Chikkaballapur News: ಮಕ್ಕಳ ಭವಿಷ್ಯ ರೂಪಿಸುವ ಪ್ರಯತ್ನ ವ್ಯರ್ಥವಲ್ಲ: ಸಾಯಿ ಶ್ಯೂರ್ ಬೆಂಬಲಿಸುವ ಸರ್ಕಾರದ ನಿರ್ಧಾರಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಶ್ಲಾಘನೆ
'ಸಾಯಿ ಶ್ಯೂರ್ ಪೋಷಕಾಂಶ ಮಿಶ್ರಣ ಪುಡಿಯ ಉತ್ಪಾದನೆ ಮತ್ತು ಸಾಗಣೆ ವೆಚ್ಚದ ಕಾಲು ಭಾಗವನ್ನು ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ. ಈ ಯೋಜನೆ ಆರಂಭವಾಗಿ ೧೦ ವರ್ಷಗಳಾದ ನಂತರ ನಡೆದಿರುವ ಬೆಳವಣಿಗೆ ಇದು. ಸರ್ಕಾರದ ಈ ಉಪಕ್ರಮಕ್ಕಾಗಿ ವೇದಿಕೆಯ ಮೇಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಸೇರಿ ಹಲವರನ್ನು ಅಭಿನಂದಿಸಬೇಕಿದೆ'

-

ಚಿಕ್ಕಬಳ್ಳಾಪುರ: 'ಮುದ್ದೇನಹಳ್ಳಿಯ 'ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್' ಮೂಲಕ ರಾಜ್ಯದ ೫೫ ಲಕ್ಷ ಮಕ್ಕಳಿಗೆ ವಿತರಿಸುತ್ತಿರುವ ಸಾಯಿ ಶ್ಯೂರ್ ಪೌಷ್ಟಿಕಾಂಶ ಪುಡಿಯು ಹಲವು ಮಕ್ಕಳ ಆರೋಗ್ಯ ಸುಧಾರಿಸಲು ನೆರವಾಗಿದೆ. ಮಕ್ಕಳಿಗೆ ಸದೃಢ ಭವಿಷ್ಯ ರೂಪಿಸಲು ಮಾಡುವ ಯಾವುದೇ ವೆಚ್ಚ ಎಂದಿಗೂ ವ್ಯರ್ಥವಲ್ಲ' ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ವಿಶ್ವ ಸಾಂಸ್ಕೃತಿಕ ಉತ್ಸವ ೨೦೨೫' ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದ ಅವರು 'ಸಾಯಿ ಶ್ಯೂರ್ ಪೋಷಕಾಂಶ ಮಿಶ್ರಣ ಪುಡಿಯ ಉತ್ಪಾದನೆ ಮತ್ತು ಸಾಗಣೆ ವೆಚ್ಚದ ಕಾಲು ಭಾಗವನ್ನು ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ. ಈ ಯೋಜನೆ ಆರಂಭವಾಗಿ ೧೦ ವರ್ಷಗಳಾದ ನಂತರ ನಡೆದಿರುವ ಬೆಳವಣಿಗೆ ಇದು. ಸರ್ಕಾರದ ಈ ಉಪಕ್ರಮಕ್ಕಾಗಿ ವೇದಿಕೆಯ ಮೇಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಸೇರಿ ಹಲವರನ್ನು ಅಭಿನಂದಿಸಬೇಕಿದೆ' ಎಂದು ಶ್ಲಾಘಿಸಿದರು.
ಸರ್ಕಾರ, ಸಮಾಜ ಮತ್ತು ಸಂಸ್ಥೆಗಳು ಒಗ್ಗೂಡಿ ಶ್ರಮಿಸಿದರೆ ಮಾತ್ರ ಸಮಾಜದ ಅಭ್ಯುದಯ ಸಾಧ್ಯ. ಒಂದು ಸಮಾಜದಲ್ಲಿರುವ ಎಲ್ಲರೂ ತಮ್ಮತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದರೆ ದೇಶ ಪ್ರಗತಿ ಸಾಧಿಸುತ್ತದೆ. ವಾಣಿಜ್ಯೋದ್ಯಮಗಳನ್ನು ನಿರ್ವಹಿಸುವುದೂ ಸಹ ಸಮಾಜ ಸೇವೆಯೇ ಆಗಿದೆ. ಉದ್ಯೋಗ ಸೃಷ್ಟಿ, ಆರ್ಥಿಕ ವಹಿವಾಟಿನ ಮೂಲಕ ಸಮಾಜದ ಪ್ರಗತಿಗೆ ಉದ್ಯಮಿಗಳು ಕಾರಣ ರಾಗುತ್ತಾರೆ. ಒಂದು ಸಮಾಜ ಸದೃಢವಾಗಿರಬೇಕಾದರೆ ಎಲ್ಲ ಮುಖಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ವಿವರಿಸಿದರು.
