Chikkaballapur News: ಕೋರ್ಟಿನ ಮೂಲಕ ನ್ಯಾಯ ಪಡೆದ ಶಿಕ್ಷಕರಿಗೆ ನೇಮಕಾತಿ ಪತ್ರ ವಿತರಿಸಿದ ಡಿಡಿಪಿಐ
ಮಂಗಳವಾರ ನಡೆದ ದಾಖಲಾತಿ ಪರಿಶೀಲನೆಯಲ್ಲಿ ಲವಲವಿಕೆಯಿಂದ ಭಾಗಿಯಾದ 10 ಮಂದಿ ಪದವೀಧರ ಶಿಕ್ಷಕಿಯರು ಸರಾಸರಿ 3 ವರ್ಷಗಳ ಸುಧೀರ್ಘ ಕಾನೂನು ಸಂಘರ್ಷದ ವನವಾಸದಿಂದ ಹೊರ ಬಂದು ಸುಪ್ರಿಂಕೋಟ್ ಮೂಲಕ ತಮ್ಮ ಬದುಕಿಗೆ ಬೇಕಾದ ಬೆಳಕನ್ನು ಪಡೆದುಕೊಂಡಿದ್ದು ಎಲ್ಲರಿಗೂ ಮಾದರಿಯಂತಿದೆ.
ಕೋರ್ಟಿನ ಆದೇಶದಂತೆ ಜಿಲ್ಲೆಯಲ್ಲಿ ನೇಮಕಾತಿ ಹೊಂದಿದ ಪದವೀಧರ ಶಿಕ್ಷಕರ ಮತ್ತು ಡಿಡಿಪಿಐ ಅವರ ಗುಂಪುಚಿತ್ರ -
ಚಿಕ್ಕಬಳ್ಳಾಪುರ: ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ 2022-23ರಲ್ಲಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳ ಕಾರಣ ಹೊರಗುಳಿದಿದ್ದ ಸರಿ ಸುಮಾರು 400 ಮಂದಿ ಟಿಜಿಟಿ ಶಿಕ್ಷಕರಿಗೆ ಮಂಗಳ ವಾರ ನೇಮಕಾತಿ ಪ್ರಕ್ರಿಯೆ ನಡೆದಿದ್ದು ಜಿಲ್ಲೆಯಲ್ಲಿ 10 ಮಂದಿ ಶಿಕ್ಷಕರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಸ್ಥಳ ನಿಯುಕ್ತಿ ಮಾಡಿಕೊಂಡು ಶಿಕ್ಷಕರ ನೇಮಕಾತಿ ಪತ್ರ ಪಡೆಯುವ ಮೂಲಕ 3 ವರ್ಷ ಗಳ ವನವಾಸಕ್ಕೆ ಎಳ್ಳುನೀರು ಬಿಟ್ಟರು.
ಹೌದು. ಮಂಗಳವಾರ ನಡೆದ ದಾಖಲಾತಿ ಪರಿಶೀಲನೆಯಲ್ಲಿ ಲವಲವಿಕೆಯಿಂದ ಭಾಗಿಯಾದ 10 ಮಂದಿ ಪದವೀಧರ ಶಿಕ್ಷಕಿಯರು ಸರಾಸರಿ 3 ವರ್ಷಗಳ ಸುಧೀರ್ಘ ಕಾನೂನು ಸಂಘರ್ಷದ ವನವಾಸದಿಂದ ಹೊರ ಬಂದು ಸುಪ್ರಿಂಕೋಟ್ ಮೂಲಕ ತಮ್ಮ ಬದುಕಿಗೆ ಬೇಕಾದ ಬೆಳಕನ್ನು ಪಡೆದುಕೊಂಡಿದ್ದು ಎಲ್ಲರಿಗೂ ಮಾದರಿಯಂತಿದೆ.
ಇದನ್ನೂ ಓದಿ: Chikkaballapur News: ಇದು ಸಾಧನಾ ಸಮಾವೇಶ ಅಲ್ಲ ವೇದನಾ ಸಮಾವೇಶ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ
ಇವರು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯಲು ಪ್ರಧಾನ ಕಾರಣ ಮಧುವೆಯಾಗಿದ್ದರೂ ಗಂಡನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸುವ ಬದಲಿಗೆ ತಂದೆಯ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದೇ ಆಗಿತ್ತು. ಅಂತಿಮವಾಗಿ ಹೆಣ್ಣುಮಕ್ಕಳು ಮಧುವೆಯಾಗಿ ಗಂಡನಮನೆಗೆ ಹೋದರೂ ತಂದೆಯ ಜಾತಿ ಪ್ರಮಾಣ ಪತ್ರವೇ ಆಕೆಯ ಗುರುತನ್ನು ನಿರ್ಧರಿಸುತ್ತದೆ ಎಂದು ತೀರ್ಪಿತ್ತ ಪರಿಣಾಮ ಮತ್ತೆ ಉದ್ಯೋಗಕ್ಕೆ ಸೇರುವಂತಾಗಿರುವುದು ವಿಚಿತ್ರವಾದರೂ ಸತ್ಯ..
ಏನಿದು ಕೋರ್ಟ್ ಕಥೆ!!!
