ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ದೇವೇಗೌಡರ ಆರೋಗ್ಯ ಸುಧಾರಿಸಲೆಂದು ಜೆಡಿಎಸ್‌ನಿಂದ 101 ಈಡುಗಾಯಿ ಹೊಡೆದು ದೇವರ ಮೊರೆ

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ವರಿಷ್ಠರ ಆರೋಗ್ಯ ವಿಚಾರಿಸಿರುವುದು, ಈ ಸಂಬಂಧ ಪೋಟೋ ಗಳು ಹಂಚಿಕೆಯಾಗಿರುವುದು ಸಂತೋಷ ತಂದಿದೆ. ಮಾಜಿ ಪ್ರಧಾನಿಗಳು ಮತ್ತು ಮಾಜಿ ಮುಖ್ಯ ಮಂತ್ರಿಗಳು ಇಬ್ಬರೂ ಕೂಡ ಆರೋಗ್ಯವಾಗಿರುವುದು ಪಕ್ಷಕ್ಕೆ ಆನೆ ತುಂಬಿದಂತಾಗಿದೆ.

ಜೆಡಿಎಸ್‌ನಿಂದ 101 ಈಡುಗಾಯಿ ಹೊಡೆದು ದೇವರ ಮೊರೆ

ಚಿಕ್ಕಬಳ್ಳಾಪುರ ನಗರ ಹೊರವಲಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ದೇವೇಗೌಡರ ಆರೋಗ್ಯ ಸುಧಾರಣೆಗೆ ಆಗ್ರಹಿಸಿ ವಿಶೇಷ ಪೂಜೆ ಹಾಗೂ ಈಡುಗಾಯಿ ಸೇವೆ ಸಲ್ಲಿಸಿದರು. -

Ashok Nayak Ashok Nayak Oct 11, 2025 10:30 PM

ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (Former Prime Minister HD Deve Gowda)ಅವರ ಆರೋಗ್ಯ ಸುಧಾರಣೆಗಾಗಿ 101 ತೆಂಗಿನಕಾಯಿಯ ಈಡುಗಾಯಿ ಹೊಡೆಯುವ ಮೂಲಕ ವೀರಾಂಜನೇಯ ಸ್ವಾಮಿಗೆ ಜಿಲ್ಲಾ ಜೆಡಿಎಸ್ ಮುಖಂಡರು ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆಯಿತು.

ನಗರ ಹೊರವಲಯ ಸೋಲಾಲಪ್ಪನ ದಿನ್ನೆಯಲ್ಲಿರುವ ಶ್ರೀವೀರಾಂಜನೇಯಸ್ವಾಮಿ ದೇವಾಲ ಯದ ಆವರಣದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ೧೦೧ ತೆಂಗಿನಕಾಯಿ ಹೊಡೆಯುವ ಮೂಲಕ ಪಕ್ಷದ ವರಿಷ್ಠರ ಆರೋಗ್ಯ ಸುಧಾರಣೆಗೆ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನೇತೃತ್ವದಲ್ಲಿ ನೂರಾರು ಮುಖಂಡರು ದೇವರಲ್ಲಿ ಪ್ರಾರ್ಥಿಸಿದರು.

ಇದನ್ನೂ ಓದಿ: Chikkaballapur News: ಎಲ್ಲಾ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ

ಈ ವೇಳೆ ಮಾತನಾಡಿದ ಮುಕ್ತ ಮುನಿಯಪ್ಪ ಮಾಜಿ ಉಪಸಭಾಪತಿ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ಸೂಚನೆಯಂತೆ ಜಿಲ್ಲೆಯ ಮುಖಂಡರೆಲ್ಲ ಒಟ್ಟುಗೂಡಿ ಪಕ್ಷದ ವರಿಷ್ಠರಾದ ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಣೆಗಾಗಿ ಭಗವಂತನಲ್ಲಿ  ಪ್ರಾರ್ಥಿಸಿದ್ದೇವೆ. ಕರ್ನಾಟಕಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರ ಸೇವೆ ಅಗತ್ಯವಿರುವಂತೆ, ದೇಶಕ್ಕೆ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡ ಅಪ್ಪಾಜಿಯವರ ಮಾರ್ಗದರ್ಶನ ಬೇಕಾಗಿದೆ.ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವೇಗೌಡರನ್ನು ನಾನಾ ಮುಖಂಡರು ಭೇಟಿ ಮಾಡಿ ಧೈರ್ಯ ತುಂಬಿರುವುದು ಅವರ ಮೇಲಿನ ಪ್ರೀತಿಯ ಧ್ಯೋತಕ ವಾಗಿದೆ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ವರಿಷ್ಠರ ಆರೋಗ್ಯ ವಿಚಾರಿಸಿರುವುದು,ಈ ಸಂಬಂಧ ಪೋಟೋ ಗಳು ಹಂಚಿಕೆಯಾಗಿರುವುದು ಸಂತೋಷ ತಂದಿದೆ. ಮಾಜಿ ಪ್ರಧಾನಿಗಳು ಮತ್ತು ಮಾಜಿ ಮುಖ್ಯ ಮಂತ್ರಿಗಳು ಇಬ್ಬರೂ ಕೂಡ ಆರೋಗ್ಯವಾಗಿರುವುದು ಪಕ್ಷಕ್ಕೆ ಆನೆ ತುಂಬಿದಂತಾಗಿದೆ. ೨೦೨೮ರ ಚುನಾವಣೆಯಲ್ಲಿ ನಮ್ಮ ಪಕ್ಷದ ಶಕ್ತಿಸಾಮರ್ಥ್ಯದ ಅರಿವು ರಾಷ್ಟ್ರೀಯ ಪಕ್ಷಗಳಿಗೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿರಾಜು, ಗೌರಿಬಿದನೂರು ಮುಖಂಡರಾದ ನರಸಿಂಹ ಮೂರ್ತಿ, ಮಂಚೇನಹಳ್ಳಿ ತಾಲೂಕಿನ ಮುಖಂಡರಾದ ಪ್ರಭ ನಾರಾಯಣಗೌಡ, ಚಿಕ್ಕಬಳ್ಳಾಪುರ ನಗರದ ಅಧ್ಯಕ್ಷ ಬಂಡಲು ಶ್ರೀನಿವಾಸ್, ಗೌರಿಬಿದನೂರು ತಾಲೂಕು ಅಧ್ಯಕ್ಷ ಮಂಜುನಾಥ್ ರೆಡ್ಡಿ, ಚಿಂತಾಮಣಿ ತಾಲೂಕು ಅಧ್ಯಕ್ಷ, ಬೈರಾರೆಡ್ಡಿ, ಸ್ಟುಡಿಯೋ ಮಂಜುನಾಥ್ ಇತರೆ ಮುಖಂಡರು ಇದ್ದರು.