Bagepally News: ಕುಟುಂಬದ ನೆಮ್ಮದಿ ಮತ್ತು ಜೀವ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ತಪ್ಪದೆ ಹೆಲ್ಮೆಟ್ ಧರಿಸಿ : ಹರಿನಾಥರೆಡ್ಡಿ ಸಲಹೆ
ಪೊಲೀಸರಿಗೆ ಅಥವಾ ದಂಡಕ್ಕೆ ಹೆದರಿ ಹೆಲ್ಮೆಟ್ ಧರಿಸಬೇಡಿ. ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುವ ತಂದೆ-ತಾಯಿ, ಪತ್ನಿ-ಮಕ್ಕಳಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ. ತಲೆಗೆ ಪೆಟ್ಟು ಬಿದ್ದು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹರಿಯಾಣ ದಿಂದ ಐಎಸ್‌ಐ ಮಾರ್ಕ್ ಇರುವ ಉತ್ತಮ ಗುಣಮಟ್ಟದ ಪೂರ್ಣ ಪ್ರಮಾಣದ ಹೆಲ್ಮೆಟ್ ಅನ್ನು ಎಲ್ಲಾ ವಾಹನದ ಸವಾರಿಗೆ ವಿತರಣೆ ಮಾಡಲಾಗುತ್ತದೆ
-
ಬಾಗೇಪಲ್ಲಿ: ಕುಟುಂಬದ ನೆಮ್ಮದಿ ಮತ್ತು ಜೀವ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ತಪ್ಪದೆ ಹೆಲ್ಮೆಟ್ ಧರಿಸಿ ಎಂದು ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ಅದ್ಯಕ್ಷ ಹರಿನಾಥರೆಡ್ಡಿ ಸಲಹೆ ನೀಡಿದರು.
ಅವರು ಬಾಗೇಪಲ್ಲಿ ತಾಲ್ಲೂಕು ಚಾಕವೇಲು, ಪುಲಗಲ್ ಹಾಗೂ ಎಂ.ನಲ್ಲಗುಟ್ಲಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮ್ಮ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಹೆಲ್ಮೆಟ್ ವಿತರಣೆ ಮಾಡಿ ದ್ವಿಚಕ್ರ ವಾಹನ ಸವಾರರಿಗೆ ಜೀವ ರಕ್ಷಕ ಸಾಧನವಾದ ಹೆಲ್ಮೆಟ್‌ನ ಮಹತ್ವ ತಿಳಿಸಿ ಮಾತನಾಡಿದರು.
ಪೊಲೀಸರಿಗೆ ಅಥವಾ ದಂಡಕ್ಕೆ ಹೆದರಿ ಹೆಲ್ಮೆಟ್ ಧರಿಸಬೇಡಿ. ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುವ ತಂದೆ-ತಾಯಿ, ಪತ್ನಿ-ಮಕ್ಕಳಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ. ತಲೆಗೆ ಪೆಟ್ಟು ಬಿದ್ದು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹರಿಯಾಣ ದಿಂದ ಐಎಸ್‌ಐ ಮಾರ್ಕ್ ಇರುವ ಉತ್ತಮ ಗುಣಮಟ್ಟದ ಪೂರ್ಣ ಪ್ರಮಾಣದ ಹೆಲ್ಮೆಟ್ ಅನ್ನು ಎಲ್ಲಾ ವಾಹನದ ಸವಾರಿಗೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಗುಡಿಬಂಡೆ, ಚೇಳೂರು ಬಾಗೇಪಲ್ಲಿ ತಾಲ್ಲೂಕಿನಲ್ಲಿ 50 ಸಾವಿರ ಹೆಲ್ಮೆಟ್'ಗಳನ್ನು ವಿತರಣೆ ಮಾಡುವ ಗುರಿ ಇದೆ. ಇದುವರೆಗೆ ಗುಡಿಬಂಡೆ ಹಾಗೂ ಚೇಳೂರು ತಾಲ್ಲೂಕಿನಲ್ಲಿ ಇದುವರೆಗೆ 30 ಸಾವಿರ ಉಚಿತ ಹೆಲ್ಮೆಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Bagepally News: ಧರ್ಮಸ್ಥಳ ಸಂಸ್ಥೆಯಿಂದ ಅನಾಥ ವೃದ್ಧರಿಗೆ ವಾತ್ಸಲ್ಯ ಕಿಟ್ ವಿತರಣೆ
ಆದುದರಿಂದ, ಎಲ್ಲಾ ದ್ವಿಚಕ್ರ ವಾಹನ ಸವಾರರು ಎಚ್ಚತ್ತುಕೊಂಡು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ಅದ್ಯಕ್ಷ ಹರಿನಾಥರೆಡ್ಡಿ ಕೋರಿದರು.
ತದನಂತರ ಒಕ್ಕಲಿಗ ಸಂಘದ ಮಾಜಿ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮಾತನಾಡಿ ಜನರ ಪ್ರಾಣ ಉಳಿಸಲು ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಹೆಲ್ಮೆಟ್ ವಿತರಣೆಗೆ ಮುಂದಾ ಗಿರುವುದು ಶ್ಲಾಘನೀಯ ಎಂದರು.
ಜೀವ ಸಂಜೀವಿನಿ ಆಗಿರುವ ಹೆಲ್ಮೆಟ್‌ಗಳನ್ನು ಪ್ರತಿಯೊಬ್ಬ ದ್ವಿಚಕ್ರವಾಹನ ಸವಾರರು ಕಡ್ಡಾಯ ವಾಗಿ ತಲೆಗೆ ಧರಿಸಿ ವಾಹನ ಚಾಲನೆ ಮಾಡಬೇಕು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸದಸ್ಯರು ನಿಮ್ಮ ಮೇಲೆ ಆದಾರ ಪಟ್ಟಿರುತ್ತಾರೆ ಅವರಿಗೊಸ್ಕರವಾದರೂ ಹೆಲ್ಮೆಟ್‌ಗಳನ್ನು ಧರಿಸಬೇಕೆಂದು ಮನವಿ ಮಾಡಿದರು.
