ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA S.N.Subbareddy: 10 ಕೋಟಿ ವೆಚ್ಚದಲ್ಲಿ ಗುಡಿಬಂಡೆ-ರಾಮಪಟ್ಟಣ ರಸ್ತೆ ಅಭಿವೃದ್ದಿ: ಶಾಸಕ ಸುಬ್ಬಾರೆಡ್ಡಿ

ಆದಷ್ಟು ಶೀಘ್ರವಾಗಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಹಾಗೂ ಗುತ್ತಿಗೆ ದಾರರಿಗೆ ಸೂಚನೆ ನೀಡಿದ್ದೇನೆ. ಇನ್ನೂ ಈ ರಸ್ತೆ ಕಾಮಗಾರಿ ತುಂಬಾ ತಡವಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಇರಾನ್ – ಇಸ್ರೇಲ್ ಯುದ್ದದ ಕಾರಣದಿಂದ ಡಾಂಬರು ಸೇರಿದಂತೆ ಹಲವು ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಆದ್ದರಿಂದ ತಡವಾಗುತ್ತಿದೆ. ಆದಷ್ಟು ಶೀಘ್ರವಾಗಿ ಕೆಲಸ ಮುಗಿಸಲು ತಿಳಿಸುತ್ತೇನೆ

10 ಕೋಟಿ ವೆಚ್ಚದಲ್ಲಿ ಗುಡಿಬಂಡೆ-ರಾಮಪಟ್ಟಣ ರಸ್ತೆ ಅಭಿವೃದ್ದಿ

ತಾಲೂಕಿನ ಕರಿಗಾನತಮ್ಮನಹಳ್ಳಿ - ಉಲ್ಲೋಡು ಗ್ರಾಮಗಳ ನಡುವಿನ 4.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು -

Profile
Ashok Nayak May 20, 2026 12:52 PM

ಗುಡಿಬಂಡೆ: ಪಟ್ಟಣದಿಂದ ರಾಮಪಟ್ಟಣ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸುಮಾರು 10 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಉತ್ತಮ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗು ತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA S.N.Subbareddy) ತಿಳಿಸಿದರು.

ತಾಲೂಕಿನ ಕರಿಗಾನತಮ್ಮನಹಳ್ಳಿ - ಉಲ್ಲೋಡು ಗ್ರಾಮಗಳ ನಡುವಿನ 4.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಈ ಹಿಂದೆ ಗುಡಿಬಂಡೆ-ರಾಮಪಟ್ಟಣ ರಸ್ತೆಯ ಅಭಿವೃದ್ದಿಗೆ ಐದು ಕೋಟಿ ಅನುದಾನ ಬಿಡುಗಡೆ ಯಾಗಿತ್ತು. ಇದೇ ರಸ್ತೆಗೆ ಮತ್ತಷ್ಟು ಅನುದಾನ ಅಗತ್ಯ ಬಿದ್ದ ಕಾರಣ ಮತ್ತೆ ಕರಿಗಾನತಮ್ಮನಹಳ್ಳಿ ಗ್ರಾಮದಿಂದ ಉಲ್ಲೋಡು ಗ್ರಾಮದ ರಸ್ತೆ ಅಭಿವೃದ್ದಿಗೆ ಸುಮಾರು 4 ಕೋಟಿ 50 ಲಕ್ಷ ಅನುದಾನ ಒದಗಿಸಲಾಗಿದೆ.

ಇದನ್ನೂ ಓದಿ:Gudibande News: ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಕರವೇಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಕೆ

ಆದಷ್ಟು ಶೀಘ್ರವಾಗಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಹಾಗೂ ಗುತ್ತಿಗೆ ದಾರರಿಗೆ ಸೂಚನೆ ನೀಡಿದ್ದೇನೆ. ಇನ್ನೂ ಈ ರಸ್ತೆ ಕಾಮಗಾರಿ ತುಂಬಾ ತಡವಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಇರಾನ್ – ಇಸ್ರೇಲ್ ಯುದ್ದದ ಕಾರಣದಿಂದ ಡಾಂಬರು ಸೇರಿದಂತೆ ಹಲವು ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಆದ್ದರಿಂದ ತಡವಾಗುತ್ತಿದೆ. ಆದಷ್ಟು ಶೀಘ್ರವಾಗಿ ಕೆಲಸ ಮುಗಿಸಲು ತಿಳಿಸುತ್ತೇನೆ ಎಂದರು.

ಇನ್ನೂ ಪಟ್ಟಣದ ವ್ಯಾಪ್ತಿಯ ರಾಮಪಟ್ಟಣ ರಸ್ತೆ ಅಗಲೀಕರಣ  ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು, ಈ ರಸ್ತೆ ತುಂಬಾ ಕಿರಿದಾದ ಕಾರಣದಿಂದ ಅಗಲೀಕರಣಕ್ಕೆ ಮುಂದಾಗಿ ದ್ದೇವು. ಆದರೆ ಈ ರಸ್ತೆಯ ವ್ಯಾಪ್ತಿಯ ಆಸ್ತಿ ಮಾಲೀಕರು ಹಾಗೂ ಅಂಗಡಿ ಮಾಲೀಕರು 80 ಅಡಿ ರಸ್ತೆ ಅಗಲೀಕರಣ ಆದರೆ ತಮ್ಮ ಆಸ್ತಿ ಕಳೆದುಕೊಳ್ಳಬೇಕಾಗುತ್ತದೆ, ಕಡಿಮೆ ಮಾಡಿ ಎಂದು ನನ್ನ ಬಳಿ ಮನವಿ ಮಾಡಿದ್ದರು.

ಅದರಂತೆ 40 ಅಡಿ ರಸ್ತೆ ಅಗಲೀಕರಣ ಮಾಡಲು ತಿಳಿಸಿದಾಗ ಅವರೂ ಸಹ ಒಪ್ಪಿಕೊಂಡರು. ಬಳಿಕ ಅವರು ರಸ್ತೆ ಅಗಲೀಕರಣಕ್ಕೆ ಬೆಂಬಲ ನೀಡಲಿಲ್ಲ. ಆದ್ದರಿಂದ ಮತ್ತೊಮ್ಮೆ ಅವರ ಬಳಿ ಮಾತನಾ ಡುತ್ತೇನೆ ಆಗಲೂ ಒಪ್ಪದೇ ಇದ್ದರೇ ಸರ್ಕಾರಿ ಸುತ್ತೋಲೆಯಂತೆ ಒಟ್ಟು 80 ಅಡಿ ರಸ್ತೆ ಅಗಲೀಕರಣ ಕ್ಕೆ ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗುತ್ತದೆ. ಅಲ್ಲಿಯ ತನಕ ಈ ರಸ್ತೆಯಲ್ಲಿ ಬಿದ್ದ ಗುಂಡಿ ಗಳನ್ನು ಮುಚ್ಚಲು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು.

ಇದೇ ಸಮಯದಲ್ಲಿ ಇರಾನ್-ಇಸ್ರೇಲ್ ಯುದ್ದದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಬಂಗಾರ, ಇಂಧನ ಮಿತ ಬಳಕೆಯ ಕುರಿತು ಮಾತನಾಡಿದರು.

ವಿಶ್ವದ ನಂಬರ್ ಒನ್ ಪ್ರಧಾನಿಗಳು ಎಂದು ಮೋದಿಯವರನ್ನು ಕರೆಯುತ್ತಾರೆ. ಆದರೆ ಅವರ ಕೆಲಸಗಳಲ್ಲಿ ಮಾತ್ರ ನಂಬರ್ 1 ಅಲ್ಲ ಎಂದು ಕುಟುಕಿದರು.