ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಕೈವಾರದಲ್ಲಿ ಮೂರು ದಿನಗಳ ಕಾಲ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ಅದ್ಧೂರಿ ಚಾಲನೆ

ಪ್ರಾತ:ಕಾಲದಲ್ಲಿ ದೇವಾಲಯದಲ್ಲಿ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು. ನಂತರ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಮೂರು ದಿನಗಳ ಕಾಲ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ  ಧರ್ಮಾಧಿಕಾರಿಗಳಾದ ಎಂ.ಆರ್. ಜಯರಾಮ್ ದಂಪತಿಗಳು ಕಾರ್ಯಕ್ರಮ ಉದ್ಘಾಟಿಸಿದರು.

ಗುರುಪೂಜಾ ಸಂಗೀತೋತ್ಸವಕ್ಕೆ ಅದ್ಧೂರಿ ಚಾಲನೆ

ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಗುರುಪೂಜಾ-ಸಂಗೀತೋತ್ಸವ ಕಾರ್ಯಕ್ರಮಗಳು ಸುಪ್ರಭಾತ, ಗೋಪೂಜೆ, ಸದ್ಗುರುಗಳ ಪೂಜೆಯೊಂದಿಗೆ ಸೋಮವಾರ ಆರಂಭವಾಯಿತು. -

Profile
Ashok Nayak Jul 27, 2026 9:40 PM

ಚಿಂತಾಮಣಿ : ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಗುರುಪೂಜಾ-ಸಂಗೀತೋತ್ಸವ ಕಾರ್ಯಕ್ರಮಗಳು ಸುಪ್ರಭಾತ, ಗೋಪೂಜೆ, ಸದ್ಗುರುಗಳ ಪೂಜೆಯೊಂದಿಗೆ ಸೋಮವಾರ ಆರಂಭವಾಯಿತು.

ಗುರುಪೂಜಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಸರ್ವಾಲಂಕೃತವಾಗಿ ಅಲಂಕರಿಸಲಾಗಿದೆ. ಮಂಗಳವಾದ್ಯಗಳೊಂದಿಗೆ ಗೋಪೂಜೆ ನೆರವೇರಿಸಿ ತಾತಯ್ಯನವರ ಪ್ರಥಮ ದರ್ಶನ ಪೂಜೆಯನ್ನು ನೆರವೇರಿಸಲಾಯಿತು. ತಾತಯ್ಯನವರ ಮೂಲ ವಿಗ್ರಹವನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.

ಇದನ್ನೂ ಓದಿ: Kaiwara News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ

ಪ್ರಾತ:ಕಾಲದಲ್ಲಿ ದೇವಾಲಯದಲ್ಲಿ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು. ನಂತರ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಮೂರು ದಿನಗಳ ಕಾಲ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ  ಧರ್ಮಾಧಿಕಾರಿಗಳಾದ ಎಂ.ಆರ್. ಜಯರಾಮ್ ದಂಪತಿಗಳು ಕಾರ್ಯಕ್ರಮ ಉದ್ಘಾಟಿಸಿದರು.

ಮೊದಲಿಗೆ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ಅವರ ನೇತೃತ್ವದಲ್ಲಿ ಸಂಕೀರ್ತನೆ ಯನ್ನು ಸಮರ್ಪಿಸಲಾಯಿತು. ಧರ್ಮಾಧಿಕಾರಿಗಳ ಸಂಕೀರ್ತನೆಯ ನಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿದ್ವಾಂಸರುಗಳಿಂದ ಸಂಗೀತ ಸೇವೆ, ಸ್ಥಳೀಯ ನಾದಸ್ವರ, ತವಿಲ್ ವಾದಕ ರಿಂದ ಸಂಗೀತ ಸಮರ್ಪಣೆಯಾಯಿತು.

cbpm10kai

ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಸಂಗೀತ ಕಚೇರಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೃಹತ್ ವೇದಿಕೆ ಹಾಕಲಾಗಿದೆ. ವೇದಿಕೆಯನ್ನು ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಶ್ರೀ ಭೀಮ ಲಿಂಗೇಶ್ವರ ವೇದಿಕೆ ಎಂದು ವಿಂಗಡಿಸಿ ಎರಡು ಬದಿಯಲ್ಲಿ ಸಂಗೀತಗಾರರು ಕುಳಿತು ಸಂಗೀತ ಸಮರ್ಪಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಭಜನಾ ತಂಡಗಳವರು ತಂಡ. ತಂಡವಾಗಿ ಆಗಮಿಸುತ್ತಿದ್ದಾರೆ.

