Actress Aditi Prabhudev: ಶಿಕ್ಷಣವೇ ಎಲ್ಲ ವಿಮೋಚನೆಗಳ ಪ್ರಬಲ ಅಸ್ತ್ರವಾಗಿದೆ : ಚಲನಚಿತ್ರ ನಟಿ ಅದಿತಿ ಪ್ರಭುದೇವ್
ಸಂಕಲ್ಪ ಎಂಬ ದಿಕ್ಸೂಚಿ ಹೇಳಿಕೆಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ದೃಢ ಸಂಕಲ್ಪದಿAದ ಹೊರ ಹೊಮ್ಮುವ ಸಾಧನೆಗಳನ್ನು ಈ ಕಾರ್ಯಕ್ರಮವು ತೆರೆದಿಡುತ್ತಿದೆ. ಸಂಕಲ್ಪ ಎಂದರೆ ವ್ಯಕ್ತಿಯ ಸಮಗ್ರ ಪರಿವರ್ತನೆಯ ಉದ್ದೇಶಕ್ಕಾಗಿ ವ್ಯಕ್ತಿಯಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳ. ಪೂರ್ಣ ಮನಸ್ಸು, ಅದಮ್ಯ ಇಚ್ಛಾಶಕ್ತಿ, ಸಂಯಮ ಮತ್ತು ಆತ್ಮವಿಶ್ವಾಸದಿಂದ ಅಂತರಂಗದ ಸಾಮರ್ಥ್ಯ ಗಳು ಸಹಜವಾಗಿ ಹೊರ ಹೊಮ್ಮಬೇಕು.
ತಾಲ್ಲೂಕಿನ ಪೆರೇಸಂದ್ರದ ಶಾಂತ ಶಿಕ್ಷಣ ಸಂಸ್ಥೆಯ ಶಾಂತ ವಿದ್ಯಾನಿಕೇತನದ ೧೫ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಲನಚಿತ್ರ ತಾರೆ ಅದಿತಿ ಪ್ರಭುದೇವ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು. -
ಚಿಕ್ಕಬಳ್ಳಾಪುರ: ಪ್ರತಿಯೊಂದು ಮಗುವಿನಲ್ಲಿಯೂ ಕೂಡ ವಿಶಿಷ್ಟ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಶಾಂತ ಸಂಸ್ಥೆಯು ಉದಾತ್ತ ರೀತಿಯಲ್ಲಿ ಮಾಡುತ್ತಿದೆ ಎಂದು ಚಲನಚಿತ್ರ ನಟಿ ಅದಿತಿ ಪ್ರಭುದೇವ್(Sandalwood Actress Aditi Prabhudev) ತಿಳಿಸಿದರು.
ತಾಲ್ಲೂಕಿನ ಪೆರೇಸಂದ್ರದ ಶಾಂತ ಶಿಕ್ಷಣ ಸಂಸ್ಥೆಯ ಶಾಂತ ವಿದ್ಯಾನಿಕೇತನದ 15ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣಕ್ಕಿಂತ ದೊಡ್ಡ ಶಕ್ತಿ ಯಾವುದು ಇಲ್ಲ, ಮಕ್ಕಳಿಗೆ ಗುಣಮಟದ ಶಿಕ್ಷಣ ನೀಡುವುದರಿಂದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಅಭಿವೃದ್ಧಿ ಪಥದತ್ತ ಅವರನ್ನು ಮುನ್ನಡೆಸಿ ಸುಂದರ ಸಮಾಜ ನಿರ್ಮಿಸಬಹುದು. ಇಂತಹ ದೂರ ದೃಷ್ಟಿ ಉದ್ದೇಶಕ್ಕಾಗಿ ಪ್ರತಿಯೊಬ್ಬರು ಸಂಕಲ್ಪ ಮಾಡ ಬೇಕೆಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Sandalwood Actress Sudharani: ಹೊಸ ಪೀಳಿಗೆಯ ಮೇಕೊ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ
ಯಶಸ್ಸು ಆಕಸ್ಮಿಕವಲ್ಲ, ಯಶಸ್ಸಿನೆಡೆಗೆ ನಡೆಯುವ ದಾರಿಯ ಸಂಕಲ್ಪ, ಅಚಲ ವಿಶ್ವಾಸ ಹಾಗೂ ಸಮಯ ಪ್ರಜ್ಞೆಯೇ ಅತ್ಯಂತ ಮುಖ್ಯ ಎಂದು ಶಾಂತ ಶಿಕ್ಷಣ ಸಂಸ್ಥೆಗಳ ಧರ್ಮದರ್ಶಿ ಡಾ. ಪ್ರೀತಿ ಸುಧಾಕರ್ ಅಭಿಪ್ರಾಯಪಟ್ಟರು.
