ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೌಡಿಶೀಟರುಗಳ ಪರೇಡ್ ನಡೆಸಿ, ಎಚ್ಚರಿಕೆ ನೀಡಿದ ಗೌರಿಬಿದನೂರು ಪೊಲೀಸರು

ಪ್ರತಿಯೊಬ್ಬ ರೌಡಿಶೀಟರ್ʼನನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ, ನಿಮ್ಮ ಪ್ರತಿಯೊಂದು ಮೂಮೆಂಟ್ ನಮಗೆ ತಿಳಿಯುತ್ತಿರುತ್ತದೆ, ನಾನು ಸುಧಾರಣೆಯಾಗಿದ್ದೇನೆ, ಯಾವುದೇ ತಪ್ಪು ಮಾಡು ತ್ತಿಲ್ಲ ಎಂದು ನಿಮಗೆ ನೀವೇ ಸರ್ಟಿಫಿಕೇಟ್ ಕೊಟ್ಟುಕೊಂಡರೆ ಸಾಲದು,ನೀವು ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬದುಕುತ್ತಿದ್ದೀರಾ ಇಲ್ಲವೇ ಎಂಬುದನ್ನು ಗಮನಿಸಿ ನಡವಳಿಕೆಯ ಪ್ರಮಾಣಪತ್ರ ನೀಡಲು ನಾವಿದ್ದೇವೆ.

ರೌಡಿಶೀಟರುಗಳ ಪರೇಡ್, ಎಚ್ಚರಿಕೆ ನೀಡಿದ ಗೌರಿಬಿದನೂರು ಪೊಲೀಸರು

ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ರೌಡಿಶೀಟರುಗಳ ಪರೇಡ್ ನಡೆಸಿ, ಎಚ್ಚರಿಕೆ ನೀಡಲಾಯಿತು. -

Profile
Ashok Nayak Jun 17, 2026 12:08 AM

ಗೌರಿಬಿದನೂರು : ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ಕೃತ್ಯ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ರೌಡಿ ಶೀಟರುಗಳ ಪರೇಡ್ ನಡೆಸಿ, ಎಚ್ಚರಿಕೆ ನೀಡಲಾಯಿತು.

ರೌಡಿಶೀಟರ್‌ಗಳ ಚಟುವಟಿಕೆಗಳನ್ನು ಗಮನಿಸಲು ವಾರವೂ ವಿಶೇಷ ತಂಡವನ್ನು ನಿಯೋಜಿಸ ಲಾಗಿದ್ದು, ಪ್ರತಿಯೊಬ್ಬ ರೌಡಿಶೀಟರ್ʼನನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ, ನಿಮ್ಮ ಪ್ರತಿಯೊಂದು ಮೂಮೆಂಟ್ ನಮಗೆ ತಿಳಿಯುತ್ತಿರುತ್ತದೆ, ನಾನು ಸುಧಾರಣೆಯಾಗಿದ್ದೇನೆ, ಯಾವುದೇ ತಪ್ಪು ಮಾಡು ತ್ತಿಲ್ಲ ಎಂದು ನಿಮಗೆ ನೀವೇ ಸರ್ಟಿಫಿಕೇಟ್ ಕೊಟ್ಟುಕೊಂಡರೆ ಸಾಲದು,ನೀವು ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬದುಕುತ್ತಿದ್ದೀರಾ ಇಲ್ಲವೇ ಎಂಬುದನ್ನು ಗಮನಿಸಿ ನಡವಳಿಕೆಯ ಪ್ರಮಾಣಪತ್ರ ನೀಡಲು ನಾವಿದ್ದೇವೆ.

ಇದನ್ನೂ ಓದಿ: Gauribidanur News: ಛಾಯಾಗ್ರಾಹಕರು ಸಮಾಜದ ಕಣ್ಣುಗಳಾಗಿ ಕೆಲಸ ಮಾಡುತ್ತಿದ್ದಾರೆ: ಕೆಪಿಎ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ್

ಹಳೆಯ ಕೇಸ್ ಮುಗಿದಿದೆ ಎಂದಾಕ್ಷಣ ಪೊಲೀಸರು ಸುಮ್ಮನಿರುವುದಿಲ್ಲ. ಈಗಾಗಲೇ ನಿಮ್ಮೆಲ್ಲರಿಂದ ಬಾಂಡ್ ಪಡೆದುಕೊಳ್ಳಲಾಗಿದೆ. ಇದರ ನಡುವೆಯೂ ಮತ್ತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಹೊಸದಾಗಿ ಪ್ರಕರಣ ದಾಖಲಾದರೆ ನೀವು ಬಾಂಡ್ ಮಾಡಿಸಿರುವ ಮೊತ್ತ ವನ್ನು ಜಪ್ತಿ ಮಾಡಿಕೊಳ್ಳಲಾಗುವುದು. ಅಷ್ಟೇ ಅಲ್ಲದೆ, ಅಂತಹವರನ್ನು ಕಡ್ಡಾಯವಾಗಿ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಯಾರಾದರೂ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಅಥವಾ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪರೇಡ್‌ನಲ್ಲಿ ಹಾಜರಿದ್ದ ಎಲ್ಲಾ ರೌಡಿಶೀಟರ್‌ಗಳ ಪ್ರಸ್ತುತ ಕೆಲಸ, ಜೀವನೋಪಾಯದ ಮಾರ್ಗ, ಕುಟುಂಬದ ಸದಸ್ಯರ ವಿವರಗಳು, ಆಧಾರ್ ಕಾರ್ಡ್ ಸೇರಿದಂತೆ ಪ್ರಸ್ತುತ ವಿಳಾಸದ ದಾಖಲೆಗಳು ಹಾಗೂ ಇತ್ತೀಚಿನ ಇಂಟ್ರೋಗೇಷನ್ ವರದಿಯನ್ನು ಪೊಲೀಸರು ಪಡೆದುಕೊಂಡು, ಸೂಕ್ತ ಮಾಹಿತಿಗಳನ್ನು ನವೀಕರಿಸಿಕೊಂಡರು.

ಈ ಸಂದರ್ಭದಲ್ಲಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಹರೀಶ್, ಪಿಎಸ್‌ಐ ಮಮತಾ, ಮಂಚಿನಹಳ್ಳಿ ಪಿಎಸ್‌ಐ ಪುನೀತ್, ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಲಲಿತಮ್ಮ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.