2022-23ನೇ ಶೈಕ್ಷಣಿಕ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ 400 ಮಂದಿ ಶಿಕ್ಷಕರನ್ನು ಕೆಲವು ತಾಂತ್ರಿಕ ದೋಷಗಳಾದ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳ ವಿವಾದ ಬೆನ್ನತ್ತಿತ್ತು. ಇದಿರಂದಾಗಿ ಅರ್ಹ ಒಬಿಸಿ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತು. ಅರ್ಹ ಅಭ್ಯರ್ಥಿಗಳು ಇದನ್ನು ಪ್ರಶ್ನಿಸಿ ಕೆಎಟಿ ಕದ ತಟ್ಟಿ ನ್ಯಾಯ ಕೋರಿದ್ದರು. ಅಲ್ಲಿಂದ ಹೈಕೋರ್ಟ್ಗೆ ಹೋಯಿತು. ಅಲ್ಲಿಯೂ ನೇಮಕಾತಿಗೆ ಅಸ್ತು ಎಂದಿದ್ದರೂ ಇದನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ನಲ್ಲಿ ಮತ್ತೆ ಪ್ರಕರಣ ದಾಖಲಾ ಗಿತ್ತು. ಸುಪ್ರಿಂಕೋರ್ಟ್ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಪರಿಣಾಮ ರಾಜ್ಯಾದ್ಯಂತ ಏಕಕಾಲಕ್ಕೆ 400 ಶಿಕ್ಷಕರಿಗೆ ಕೌನ್ಸೆಲಿಂಗ್ ಮೂಲಕ ಮಂಗಳವಾರ ಆದೇಶ ಪತ್ರ ನೀಡಲಾಯಿತು. ಈ ಪೈಕಿ ಜಿಲ್ಲೆಯಲ್ಲಿ 10 ಮಂದಿ ಟಿಜಿಟಿ ಶಿಕ್ಷಕರು ಸ್ಥಳವನ್ನು ಆಯ್ಕೆ ಮಾಡಿಕೊಂಡು ಸಂತಸ ವ್ಯಕ್ತಪಡಿಸಿ ದರು.
![]()
ಟಿಜಿಟಿ ಶಿಕ್ಷಕರ ನೇಮಕಾತಿ ಆದೇಶ ಕೆಲವು ತಾಂತ್ರಿಕ ಅಂಶಗಳ ಕಾರಣವಾಗಿ ಕೋರ್ಟಿನ ಮೆಟ್ಟಿ ಲೇರಿತ್ತು. ಪ್ರಧಾನವಾಗಿ ಗಂಡಂದಿರ ಆದಾಯ, ತಂದೆಯ ಆದಾಯ ಇವೆರಡಲ್ಲಿ ಯಾವುದನ್ನು ಪರಿಗಣಿಸಬೇಕು ಎಂಬ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದು ಅಂತಿಮವಾಗಿ ಸುಪ್ರಿಂಕೋರ್ಟ್ ತಂದೆಯ ಆದಾಯ ಮತ್ತು ಜಾತಿ ಪರಿಗಣಿಸಲು ಸೂಚನೆ ನೀಡಿತ್ತು. ನಮ್ಮ ಜಿಲ್ಲೆಗೆ 10 ಮಂದಿ ಶಿಕ್ಷಕರ ನೇಮಕಾತಿಗೆ ಅವಕಾಶ ನೀಡಿತ್ತು. ಪರಿಣಾಮ ಮಂಗಳವಾರ ಕೌನ್ಸೆಲಿಂಗ್ ನಡೆಸಿ ಅವರಿಗೆ ಶಾಲೆಯನ್ನು ಆಯ್ಕೆ ಮಾಡಿ ನೇಮಕಾತಿ ಆದೇಶ ನೀಡಲಾಗಿದೆ.
-ವಿ.ರಮೇಶ್. ಡಿಡಿಪಿಐ ಚಿಕ್ಕಬಳ್ಳಾಪುರ.
![]()
2022-23ರಲ್ಲಿ ನಡೆದ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ 481 ಮಂದಿ ಅಭ್ಯರ್ಥಿಗಳು ಮಧುವೆಯಾಗಿದ್ದರೂ ತಂದೆಯ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಿ ನೇಮಕಾತಿ ಆಗಿರುತ್ತಾರೆ. ಇದೇ ಕಾರಣಕ್ಕೆ ನಮ್ಮನ್ನು ಕೌನ್ಸೆಲಿಂಗ್‌ನಿAದ ಹೊರಗಿಟ್ಟಿದ್ದರು.ಇದನ್ನು ಪ್ರಶ್ನಿಸಿ ನಾವು ಕೆಎಟಿ, ಹೈಕೋರ್ಟ್ ಸುಪ್ರಿಂಕೋರ್ಟ್ವರೆಗೂ ಹೋಗಿ ನ್ಯಾಯ ಕೇಳಿದ್ದೆವು.ಅಲ್ಲಿ ತಂದೆಜಾತಿ ಆದಾಯ ಪ್ರಮಾಣ ಪತ್ರ ಪರಿಗಣಿಸಲು ಸೂಚನೆ ನೀಡಿದ್ದರು. ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಿತು. ಡಿಡಿಪಿಐ ಕಛೇರಿಯಲ್ಲಿ ನಡೆದ ಕೌನ್ಸೆಲಿಂಗ್ ಪಾರದರ್ಶಕವಾಗಿ ನಡೆದು ಶಾಲೆಗಳ ಆಯ್ಕೆ ಮಾಡಿ ಕೊಂಡು ನೇಮಕಾತಿ ಆದೇಶ ಪಡೆದಿದ್ದೇವೆ.ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿದ ಡಿಡಿಪಿಐ ರಮೇಶ್ ಮತ್ತು ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಮೂಲಕ ನಮಗೆ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಯಿತು.
-ಕಲಾವತಿ ಪೆರೇಸಂದ್ರ ಶಾಲೆಗೆ ನೇಮಕವಾದ ಟಿಜಿಟಿ ಶಿಕ್ಷಕಿ