ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ನಿವೃತ್ತ ನೌಕರರ ಸಂಘಕ್ಕೆ ಸಂಗೀತ ಪರಿಕರಗಳ ಕೊಡುಗೆ

ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಸುಮಾರು ₹40 ಸಾವಿರ ಮೌಲ್ಯದ ಹಾರ್ಮೋನಿಯಂ, ತಬಲಾ ಸೇರಿದಂತೆ ವಿವಿಧ ಸಂಗೀತ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯ ಸಂದರ್ಭದಲ್ಲಿ ಪರಿಕರಗಳನ್ನು ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಅವರಿಗೆ ಹಸ್ತಾಂತರಿಸಲಾಯಿತು.

ನಿವೃತ್ತ ನೌಕರರ ಸಂಘಕ್ಕೆ ಸಂಗೀತ ಪರಿಕರಗಳ ಕೊಡುಗೆ

-

Profile
Ashok Nayak Aug 12, 2026 4:48 PM

ಚಿಂತಾಮಣಿ: ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಸುಮಾರು ₹40 ಸಾವಿರ ಮೌಲ್ಯದ ಹಾರ್ಮೋ ನಿಯಂ, ತಬಲಾ ಸೇರಿದಂತೆ ವಿವಿಧ ಸಂಗೀತ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯ ಸಂದರ್ಭದಲ್ಲಿ ಪರಿಕರಗಳನ್ನು ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಅವರಿಗೆ ಹಸ್ತಾಂತರಿಸಲಾಯಿತು.

ಇದನ್ನೂ ಓದಿ: Chinthamani News: ಮಾದಕ ದ್ರವ್ಯ ಜಾಲಕ್ಕೆ ಕಠಿಣ ಚಾಟಿ: ನೂರಾನಿ ಮಸೀದಿ ಕಮಿಟಿ ಎಚ್ಚರಿಕೆ

ಕೊಡುಗೆ ಸ್ವೀಕರಿಸಿ ಮಾತನಾಡಿದ ನಾರಾಯಣಸ್ವಾಮಿ, ಸಂಘದಲ್ಲಿ ಹಲವು ಗಾನ ಕಲಾವಿದರು, ಸಂಗೀತಕಾರರು ಹಾಗೂ ಪಕ್ಕವಾದ್ಯ ಕಲಾವಿದರಿದ್ದು, ನಿವೃತ್ತಿಯ ನಂತರದ ಬಿಡುವಿನ ಸಮಯ ವನ್ನು ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಪರಿಕರಗಳು ಸಹಕಾರಿಯಾಗಲಿವೆ ಎಂದರು.

ಈ ಸಂದರ್ಭದಲ್ಲಿ ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆಯ ಡಾ.ಎಂ.ವಿಜಯ, ಸಿ.ವೆಂಕಟರಾಮಪ್ಪ, ವಕೀಲೆ ಎನ್.ಶೋಭಾ ಹಾಗೂ ಸಂಘಕ್ಕೆ ₹10 ಸಾವಿರ ಮೌಲ್ಯದ ನೀರು ಶುದ್ಧೀಕರಣ ಯಂತ್ರವನ್ನು ಕೊಡುಗೆಯಾಗಿ ನೀಡಿದ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಎಂ.ಶಿವರಾಂ ಸೇರಿದಂತೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.

ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದಾನಿಗಳ ಉದಾರತೆಯನ್ನು ಶ್ಲಾಘಿಸಿದರು.