ಸಂಕಲ್ಪ ಎಂಬ ದಿಕ್ಸೂಚಿ ಹೇಳಿಕೆಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ದೃಢ ಸಂಕಲ್ಪ ದಿಂದ ಹೊರ ಹೊಮ್ಮುವ ಸಾಧನೆಗಳನ್ನು ಈ ಕಾರ್ಯಕ್ರಮವು ತೆರೆದಿಡುತ್ತಿದೆ. ಸಂಕಲ್ಪ ಎಂದರೆ ವ್ಯಕ್ತಿಯ ಸಮಗ್ರ ಪರಿವರ್ತನೆಯ ಉದ್ದೇಶಕ್ಕಾಗಿ ವ್ಯಕ್ತಿಯಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳ. ಪೂರ್ಣ ಮನಸ್ಸು, ಅದಮ್ಯ ಇಚ್ಛಾಶಕ್ತಿ, ಸಂಯಮ ಮತ್ತು ಆತ್ಮವಿಶ್ವಾಸದಿಂದ ಅಂತರಂಗದ ಸಾಮರ್ಥ್ಯ ಗಳು ಸಹಜವಾಗಿ ಹೊರ ಹೊಮ್ಮಬೇಕು. ತರಗತಿಯಲ್ಲಿ ಕಲಿಯುವ ಪುಟ್ಟ ಮಕ್ಕಳು ನಾಳಿನ ಯಶಸ್ವಿ ಸಾಧಕರಾಗಿ ಪರಿವರ್ತನೆಗೊಳ್ಳಬೇಕಾಗಿದೆ. ಈ ಸಂಕಲ್ಪ ಮಕ್ಕಳಿಗೆ ಮಾತ್ರವಲ್ಲ, ಮಕ್ಕಳೊಂದಿಗೆ ಗುರುವೃಂದ, ಪೋಷಕರು, ಆಡಳಿತ ಮಂಡಳಿ, ಇಡೀ ಸಮಾಜ ಸಂಕಲ್ಪ ತೊಡಗ ಬೇಕು ಎಂದರು.
ಈ ವೇದಿಕೆ ಅತ್ಯಂತ ಆಧುನಿಕವಾಗಿ ರೂಪಿಸಿ ಜಗಮಗಿಸುವ ದೀಪಗಳಿಂದ ರಂಜಿಸಿದೆ. ವೇದಿಕೆಯ ಕೇಂದ್ರ ಬಿಂಧುಗಳಾದ ನಮ್ಮ ಮಕ್ಕಳು ಕನಸು ಕಟ್ಟಿಕೊಳ್ಳುತ್ತಿರುವ ನಕ್ಷತ್ರಗಳಾಗಿ ವೇದಿಕೆಯ ಸೌಂದರ್ಯವನ್ನು ಹೆಚ್ಚಿಸುವ ಮೂಲಕ ಮಕ್ಕಳು ಪರಿವರ್ತನೆಗೆ ಮುನ್ನುಡಿ ಬರೆಯುತ್ತಿದ್ದಾರೆ. ಪ್ರತಿ ಮಗುವಿನ ಸುಪ್ತಶಕ್ತಿ ಅಪರಿಮಿತವಾದದು. ಮಕ್ಕಳೆಲ್ಲ ಒಗ್ಗೂಡಿ ಸಂಕಲ್ಪ ಮಾಡುವುದರಿಂದ ನಾಳಿನ ಪರಿವರ್ತನೆಗೆ ಇದು ಸಂಚಲನ ಸೃಷ್ಟಿಸುತ್ತದೆ. ವಿದ್ಯಾರ್ಥಿ ಜಗತ್ತಿನ ಪ್ರೀತಿಗಳಿಸಿದ ಮಾಜಿ ರಾಷ್ಟ್ರಪತಿ ಎ ಪಿ ಜೆ. ಅಬ್ದುಲ್ ಕಲಾಂ ಶಿಕ್ಷಕರಾಗಿ ಇಡಿ ವಿಶ್ವಕ್ಕೆ ಆದರ್ಶವಾಗಿದ್ದು, ತಲೆಮಾರುಗಳಿಗೆ ಅವರ ಪ್ರಭಾವ ಬೀರುತ್ತಿದ್ದಾರೆ. ಕಲಾಂ ರವರು ನಡೆದ ದಾರಿಯನ್ನು ಶಿಕ್ಷಕರಾದ ನಾವು ಅರ್ಥ ಮಾಡಿಕೊಳ್ಳೋಣ ಎಂದರು.
