ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚದಲಪುರ ಗವಿಗಾನಹಳ್ಳಿ ರಸ್ತೆಯಲ್ಲಿರುವ ಗೋದಾಮಿನ ಮೇಲೆ ದಾಳ: ರಸಗೊಬ್ಬರದ ಅಕ್ರಮ ದಾಸ್ತಾನು ಪತ್ತೆ

ಯೂರಿಯಾ ಸೇರಿದಂತೆ ಯಾವುದೇ ರೀತಿಯ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡುವುದು ಕಾನೂನು ಬಾಹಿರವಾಗಿದ್ದು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಜರುಗದಂತೆ ಕಟ್ಟೆಚ್ಚರದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಫ್ರೂಟ್ ಐಡಿ ಆಧಾರದ ಮೇಲೆ ನಿಯಮಾ ವಳಿಯಂತೆ ರೈತರಿಗೆ ರಸಗೊಬ್ಬರ ವಿತರಣೆ ಮಾಡಬೇಕು ಎಂದರು

ಚದಲಪುರ ಗವಿಗಾನಹಳ್ಳಿ ರಸ್ತೆಯಲ್ಲಿರುವ ಗೋದಾಮಿನ ಮೇಲೆ ದಾಳ

-

Profile
Ashok Nayak Jun 8, 2026 9:28 PM

ಚಿಕ್ಕಬಳ್ಳಾಪುರ : ನಗರದ ಹೊರವಲಯ ಚದಲಪುರ ಬಳಿ ಕೃಷಿ ಬಳಕೆಯ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಬಳಕೆ ಮಾಡಿಕೊಂಡು ಅಕ್ರಮವಾಗಿ  ಡಿಇಎಫ್  ದ್ರಾವಣ ತಯಾರಿಸುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಜಿ.ಪ್ರಭು( District Collector G.Prabhu) ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಯೂರಿಯಾ ಸೇರಿದಂತೆ ಯಾವುದೇ ರೀತಿಯ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡುವುದು ಕಾನೂನು ಬಾಹಿರವಾಗಿದ್ದು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಜರುಗದಂತೆ ಕಟ್ಟೆಚ್ಚರದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಫ್ರೂಟ್ ಐಡಿ ಆಧಾರದ ಮೇಲೆ ನಿಯಮಾವಳಿಯಂತೆ ರೈತರಿಗೆ ರಸಗೊಬ್ಬರ ವಿತರಣೆ ಮಾಡಬೇಕು ಎಂದರು.

ಇದನ್ನೂ ಓದಿ: Chikkaballapur News: ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ನೀಡಿದ ಡಾ.ಕೆ.ಸುಧಾಕರ್

ರಸಗೊಬ್ಬರ ಮಾರಾಟಗಾರರು ಕೂಡ ಕೃಷಿ ಇಲಾಖೆ ನೀಡಿರುವ ನೀತಿ ನಿಯಮಗಳನ್ನು ಕಡ್ಡಾಯ ವಾಗಿ ಪಾಲಿಸಬೇಕು. ಕೃಷಿ ಉದ್ದೇಶಕ್ಕಾಗಿ ಖರೀದಿಯಾಗುವ ರಸಗೊಬ್ಬರ ಕೃಷಿ ಚಟುವಟಿಕೆಗಳಿಗೆ ಮಾತ್ರವೇ ಬಳಕೆಯಾಗಬೇಕು. ಇದನ್ನು ಹೊರತುಪಡಿಸಿ ಅಕ್ರಮವಾಗಿ ಕೈಗಾರಿಕಾ ಉತ್ಪನ್ನಗಳ ತಯಾರಿಗಾಗಿ ಅಥವಾ  ಅಕ್ರಮ ಇಂಧನ ತಯಾರಿ ಸೇರಿದಂತೆ ಇತರ ಯಾವುದೇ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿ, ಯಾವುದೇ ಸಂಸ್ಥೆ ಅಕ್ರಮ ಬಳಕೆಗೆ ಮುಂದಾದರೆ ಅಂತಹ ಅವರ ಮೇಲೆ ಕಟ್ಟುನಿಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಚದಲಪುರ ಗೇಟ್‌ನಿಂದ ಗವಿಗಾನಹಳ್ಳಿಗೆ ಹೋಗುವ ರಸ್ತೆಯ ಸರ್ವೆ ನಂ. 76/7ರಲ್ಲಿರುವ ಗೋದಾಮಿನಲ್ಲಿ ಅಕ್ರಮವಾಗಿ ಡೀಸೆಲ್ ಎಕ್ಸಾಸ್ಟ್ ಫ್ಲ್ಯೂಯಿಡ್ʼಡಿಇಎಫ್ ತಯಾರಿಸುತ್ತಿರುವ ಬಗ್ಗೆ ಭಾನುವಾರ ರಾತ್ರಿ ಗಮನಕ್ಕೆ ಬಂದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು, ಉಪ ವಿಭಾಗಾಧಿಕಾರಿಗಳು, ಜಂಟಿ  ಕೈಗಾರಿಕೆ ನಿರ್ದೇಶಕ,ಕಾನೂನು ಮಾಪನ ಶಾಸ್ತ್ರ ಇಲಾಖೆ  ಸಹಾಯಕ ನಿಯಂತ್ರಕ, ಸಹಾಯಕ ಕೃಷಿ ನಿರ್ದೇಶಕ ಮೋಹನ್. ಎಸ್.ಎಂ, (ಜಾರಿದಳ), ಸಹಾಯಕ ಕೃಷಿ ನಿರ್ದೇಶಕ ಮುನಿರಾಜ.ಸಿ, ಕೃಷಿ ಅಧಿಕಾರಿ ರಾಮಚಂದ್ರ ವಿ ಹಾಗೂ ಕೃಷಿ ಇಲಾಖೆಯ ಜಾಗೃತದಳ ವಿಭಾಗದ ಅಧಿಕಾರಿಗಳು ಸದರಿ ಗೋಧಾಮು ಪ್ರದೇಶಕ್ಕೆ ಭೇಟಿ ನೀಡಿ  ೨೧೬ ಚೀಲ ಯೂರಿಯಾ ಅಕ್ರಮ ದಾಸ್ತಾನನ್ನು ವಶಕ್ಕೆ ಪಡೆದಿದ್ದು ಈ ಸಂಬಂಧ ಅಗತ್ಯ ದಾಖಲೆ ಕ್ರೋಡಿಕರಣ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಸದರಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದು ತಿಳಿಸಿದರು.