ಇದನ್ನೂ ಓದಿ: Chikkaballapur News: ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್
ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿ ಯಪ್ಪ, 'ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಈಗ ಎಲ್ಲರ ದೇವರಾಗಿದ್ದಾರೆ (ಯೂನಿ ವರ್ಸಲ್ ಗಾಡ್). ಒಂದೇ ವರ್ಷದಲ್ಲಿ ೩೫೦ ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವುದು ಸಣ್ಣ ಸಾಧನೆ ಯಲ್ಲ. ಈಗ ಅವರು ೬೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಒಂದೇ ವರ್ಷದಲ್ಲಿ ನಿರ್ಮಿಸು ತ್ತಿದ್ದಾರೆ. ಶೀಘ್ರದಲ್ಲಿಯೇ ಈ ಸ್ಥಳದಲ್ಲಿ ಒಟ್ಟು ೧೦೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳು ಕಾರ್ಯ ನಿರ್ವಹಿಸಲಿವೆ. ಹೀಗಾಗಿಯೇ ನಾನು ಇವರನ್ನು ಎಲ್ಲರ ದೇವರು ಎಂದು ಕರೆದದ್ದು' ಎಂದು ಪ್ರಶಂಸಿಸಿದರು.
ಕರ್ನಾಟಕ ಸರ್ಕಾರವು ಹಾಲು ಕೊಡುತ್ತಿದೆ. ಅದಕ್ಕೆ ಬೆರೆಸಲು ಸ್ವಾಮೀಜಿ ಸಾಯಿ ಶ್ಯೂರ್ ಪೌಷ್ಟಿ ಕಾಂಶ ಪುಡಿ ಕೊಡುತ್ತಿದ್ದಾರೆ. ನಾವು ಒಂದು ಸರ್ಕಾರವಾಗಿ ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಸ್ವಾಮಿಗಳು ಪವಾಡದಂತೆ ಇದನ್ನು ನಿರ್ವಹಿಸುತ್ತಿದ್ದಾರೆ. ನಮ್ಮ ಸರ್ಕಾರವು ಸದಾ ಸ್ವಾಮೀಜಿ ಪರವಾಗಿಯೇ ಇದೆ. ದುರಾದೃಷ್ಟವಶಾತ್ ನಾವು ಸ್ವಾಮೀಜಿಗೆ, ಟ್ರಸ್ಟ್ಗೆ ಯಾವುದೇ ಸಹಾಯ ಮಾಡಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಕರ್ನಾಟಕದ ೨೪ ಜಿಲ್ಲಾ ಕೇಂದ್ರಗಳಲ್ಲಿ ಸತ್ಯ ಸಾಯಿ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಉತ್ತಮ ಸಂಸ್ಕಾರ ಪಡೆದ ಈ ಮಕ್ಕಳು ಮುಂದೆ ದೇಶ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಲಿದ್ದಾರೆ. ಮುದ್ದೇನಹಳ್ಳಿ ಸಂಸ್ಥೆಯಲ್ಲಿ ತಯಾರಾದ ಮಕ್ಕಳು ದೇಶ ಕಟ್ಟಿದರೆ ದೇಶವು ಚೆನ್ನಾಗಿಯೇ ಇರುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಪ್ರಶಾಂತ್ ಪ್ರಕಾಶ್ ಅವರಿಗೆ ಜಾಗತಿಕ ನಾಯಕತ್ವ ಪುರಸ್ಕಾರ
'ವಿಶ್ವ ಸಾಂಸ್ಕೃತಿಕ ಉತ್ಸವ'ದಲ್ಲಿ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ' ಪುರಸ್ಕಾರವನ್ನು ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಅವರಿಗೆ ನೀಡಿ ಗೌರವಿಸಲಾಯಿತು. ಹಲವು ನವೋದ್ಯಮಗಳಿಗೆ ಮಾರ್ಗದರ್ಶನ ಮಾಡಿರುವ ಪ್ರಶಾಂತ್ ಪ್ರಕಾಶ್ ಅವರು ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣರಾಗಿದ್ದಾರೆ. ಅವರಿಗೆ ಇತ್ತೀಚೆಗೆ ಪದಶ್ರೀ ಪುರಸ್ಕಾರ ವೂ ಸಂದಿದೆ.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಪ್ರಕಾಶ್, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸತ್ಯ ಸಾಯಿ ಗ್ರಾಮವನ್ನು ಆರೋಗ್ಯ ಹಬ್ ಆಗಿ ರೂಪಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೂ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ. ಇಂತಹ ಸ್ಥಳವನ್ನು ಹಿಂದೆAದೂ ನೋಡಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅನ್ನಪೂರ್ಣ ಟ್ರಸ್ಟ್ನ ಮುಂಜಾನೆ ಪೌಷ್ಟಿಕ ಆಹಾರ ಯೋಜನೆಗೆ ಬೆಂಬಲ ನೀಡುತ್ತಿರುವ ವೆಟ್ಟಿಯಲ್ ಪ್ಯಾಕೇಜ್ ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ೨೦೨೫' ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಚೆರಿಯನ್ ಪುರಸ್ಕಾರ ಸ್ವೀಕರಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಮೊರಾಕೋದ ಲೈಲಾ ಮಿಫ್‌ಡೇಲ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ' ಪುರಸ್ಕಾರವನ್ನು ನೀಡಲಾಯಿತು.
ಲಿಬಿಯಾ ಪ್ರತಿನಿಧಿಗಳಾದ ಮೊಹಮ್ಮದ್ ಎಮಾದ್, ಮೊರಾಕೊ ದೇಶದ ಸಂಗೀತ ಕಲಾವಿದೆ ಜೋಹರಾ, ಸಿನಿಮಾ ನಿರ್ದೇಶಕಿ ಫಾತಿಮಾ ಜೈರಾ ಮೆಫ್ತಾಲಿ ಭಾಗವಹಿಸಿದ್ದರು.