ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chintamani News: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಶ್ರೀನಿವಾಸಲು ಈ ಸಂಘವನ್ನು ಪುನಶ್ಚೇತನ ಗೊಳಿಸಿ ಪದಾಧಿಕಾರಿ ಗಳಿಗೆ ಹಸಿರು ಶಾಲು ಹೊದಿಸಿ ಸಂಘಟನೆ ಸದಸ್ಯರನ್ನಾಗಿ ನೇಮಕ ಮಾಡಿ ಜವಾಬ್ದಾರಿ ವಹಿಸಿದರು. ರಾಜ್ಯ ಸರ್ಕಾರ ಕೂಡಲೇ ಕುಡಿಯಲು ಹಾಗೂ ವ್ಯವಸಾಯಕ್ಕೆ ಹೆಚ್ಎನ್ ವ್ಯಾಲಿ ಮತ್ತು ಕೆ ಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಬೇಕು, ಮೂರನೇ ಹಂತದ ಶುದ್ಧೀಕರಣ ಗೊಳಿಸಬೇಕು ಮತ್ತು ಎತ್ತಿನಹೊಳೆ ನೀರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ

ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

-

Ashok Nayak
Ashok Nayak Dec 16, 2025 11:35 PM

ಚಿಂತಾಮಣಿ: ನಗರದ ಬಂಬೂ ಬಜಾರ್ ನಲ್ಲಿರುವ ಸತ್ಯನಾರಾಯಣರವರ ಅವರೆಕಾಳು ಮಿಲ್ಟ್ ಸಮೀಪ ಇರುವಂತಹ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಚೇರಿ ಉದ್ಘಾಟನೆ ಹಾಗೂ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಶ್ರೀನಿವಾಸಲು ಈ ಸಂಘವನ್ನು ಪುನಶ್ಚೇತನಗೊಳಿಸಿ ಪದಾಧಿಕಾರಿ ಗಳಿಗೆ ಹಸಿರು ಶಾಲು ಹೊದಿಸಿ ಸಂಘಟನೆ ಸದಸ್ಯರನ್ನಾಗಿ ನೇಮಕ ಮಾಡಿ ಜವಾಬ್ದಾರಿ ವಹಿಸಿದರು.

ರಾಜ್ಯ ಸರ್ಕಾರ ಕೂಡಲೇ ಕುಡಿಯಲು ಹಾಗೂ ವ್ಯವಸಾಯಕ್ಕೆ ಹೆಚ್ಎನ್ ವ್ಯಾಲಿ ಮತ್ತು ಕೆ ಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಬೇಕು, ಮೂರನೇ ಹಂತದ ಶುದ್ಧೀಕರಣ ಗೊಳಿಸಬೇಕು ಮತ್ತು ಎತ್ತಿನ ಹೊಳೆ ನೀರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡು ತ್ತೇವೆ ಎಂದು ಈ ಸಂದರ್ಭದಲ್ಲಿ ರೈತ ಸಂಘದ ನೂತನ ಪದಾಧಿಕಾರಿಗಳು ಮಾತನಾಡುತ್ತಾ ಎಚ್ಚರಿಸಿದರು.

ಇದನ್ನೂ ಓದಿ: Chinthamani Crime: ITC ನಕಲಿ ಕಂಪನಿಯ ಸಿಗರೇಟ್ ಮಾರಾಟ: ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ

ನಂತರ ತಾಲೂಕು ಅಧ್ಯಕ್ಷರಾದ ವೆಂಕಟರಾಮಯ್ಯ ಮಾತನಾಡಿ ರಾಜ್ಯ ರೈತ ಸಂಘ ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದೆ,ಗ್ರಾಮ ಪ್ರತಿ ಘಟಕದಲ್ಲೂ ಸಹ ಚುರುಕುಗೊಳ್ಳುತ್ತಿದೆ ಯಾವುದೇ ರೈತರಿಗೆ ತೊಂದರೆಯಾದರೂ ಸಹ ತಕ್ಷಣ ಸ್ಪಂದಿಸಬೇಕು ಗ್ರಾಮ ಘಟಕಕ್ಕೆ ಮೀರಿದ ಸಮಸ್ಯೆಗಳು ಇದ್ದರೆ ತಾಲೂಕು ಹಾಗೂ ಜಿಲ್ಲಾ ಘಟಕಗಳಿಗೆ ಮಾಹಿತಿ ನೀಡಿದರೆ ನಾವು ಸದಾ ನಿಮ್ಮ ಜೊತೆಗಿದ್ದು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಗೌರವಾಧ್ಯಕ್ಷರಾಗಿ ವಿ ಕೆ ಸತ್ಯನಾರಾಯಣ್,ಕಾರ್ಯಾಧ್ಯಕ್ಷರು ನರಸಿಂಹ ರೆಡ್ಡಿ, ಉಪಾಧ್ಯಕ್ಷರಾಗಿ ಮಿಲ್ ನಾರಾಯಣಸ್ವಾಮಿ,ಪ್ರಧಾನ ಕಾರ್ಯದರ್ಶಿ ಬಿ ವಿ ಶ್ರೀ ರಾಮರೆಡ್ಡಿ, ಸಹ ಕಾರ್ಯದರ್ಶಿ ಕೆವಿ ವೆಂಕಟರೆಡ್ಡಿ, ಖಜಾಂಚಿ ನಾರಾಯಣಸ್ವಾಮಿ, ಸಂಚಾಲಕರಾಗಿ ನಾಗರಾಜ್, ಸಂಘಟನಾ ಸಂಚಾಲಕರಾಗಿ ವೆಂಕಟರವಣಪ್ಪ,ಮಹಿಳಾ ಸಂಚಾಲಕಿ ಶಾಂತಮ್ಮ, ಉಪ ಸಂಚಾಲಕರು ವೆಂಕಟರವಣಪ್ಪ,ಸಂಘಟನಾ ಕಾರ್ಯದರ್ಶಿ ವೆಂಕಟೇಶಪ್ಪ ಇವರುಗಳನ್ನು ನೇಮಕ ಮಾಡಿ ಸಂಘಟನೆಯ ಹುದ್ದೆಗಳನ್ನು ನೀಡಲಾಯಿತು.