8l1

ಜಂಟಿ ಕೃಷಿ ನಿರ್ದೇಶಕ ಅಭಿದ್ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಚದಲಪುರ ಗೇಟ್‌ನಿಂದ ಗವಿಗಾನಹಳ್ಳಿಗೆ ಹೋಗುವ ರಸ್ತೆಯ ಸರ್ವೆ ನಂ. 76/7 ರಲ್ಲಿರುವ ಗೋದಾಮಿನಲ್ಲಿ ಶ್ರೀರಾಮ್ ಫರ್ಟಿಲೈಜರ್ ಅಂಡ್ ಕೆಮಿಕಲ್ಸ್-ರಾಜಸ್ಥಾನ ಸಂಸ್ಥೆಯ 129 ಚೀಲ (45 ಏg), ನ್ಯಾಷ ನಲ್ ಫರ್ಟಿಲೈಸರ್ ಅಂಡ್ ಕೆಮಿಕಲ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ಮಧ್ಯಪ್ರದೇಶ -1823 (45 ಏg), ಗುಜರಾತ್ ನರ್ಮದಾ ವ್ಯಾಲಿ ಫರ್ಟಿಲೈಸರ್ ಅಂಡ್ ಕೆಮಿಕಲ್ಸ್ (ಜಿಎನ್‌ಆರ್‌ಜಿ)  ಸಂಸ್ಥೆಯು 69 ಚೀಲ (45 ಕೆ.ಜಿ.) ಒಟ್ಟು 216 ಚೀಲಗಳ ಅಕ್ರಮ ಯೂರಿಯಾ ದಾಸ್ತಾನು ಮಾಡಿರುವುದು ಕಂಡುಬಂದಿರುತ್ತದೆ. ಸದರಿ ದಾಸ್ತಾನಿನ ಜೊತೆಗೆ 491 (50 ಕೆ.ಜಿ) ಕೈಗಾರಿಕೆಗೆ ಬಳಸುವ ಯೂರಿಯಾ ವನ್ನು ಸಹ ಅನುಮತಿ ಪಡೆಯದೇ ಅಕ್ರಮವಾಗಿ ದಾಸ್ತಾನು ಇಟ್ಟಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ.

ಸದರಿ ವಿಷಯವನ್ನು ನಂದಿ ಗಿರಿಧಾಮ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಭಾನುವಾರ ರಾತ್ರಿ ಕಾವಲು ಕಾದು ಸದರಿ ದಾಸ್ತಾನನ್ನು ರಕ್ಷಣೆ ಮಾಡಲಾಗಿದ್ದು ಆರೋಪಿಗಳ ಪತ್ತೆಗಾಗಿ ಹಾಗೂ ಮುಂದಿನ ಅಗತ್ಯ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.