ಯಶು ಸೇವಾ ಟ್ರಸ್ಟ್ ನಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ವಿತರಣೆ
ಮಕ್ಕಳ ಶಿಕ್ಷ ಣಕ್ಕೆ ಪೂರಕ ವಾತಾವರಣ ನಿರ್ಮಿಸುವ ಸಾಮಾಜಿಕ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಗುಣಮಟ್ಟದ ಶಿಕ್ಷ ಣ ದೊರೆತರೆ ಅವರು ಉತ್ತಮ ಸಾಧನೆ ಮಾಡಬಲ್ಲರು. ಸಾಧನೆಗೆ ಬಡತನ ತೊಡಕಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಮನೋಧರ್ಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.
-
ಚಿಂತಾಮಣಿ: ನಾನು ಹಣ ಆಸ್ತಿ ಮಾಡಲು ಸಮಾಜ ಸೇವೆ ಆರಂಭಿಸಿಲ್ಲ ಜನಸೇವೆಯೇ ನನ್ನ ಮುಖ್ಯ ಗುರಿಯಾಗಿದೆ ಎಂದು ಯಶು ಸೇವಾ ಟ್ರಸ್ಟ್ ನ ಅಧ್ಯಕ್ಷ ಮಂಜುನಾಥ್ ರವರು ಹೇಳಿದರು.
ಅವರು ಚಿಂತಾಮಣಿ ತಾಲೂಕಿನ ಕೈವಾರದಲ್ಲಿರುವ ತಮ್ಮ ಕಚೇರಿಯಲ್ಲಿ ವಿವಿಧ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿದ ನಂತರ ಮಾತನಾಡಿದ ಅವರು ನಾನು ತುಂಬಾ ಬಡತನದಲ್ಲಿ ವಿದ್ಯಾಭ್ಯಾಸ ಕಲಿತು ಬಂದವನು, ಇಂದಿನಿಂದ ನನ್ನ ಸೇವೆಗೆ ಚಾಲನೆ ನೀಡಿದ್ದು,ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನು ಹೆಚ್ಚಾಗಿ ಮಾಡಲು ನಿರ್ಧರಿಸಿದ್ದೇನೆ ಇದಕ್ಕೆ ಪ್ರತಿಯೊಬ್ಬ ನಾಗರಿಕರು ಸಹಕರಿಸಬೇಕೆಂದು ಕೋರಿದರು.
ಇದನ್ನೂ ಓದಿ: BBC Chief Resign: ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಟ್ರಂಪ್ ಭಾಷಣ ತಿರುಚಿದ ಆರೋಪ: ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳ ತಲೆದಂಡ
ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಮೂಲಕ ಬಡತನದ ಮೂಲ ಕಾರಣಗಳನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು.
ಮಕ್ಕಳ ಶಿಕ್ಷ ಣಕ್ಕೆ ಪೂರಕ ವಾತಾವರಣ ನಿರ್ಮಿಸುವ ಸಾಮಾಜಿಕ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಗುಣಮಟ್ಟದ ಶಿಕ್ಷ ಣ ದೊರೆತರೆ ಅವರು ಉತ್ತಮ ಸಾಧನೆ ಮಾಡಬಲ್ಲರು. ಸಾಧನೆಗೆ ಬಡತನ ತೊಡಕಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಮನೋಧರ್ಮವನ್ನು ಎಲ್ಲರೂ ಬೆಳೆಸಿ ಕೊಳ್ಳಬೇಕು. ಹುಟ್ಟು ಮುಖ್ಯವಲ್ಲ. ಆದರೆ ಹುಟ್ಟಿದ ವ್ಯಕ್ತಿ ಹೇಗೆ ಬದುಕುತ್ತಾನೆ ಎಂಬುದು ಮುಖ್ಯ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಸಾಧನೆಗೈದ ಹಲವರು ನಮ್ಮ ನಡುವೆ ಉತ್ತಮ ಸಾಧನೆ ಮಾಡಿದ್ದಾರೆ. ಉತ್ತಮ ಪರಿಸರ ಎಂತಹ ಕ್ರೂರಿಯನ್ನಾದರೂ ಸಜ್ಜನನ್ನಾಗಿಸುತ್ತದೆ. ಅಂತಹ ಪೂರಕ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸೋಣ ಎಂದರು.
ಈ ಸಂದರ್ಭದಲ್ಲಿ ವರಲಕ್ಷ್ಮಿ, ನಾರಾಯಣಸ್ವಾಮಿ, ನಿತಿನ್, ಅಭಿ, ಶ್ರೀಕಾಂತ್, ಮನಿ, ವಿನೋದ್, ಪವನ್, ಅಜಯ್ ಸೇರಿದಂತೆ ಮತ್ತಿತರರು ಇದ್ದರು.