಮಾಡಿಕೊಡಬೇಕು. ಶ್ರೀಕೃಷ್ಣ ದೇವಾಲಯ ನಿರ್ಮಾಣ ಮಾಡಿಕೊಡಬೇಕು. ಮನೆಗಳಿಗೆ ದಾರಿಯಿಲ್ಲ, ದಾರಿ ಮಾಡಿಕೊಡಿ ಎಂದು ಮಾಡಿದ ಮನವಿಗೆ ಓಗೊಟ್ಟು ನಿರ್ಮಿಸಿಕೊಡುವ ಭರವಸೆ ನೀಡಿದರು.
ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರöಸುಬ್ರಹ್ಮಣ್ಯೇಶ್ವರ ಸನ್ನಿಧಿಯಿರುವ ಘಾಟಿಗೆ ಈಗಾಗಲೇ ಬರುತ್ತಿರುವ ಬಿಎಂಟಿಸಿ ಬಸ್ಸುಗಳನ್ನು ಮಂಚೇನಹಳ್ಳಿಗೆ ಬಂದು ಹೋಗುವಂತೆ ಮಾಡಿದರೆ ವಿದ್ಯಾರ್ಥಿಗಳು, ಕೃಷಿಕರು, ರೈತರು, ಕೂಲಿ ಕಾರ್ಮಿಕರಿಗೆ, ಸರಕಾರಿ ನೌಕರರಿಗೆ ಅನುಕೂಲ ಆಗುತ್ತದೆ ಎಂದು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ಕೂಡಲೇ ಗಮನಹರಿಸುವುದಾಗಿ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರöಸುಬ್ರಹ್ಮಣ್ಯೇಶ್ವರ ಸನ್ನಿಧಿಯಿರುವ ಘಾಟಿಗೆ ಈಗಾಗಲೇ ಬರುತ್ತಿರುವ ಬಿಎಂಟಿಸಿ ಬಸ್ಸುಗಳನ್ನು ಮಂಚೇನಹಳ್ಳಿಗೆ ಬಂದು ಹೋಗುವಂತೆ ಮಾಡಿದರೆ ವಿದ್ಯಾರ್ಥಿಗಳು, ಕೃಷಿಕರು, ರೈ,ತರು, ಕೂಲಿ ಕಾರ್ಮಿಕರಿಗೆ, ಸರಕಾರಿ ನೌಕರರಿಗೆ ಅನುಕೂಲ ಆಗುತ್ತದೆ ಎಂದು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ಕೂಡಲೇ ಗಮನ ಹರಿಸುವುದಾಗಿ ತಿಳಿಸಿದರು., ಗ್ರಾಮಸ್ಥರು, ಗ್ರಾಮಪಂಚಾಯಿತಿ ಸದಸ್ಯರು ಇದ್ದರು.