ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರುವ ಗುರುಗಳು ಸದಾ ಅಭಿನಂದನೆಗೆ ಅರ್ಹರಾಗಿರುತ್ತಾರೆ : ಉಪನ್ಯಾಸಕ ಅರಿಕೆರೆ ಎಂ. ಮುನಿರಾಜು ಅಭಿಮತ

ಉತ್ತಮ ಶಿಕ್ಷಕರು ಯುವ ಸಮೂಹದ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಅಡಿಪಾಯ ಹಾಕು ತ್ತಾರೆ. ಬೋಧನೆಗಿಂತ ಬದುಕು ಕಟ್ಟಲು ಮುಂದಾಗುತ್ತಾರೆ. ಹೀಗಾಗಿ ಇಂತಹ ಶಿಕ್ಷಕರನ್ನು ವಿದ್ಯಾರ್ಥಿಗಳು ಸದಾ ಗೌರವಿಸುತ್ತಾರೆ.ಶಿಕ್ಷಕರ ದಿನಾಚರಣೆಯನ್ನು ಯಾಂತ್ರಿಕವಾಗಿ ಆಚರಿಸುವುದಕ್ಕಿಂತ ಅರ್ಥ ಪೂರ್ಣವಾಗಿ ಆಚರಿಸಿದರೆ ಮಾತ್ರ ಕಾರ್ಯಕ್ರಮಕ್ಕೆ ಬೆಲೆ ಬರಲಿದೆ

ಬಾಳಿಗೆ ಬೆಳಕಾಗುವ ಶಿಕ್ಷಕರು ಸಮಾಜದಿಂದ ಸದಾ ಅಭಿನಂದನೆಗೆ ಅರ್ಹರು

ವಿದ್ಯಾರ್ಥಿಗಳ ಬದುಕಿಗೆ ದಾರಿತೋರುವ ಗುರುಗಳು ಸದಾ ಅಭಿನಂದನೆಗೆ ಅರ್ಹರಾಗಿರುತ್ತಾರೆ  ಎಂದು ಉಪನ್ಯಾಸಕ ಅರಿಕೆರೆ ಎಂ. ಮುನಿರಾಜು ತಿಳಿಸಿದರು. -

Ashok Nayak Ashok Nayak Sep 7, 2025 1:11 AM

ಚಿಕ್ಕಬಳ್ಳಾಪುರ: ಹುಸಿ ಆದರ್ಶಗಳ ಬೆನ್ನೇರಿ ವಿದ್ಯಾರ್ಥಿಗಳ ಬದುಕು ಬರಡಾಗಿಸುವುದಕ್ಕಿಂತ, ಸಮ ಸಮಾಜದ ಆಶಯಗಳನ್ನು ಅವರ ಎದೆಯಲ್ಲಿ ಬಿತ್ತುತ್ತಾ, ವರ್ತಮಾನದ ಕಹಿಸತ್ಯಗಳಿಗೆ ಮುಖಾ ಮುಖಿಯಾಗಿಸುವ ಮೂಲಕ ಅವರ ಬಾಳಿಗೆ ಬೆಳಕಾಗುವ ಶಿಕ್ಷಕರು ಸಮಾಜದಿಂದ ಸದಾ ಅಭಿನಂದ ನೆಗೆ ಅರ್ಹರಾಗಿರುತ್ತಾರೆ ಎಂದು ಹಿರಿಯ ಅತಿಥಿ ಉಪನ್ಯಾಸಕ ಅರಿಕೆರೆ ಎಂ ಮುನಿರಾಜು ತಿಳಿಸಿದರು.

ನಗರದ ಮಹಾಕಾಳಿ ರಸ್ತೆಯಲ್ಲಿರುವ  ಎಲ್.ಇ.ಎಫ್ ಬ್ಯಾಂಕಿAಗ್ ಕೋಚಿಂಗ್ ಸೆಂಟರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಮಕ್ಕಳ ಭವಿಷ್ಯ ರೂಪಿಸುವ ಪ್ರಯತ್ನ ವ್ಯರ್ಥವಲ್ಲ: ಸಾಯಿ ಶ್ಯೂರ್ ಬೆಂಬಲಿಸುವ ಸರ್ಕಾರದ ನಿರ್ಧಾರಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಶ್ಲಾಘನೆ

ಸರ್ವೆಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಉತ್ತಮ ಶಿಕ್ಷಕರು ಯುವ ಸಮೂಹದ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಅಡಿಪಾಯ ಹಾಕುತ್ತಾರೆ. ಬೋಧನೆಗಿಂತ ಬದುಕು ಕಟ್ಟಲು ಮುಂದಾಗುತ್ತಾರೆ. ಹೀಗಾಗಿ ಇಂತಹ ಶಿಕ್ಷಕರನ್ನು ವಿದ್ಯಾರ್ಥಿಗಳು ಸದಾ ಗೌರವಿಸುತ್ತಾರೆ.ಶಿಕ್ಷಕರ ದಿನಾಚರಣೆಯನ್ನು ಯಾಂತ್ರಿಕವಾಗಿ ಆಚರಿಸುವುದಕ್ಕಿಂತ ಅರ್ಥ ಪೂರ್ಣವಾಗಿ ಆಚರಿಸಿದರೆ ಮಾತ್ರ ಕಾರ್ಯಕ್ರಮಕ್ಕೆ ಬೆಲೆ ಬರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ವಿ.ಜಿ. ಸತ್ಯನಾರಾಯಣ ಮಾತನಾಡಿ ಶಿಕ್ಷಣವು ಕೇವಲ ಅಂಕಪಟ್ಟಿಗೆ ಸೀಮಿತವಾಗಿರದೆ ಉದ್ಯೋಗ ನೀಡುವ ಮೂಲಕ ದೇಶ ಕಟ್ಟುವ ಕಾಯಕ ಮಾಡಬೇಕು. ಇಂತಹ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವ ಎಲ್‌ಇಎಪ್ ಸಂಸ್ಥೆ ಅಭಿನಂದ ನಾರ್ಹವಾಗಿದೆ. ತರಬೇತಿ ನಿರತ ವಿದ್ಯಾರ್ಥಿಗಳು ಶಿಕ್ಷಕರಿಗೆ ಸಲ್ಲಿಸುವ ಉದ್ದೇಶದಿಂದ ಏರ್ಪಡಿಸಿ ರುವ ಕಾರ್ಯಕ್ರಮವು ಸದಾ ಸ್ಮರಣಿಯವಾಗಿರಲಿದೆ ಎಂದರು.

ಕಾರ್ಯಕ್ರಮದಲ್ಲಿ ತರಬೇತಿ ನಿರತ ವಿದ್ಯಾರ್ಥಿಗಳು ಗುರುಗಳಿಗೆ, ಪ್ರಾಂಶುಪಾಲರಿಗೆ, ತರಬೇತಿ ನೀಡುವ ಶಿಕ್ಷಕರಿಗೆ ಹೂಗುಚ್ಚ ನೀಡಿ, ಕೇಕ್ ಕತ್ತರಿಸಿ ಸಿಹಿ ತಿನ್ನಿಸುವ ಮೂಲಕ ವಿಶಿಷ್ಟವಾಗಿ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ತರಬೇತುದಾರರಾದ  ಶಿವಕುಮಾರ್, ರಾಘವೇಂದ್ರ, ಸುರೇಖಾ, ಸಂಗೀತ, ತರಬೇತಿ ನಿರತ ವಿದ್ಯಾರ್ಥಿಗಳು ಹಾಜರಿದ್ದರು.