ಮಕ್ಕಳ ಉನ್ನತಿಯಲ್ಲಿ ಮನೆ ಮತ್ತು ತಂದೆ ತಾಯಿಯರ ಪಾತ್ರ ಅತ್ಯಂತ ಮುಖ್ಯ. ಪ್ರೀತಿ, ಚಾರಿತ್ರ್ಯ, ಮೌಲ್ಯಗಳ ಬೆಳವಣಿಗೆ ಕುಟುಂಬವೇ ಪ್ರೇರಣೆ. ಪೋಷಕರ ಸಹಕಾರದಿಂದ ಮಾತ್ರ ಮಕ್ಕಳನ್ನು ಉದಾತ್ತ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ. ಶಾಂತ ಸಂಸ್ಥೆಯ ಸ್ಥಾಪನೆಗೆ ವಿಶಿಷ್ಟ ಪ್ರೇರಣೆ ಮತ್ತು ಕನಸು ಇದ್ದು ಮಕ್ಕಳಲ್ಲಿಕುತೂಹಲ ಮೂಡಿಸಿ ಚಾರಿತ್ರ್ಯ ನಿರ್ಮಾಣ, ಸಾಮರ್ಥ್ಯ ಬೆಳವಣಿಗೆ, ಸೃಜನಶೀಲತೆ ಬೆಳೆಸುವುದು ಸಂಸ್ಥೆಯ ಆಶಯವಾಗಿದ್ದು ಈ ಸಂಕಲ್ಪ ಸಾಧನೆಗಾಗಿ ಪೋಷಕರು ಮತ್ತುಗುರುವೃಂದ ಒಗ್ಗೂಡಿ ಸಹಕರಿಸಬೇಕೆಂದು ವಿನಂತಿಸಿದರು.
ಶಾಲಾ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದ ಪ್ರಾಂಶುಪಾಲ ಡಾ. ಪ್ರಸಾದ ಅಪ್ಪಲ್ಲ ಮಾತ ನಾಡಿ, ಪೋಷಕರು ಶಾಲೆಗೆ ನೀಡುತ್ತಿರುವ ಸಹಕಾರಕ್ಕೆ ನಾವು ಋಣಿಯಾಗಿದ್ದೇವೆ. ನಿಮ್ಮ ಸಹಕಾರ ವನ್ನು ನಿಮ್ಮ ಮಕ್ಕಳನ್ನು ಬೆಳೆಸುವ ಮೂಲಕ ಮರು ಕಟ್ಟಿ ಕೊಡುತ್ತೇವೆಂದು ಪೋಷಕರಿಗೆ ಭರವಸೆ ನೀಡಿದರು.
ಅತ್ಯಂತ ಆಧುನಿಕವಾಗಿ ರೂಪಿಸಿದ ವರ್ಣರಂಜಿತ ಧ್ವನಿ ಬೆಳಕಿನ ಕಲ್ಪನಾ ಲೋಕದಲ್ಲಿ ಅನಾವರಣಗೊಂಡ ದೇಶದ ಆಧ್ಯಾತ್ಮ, ಶಿಕ್ಷಣ, ಹೋರಾಟ, ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿ ಕೊಡುವ ಮಕ್ಕಳ ಕಾರ್ಯಕ್ರಮಗಳು ಸಭಿಕರನ್ನು ಬೆರುಗುಗಳಿಸಿದವು.
ಕಾರ್ಯಕ್ರಮದಲ್ಲಿಶಾಂತ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿರಂಗಪ್ಪ, ಶಾಂತಾ ಶಿಕ್ಷಣ ಸಂಸ್ಥೆಗಳ ಡೀನ್ ಮತ್ತು ಪ್ರಾಂಶುಪಾಲ ಡಾ.ನವೀನ್ ಸೈಮನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ,ಸೇವಕ ಮನೋಹರ, ಪ್ರೊ.ನರೇಶ್ ಕುಮಾರ್, ಡಯಾನ, ಶಿಕ್ಷಕರಾದ ರಂಗರಾಜನ್, ವೆಂಕಟೇಶ, ಕಲೀವುಲ್ಲಾ, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್, ಸಂದೇಶ್ ಆಡಳಿತ ಅಧಿಕಾರಿ ಕೆನಿತ್, ವಿತ್ತಾಅಧಿಕಾರಿ ಶರವಣ, ಕಲ್ಯಾಣಿ ಮತ್ತಿತರರು ಇದ್ದರು.