ಮಧ್ಯಾಹ್ನ ನಡೆದ ಸಂಗೀತ ಕಾರ್ಯಕ್ರಮಗಳಲ್ಲಿ ಡಾ.ಶ್ರೀನಿವಾಸ್, ಟಿ.ಮಹಾತ್ಮಾಂಜನೇಯ ತಂಡ, ಎಸ್.ವಿ.ರಾಮಮೂರ್ತಿ ತಂಡ, ಕೆ.ಬೃಂದಾ ಶೈಲಜಾ ತಂಡ, ಸುಬ್ರಮಣಿ ತಂಡ, ಮಾಲೂರು ಮಂಜುನಾಥ್ ತಂಡ, ವಿದ್ಯಾ ಲತಾ, ಸಿ.ಆರ್.ನಟರಾಜ್, ಜಿ.ಎಸ್.ಬ್ರಹ್ಮೇಂದ್ರ. ವಿ.ಮಾನಸ ಕರಪನಹಳ್ಳಿ, ಸಿ.ಕಿಶೋರ್‌ಕುಮಾರ್ ಮುಂತಾದವರು ಸಂಗೀತ ಸಮರ್ಪಣೆ ಮಾಡಿದರು.

cbpm10jn

ಸಂಜೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ದೆಹಲಿಯ ಸರಸ್ವತಿ ರಾಜಗೋಪಾಲನ್ ರವರಿಂದ ವೀಣಾವಾದನ, ಕೆ.ಕೆ.ಭಾನುಪ್ರಕಾಶ್ ಮೃದಂಗ, ಎಂ.ಕೆ.ವಾಸವಿ ಘಟಂ, ಮಹಾಲಿಂಗಯ್ಯ ಮಠದ್ ತಂಡದವರಿAದ ಗಾಯನ , ಬೆಂಗಳೂರಿನ ವಿನಯ್‌ಶರ್ವ ಹಾಗೂ ತಿರುಪತಿಯ ಬಿ.ರಘುನಾಥ್ ರವರುಗಳಿಂದ ಗಾಯನ, ವಿ.ಗೋವರ್ಧನ್ ಪಿಟೀಲು, ಕೆ.ಎಸ್.ಪ್ರಶಾಂತ್ ಮೃದಂಗ, ಗಿರಿನಾಥ್ ಪಿಟೀಲು, ವೇಣುಗೋಪಾಲ್ ತಬಲ ಕಾರ್ಯಕ್ರಮಗಳು ನಡೆಯಿತು.

ಎರಡನೇ ದಿನದ ಕಾರ್ಯಕ್ರಮಗಳು: (28.7.26 ಮಂಗಳವಾರ)

ಬೆಳಿಗ್ಗೆ ನಾದಸ್ವರ ವಾದನಗಳನ್ನು ಎರ್ಪಡಿಸಲಾಗಿದೆ. ಎಂ.ವೇಣುಮಾಧವ್, ವಿ.ಭಾಗ್ಯಲಕ್ಷ್ಮೀ, ಡಾ||ಎಂ.ವಿ.ಶ್ರೀನಿವಾಸಮೂರ್ತಿ, ಹೆಚ್.ಎನ್.ಶ್ರೀನಿವಾಸ್ ತಂಡ, ನಿಖಿತಾ ಮೋಕ್ಷಗುಂಡಂ ತಂಡ, ಎನ್.ಎಸ್.ವೇಣುಗೋಪಾಲ್ ತಂಡ, ಈ.ರಾಮಕೃಷ್ಣಾಚಾರ್, ಬಿ.ರಾಮಚಂದ್ರ, ಜಿ.ವೇಣುಗೋಪಾಲ್, ಕೆ.ಎಸ್.ಶ್ವೇತಾ, ಸಿ.ಸೋಮಶೇಖರ್, ಡಾ.ಅಶ್ವಿನಿ ಮೋಹನ್, ಬಿ.ಅಮರಶ್ರೀ ನಾಗಾರ್ಜುನ್, ಆಶಾಮಂಜುನಾಥ್, ವಿಷ್ಣು ವೆಂಕಟೇಶ್, ಮುರಳಿ, ಮೀರಾ ವಿಜಯ್ ಕುಮಾರ್ ತಂಡ, ಜಯಲಕ್ಷ್ಮೀ ಭಟ್, ಕಮಲಾದೀಪ್ತಿ, ಎ.ವಿ.ವಿಶ್ವನಾಥ್, ಕೆ.ಎಸ್.ನಾಗಭೂಷಣಯ್ಯ, ಕೃಷ್ಣ ಹೊಸೂರು, ರೇವತಿ ಕಾಮತ್ ಮುಂತಾದವರಿಂದ ಸಂಗೀತ ಕಾರ್ಯಕ್ರಮವಿರುತ್ತದೆ.

ಸಂಜೆ ವಿಶೇಷ ಕಾರ್ಯಕ್ರಮಗಳು: ಜು.28 ರಂದು  ಸುಮಂತ್ ಹಾಗೂ ಮಾಳವಿರವರಿಂದ ಪಿಟೀಲು ಸೋಲೋ, ಶಂಕರ್ ನಂಬೂದರಿ ರವರಿಂದ ಗಾಯನ, ಅಮಿತ್ ಎ.ನಾಡಿಗ್ ರವರಿಂದ ಕೊಳಲುವಾದನ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದವರಿಂದ ಗಾಯನ, ಹೈದ್ರಾಬಾದ್‌ನ ಎಸ್.ಎಂ.ಸುಭಾನಿರವರಿಂದ ಮ್ಯಾಂಡೋಲಿನ್ ವಾದನ, ನೂಪುರ ಫೈನ್ ಆರ್ಟ್ಸ್ ರೂಪಾರಾಜೇಶ್ ತಂಡದವರಿಂದ ಕೂಚಿಪುಡಿ ನೃತ್ಯವನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.