ದಯವಿಟ್ಟು ಚಿಕ್ಕ ಮಕ್ಕಳಿಗೆ ಹಾಗೂ ವಾಹನ ಲೈಸೆನ್ಸ್ ಇಲ್ಲದವರಿಗೆ ದ್ವಿಚಕ್ರ ವಾಹನ ನೀಡಬೇಡಿ. ಹೆಲ್ಮೆಟ್ ಧರಿಸದೇ ತಲೆಗೆ ಪೆಟ್ಟು ಬಿದ್ದು ಜೀವ ಕಳೆದುಕೊಂಡ ಹೆಚ್ಚಿನ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ದಾಖಲಾಗಿವೆ. ಜೀವ ರಕ್ಷಣೆ ಮತ್ತು ಕುಟುಂಬದ ಭದ್ರತೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ಎನ್.ಡಿ.ಎ.ಮುಖಂಡ ಲಕ್ಷ್ಮಿನಾರಾಯಣ ಮಾತನಾಡಿ, ಸಮಾಜ ಸೇವಕ ಹರಿನಾಥರೆಡ್ಡಿ ತನ್ನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಯೋಜಿಸಿರುವ ಹೆಲ್ಮೆಟ್ ವಿತರಣೆ ಮಾಡುವ ಪವಿತ್ರ ಕಾರ್ಯ ಕ್ರಮವನ್ನು ಶ್ಲಾಘಿಸುತ್ತೇನೆ. ವಯಸ್ಸಿಗೆ ಬಂದ ಮಗನನ್ನು ಜವಾಬ್ದಾರಿ ಹೊತ್ತುವ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಂದೆ, ತಾಯಿಂದಿರ ಆಕ್ರಂಧನ ನೋಡಲು ಸಾಧ್ಯ ವಾಗುವುದಿಲ್ಲ, ಕುಟುಂಬಕ್ಕೆ ಅಸರೆಯಾಗಿರುವ ವ್ಯಕ್ತಿ ಯನ್ನು ಕಳೆದುಕೊಂಡಾಗ ಅಂತಹ ಕುಟುಂಬದ ನೋವು ಮತ್ತು ದುಃಖವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಇಂತಹ ಕುಟುಂಬಗಳ ದುಃಖಕ್ಕೆ ಕಾರಣವಾಗಿ ದ್ವಿಚಕ್ರ ವಾಹನಗಳ ಅಪಘಾತ ಸಮಯದಲ್ಲಿ ಸವಾರನ ಪ್ರಾಣವನ್ನು ರಕ್ಷಿಸಿಕೊಳ್ಳಲು ಆಗತ್ಯವಾಗಿರುವ ಹೆಲ್ಮೆಟ್‌ನ್ನು ಟ್ರಸ್ಟ್ ವತಿಯಿಂದ ವಿತರಿಸಿ ಯುವಕರ ಪ್ರಾಣಕ್ಕೆ ರಕ್ಷಣೆ ನೀಡುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ ಕೆಲಸವಾಗಿದೆ ಎಂದರು.
ಜೆ.ಪಿ.ಚಂದ್ರಶೇಖರ ರೆಡ್ಡಿ ಮಾತನಾಡಿ, ಯುವಕ ಹಾಗೂ ಯುವತಿಯರು ತಮ್ಮ ಇಷ್ಟದ ಮೊಬೈಲ್ ಹಾಳಾಗದಂತೆ ಕವರ್ ಹಾಕಿಸುತ್ತೀರಿ. ಅದಕ್ಕಿಂತ ದೊಡ್ಡದು ನಿಮ್ಮ ಜೀವನ ಉಳಿಸುವ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ರಸ್ತೆ ಅಪಘಾತದಲ್ಲಿ ಶೇ.70 ರಷ್ಟು ಹೆಲ್ಮೆಟ್ ಇಲ್ಲದೆ ಜೀವನ ಕಳೆದುಕೊಂಡಿದ್ದಾರೆ ಆದ್ದರಿಂದ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಿ ಪ್ರಾಣವನ್ನು ಕಾಪಾಡಿಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ಎಸ್.ವೖ. ವೆಂಕಟರವಣಾರೆಡ್ಡಿ, ಗೆಜ್ಜಲ ಕೃಷ್ಣಾರೆಡ್ಡಿ, ಕೆ.ಎನ್.ರಾಮಕೃಷ್ಣಾರೆಡ್ಡಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಭಾಸ್ಕರ್ ರೆಡ್ಡಿ, ಮುಖಂಡರಾದ ಲಕ್ಷ್ಮೀನಾರಾಯಣ, ಅ.ನಾ. ಮೂರ್ತಿ, ಮುರಳಿಧರ್ ಸ್ವಾಮಿ, ವಿನೋದ್ ರೆಡ್ಡಿ, ರಾಮಚಂದ್ರರೆಡ್ಡಿ, ಸುಧಾಕರ, ಮಧುಸೂದನರೆಡ್ಡಿ, ವೆಂಕಟಶಿವಾರೆಡ್ಡಿ, ರೆಡ್ಡೆಪ್ಪ, ವೆಂಕಟೇಶ್, ಶಂಕರ, ಎಸ್.ವಿ. ಗೀತ ಸೇರಿದಂತೆ ಹಲವಾರು ಸಾರ್ವಜನಿಕರು ಹಾಜರಿದ್ದರು.