ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ತಪ್ಪು ಬಚ್ಚಿಟ್ಟುಕೊಳ್ಳಲು ಪೊಲೀಸ್ ಇಲಾಖೆ ದುರ್ಬಳಕೆ: ಸಿ.ಮುನಿರಾಜು ವಿರುದ್ದ ಸುಳ್ಳು ಪ್ರಕರಣ ದಾಖಲು

ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಶಾಸಕ ಸುಬ್ಬಾರೆಡ್ಡಿ ವಿರುದ್ದ ಹೈ ಕೋರ್ಟ್ ನಲ್ಲಿ ಚುನಾವಣಾ ಅಕ್ರಮ ಕುರಿತು ದಾವೆ ಹಾಕಿ ಎರಡು ವರ್ಷಗಳು ಪೂರ್ಣಗೊಂಡಿವೆ. ಶಾಸಕರ ಮೇಲೆ ಇಡಿ ದಾಳಿ ನಡೆದು ತಿಂಗಳು ಆಗದಿದ್ದರೂ ಇಡಿ ದಾಳಿಗೆ ಬಿಜೆಪಿಯ ಮುನಿರಾಜು ಕಾರಣ ಎಂದು ದೂರಿನಲ್ಲಿ ಸುಳ್ಳು ವಿಳಾಸ ಸಲ್ಲಿಸಿದ್ದಾರೆ.

ತಪ್ಪು ಬಚ್ಚಿಟ್ಟುಕೊಳ್ಳಲು ಪೊಲೀಸ್ ಇಲಾಖೆ ದುರ್ಬಳಕೆ

Ashok Nayak Ashok Nayak Jul 21, 2025 11:16 PM

ಬಾಗೇಪಲ್ಲಿ: ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಇಡಿ ದಾಳಿಗೆ ತುತ್ತಾಗಿರುವ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ತನ್ನ ತಪ್ಪುಗಳನ್ನು ಬಚ್ಚಿಟ್ಟುಕೊಳ್ಳಲು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ದ್ದಾರೆಂದು ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್ ಶಾಸಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ.

ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮೇಲೆ ನಡೆದಿರುವ ಇಡಿ ದಾಳಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಕಾರಣ ಎಂದು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಸಿ.ಮುನಿರಾಜು ವಿರುದ್ದ ಪ್ರಕರಣ ದಾಖಲು ಮಾಡಿಸಿರುವ ಶಾಸಕ ಸುಬ್ಬಾರೆಡ್ಡಿಯ ನಡೆ ಅಧಿಕಾರ ದುರ್ಬಳಕೆ ಹಾಗೂ ಸತ್ಯವನ್ನು ಮರೆಮಾಚುವ ಕುತಂತ್ರದ ಭಾಗವಾಗಿದೆ. ಇಡಿ ದಾಳಿಗೆ ಬಿಜೆಪಿ ಮುನಿರಾಜು ಕಾರಣ ಎಂದು ಹೇಳಲು ನಿಮ್ಮ ಬಳಿ ದಾಖಲೆ ಇದ್ದರೆ ಮಾಧ್ಯಮಗಳಿಗೆ ಬಿಡುಗಡೆ ಗೊಳಿಸಿ ಎಂದು ಶಾಸಕ ಸುಬ್ಬಾರೆಡ್ಡಿಗೆ ಬಿಜೆಪಿ ಮುಖಂಡರು ಕಾರ್ಯಕರ್ತರ ಸಭೆ ಮೂಲಕ ಸವಾಲ್ ಎಸೆದಿದ್ದಾರೆ.

ಇದನ್ನೂ ಓದಿ: Chikkaballapur News: ಜು.18ಕ್ಕೆ "ಭೋವಿ ಜನೋತ್ಸವ" ಅಂಗವಾಗಿ ಪ್ರತಿಭಾ ಪುರಸ್ಕಾರ

ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್ ಮಾತನಾಡಿ, ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಶಾಸಕ ಸುಬ್ಬಾರೆಡ್ಡಿ ವಿರುದ್ದ ಹೈ ಕೋರ್ಟ್ ನಲ್ಲಿ ಚುನಾವಣಾ ಅಕ್ರಮ ಕುರಿತು ದಾವೆ ಹಾಕಿ ಎರಡು ವರ್ಷಗಳು ಪೂರ್ಣಗೊಂಡಿವೆ. ಶಾಸಕರ ಮೇಲೆ ಇಡಿ ದಾಳಿ ನಡೆದು ತಿಂಗಳು ಆಗದಿದ್ದರೂ ಇಡಿ ದಾಳಿಗೆ ಬಿಜೆಪಿ ಮುನಿರಾಜು ಕಾರಣ ಎಂದು ದೂರಿನಲ್ಲಿ ಸುಳ್ಳು ವಿಳಾಸ ಸಲ್ಲಿಸಿದ್ದಾರೆ. ನಕಲಿ ಮೊಬೈಲ್ ನಂಬರ್ ಉಲ್ಲೇಖ ಮಾಡಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಸಿ ಸುಳ್ಳನ್ನು ಸತ್ಯವನ್ನಾಗಿ ಬಿಂಬಿಸುತ್ತಿದ್ದೀರಾ, ಕಾಂಗ್ರೆಸ್ ಶಾಸಕರ ಮೇಲೆ ನಡೆದಿರುವ ಇಡಿ ದಾಳಿಗೆ ಬಿಜೆಪಿಯ ಮುನಿರಾಜು ಕಾರಣ ಎಂದು ಶಾಸಕರು ಒಂದು ದಾಖಲೆ ಬಿಡುಗಡೆ ಮಾಡಿ ದರೂ ಅವರ ಹೇಳಿಕೆಯಲ್ಲಿ ಸತ್ಯ ಇದೆ ಎಂದು ನಾವು ನಂಬುತ್ತೇವೆ, ಕ್ಷೇತ್ರದ ಜನರು ನಂಬುತ್ತಾರೆ.

ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿರುವ ಹಾಗೂ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಶಾಸಕರು ಗಾಳಿಯಲ್ಲಿ ಗುಂಡು ಹೊಡೆಯವ ಕೆಲಸ ಮಾಡಿದ್ದಾರೆ ಹೊರತು ಮತ್ತೇನೂ ಮಾಡಿಲ್ಲ,  ಶಾಸಕರ ಮೇಲೆ ನಡೆದಿರುವ ಇಡಿ ದಾಳಿಗೆ ಬಿಜೆಪಿ ಮುನಿರಾಜು ಕಾರಣ ಎಂಬ ದಾಖಲೆ ಇದ್ದರೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಬಂದು ಕೊಟ್ಟರೇ, ಶಾಸಕರು ವಿಧಿಸುವ ಶಿಕ್ಷಗೆ ಬಿಜೆಪಿಯವರು ಸಿದ್ದರಿದ್ದೇವೆ, ಅದು ಬಿಟ್ಟು ಸುಳ್ಳು ಕೇಸು ಹಾಕಿಸಿ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಗುಡಿಬಂಡೆ ಬಿಜೆಪಿ ಮಂಡಲಾಧ್ಯಕ್ಷ ಗಂಗಿರೆಡ್ಡಿ ಮಾತನಾಡಿ, ಕ್ಷೇತ್ರದ ಕಾಂಗ್ರೆಸ್ ಶಾಸಕರ ಅಧಿಕಾರ ದುರ್ಬಳಿಕೆ ದಿನೆ ದಿನೇ ಹೆಚ್ಚಾಗುತ್ತಿದ್ದು, ಬಿಜೆಪಿ ಮುಖಂಡರ, ಕಾರ್ಯಕರ್ತರ ಮೇಲೆ  ವಿನಾಕಾರಣ ಸುಳ್ಳು ಕೇಸುಗಳನ್ನು ದಾಖಲಿಸಿ ಕಿರುಕುಳ ನೀಡಲಾಗುತ್ತಿದ್ದೆ. ಕ್ಷೇತ್ರದ ಶಾಸಕರು ತಮ್ಮ ದಬ್ಬಾಳಿಕೆ ನಿಲ್ಲಿಸದಿದ್ದರೆ ಬಿಜೆಪಿ ಕಾರ್ಯಕರ್ತರು ಪ್ರಾಣ ತ್ಯಾಗಕ್ಕೂ ಸಿದ್ದವಾಗಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಜಿ.ಎಸ್.ಸುಧಾಕರರೆಡ್ಡಿ, ಮುಖಂಡ ರಾದ ಆರ್.ವೆಂಕಟೇಶ್, ಚೇಳೂರು ಆಂಜನೇಯರೆಡ್ಡಿ, ಲೋಕೇಶ್, ರಂಗಾರೆಡ್ಡಿ, ಅಶ್ವತ್ಥರೆಡ್ಡಿ, ಮಧು, ರಾಮಪ್ಪ, ಗಂಗರಾಜು, ಸುರೇಶ್, ರಾಂಬಾಬು, ಮಂಜುಳ, ರೂಪ, ನಂದಿನಿ, ಕೃಷ್ಣವೇಣಿ, ಗಂಗರತ್ನಮ್ಮ, ಗಾಯತ್ರಿ, ರಾಧ, ರಮೇಶ್ ಮತ್ತಿತರರು ಇದ್ದರು.