Pradeep Easwar: ತಿಮಿಂಗಿಲಗಳ ನಡುವೆ ಈಜುತ್ತಿದ್ದೇನೆ ಸಾಧ್ಯವಾದಲ್ಲಿ ಕಾಪಾಡಿಕೊಳ್ಳಿ: ಪ್ರದೀಪ್ ಈಶ್ವರ್
ನಾನು ಎಂ.ಎಲ್.ಎ ಆಗುವವರೆಗೆ ಈ ಕ್ಷೇತ್ರದ ಮತದಾರರು ಬೆಂಗಳೂರಿಗೆ ಹೋಗಿ ಅವರು ಬಂದು ದರ್ಶನ ನೀಡುವವರೆಗೆ ಕಾಯಬೇಕಿತ್ತು. ಆದರೆ ನಾನು ಅವರು ಎದ್ದು ಸೂರ್ಯನ ಮುಖ ನೋಡುವಷ್ಟರಲ್ಲಿಯೇ ಅವರ ಮನೆಬಾಗಿಲಿಗೆ ಬಂದು ಅವರ ಕಷ್ಟಗಳನ್ನು ಕೇಳುತ್ತಿದ್ದೇನೆ. ರಾಜಕಾರಣದಲ್ಲಿ ನಾನು ತಿಮಿಂಗಿಲಗಳ ನಡುವೆ ಈಜುತ್ತಿದ್ದೇನೆ.
ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದರು. -
ಚಿಕ್ಕಬಳ್ಳಾಪುರ : ನಾನು ಎಂ.ಎಲ್.ಎ ಆಗುವವರೆಗೆ ಈ ಕ್ಷೇತ್ರದ ಮತದಾರರು ಬೆಂಗಳೂರಿಗೆ ಹೋಗಿ ಅವರು ಬಂದು ದರ್ಶನ ನೀಡುವವರೆಗೆ ಕಾಯಬೇಕಿತ್ತು. ಆದರೆ ನಾನು ಅವರು ಎದ್ದು ಸೂರ್ಯನ ಮುಖ ನೋಡುವಷ್ಟರಲ್ಲಿಯೇ ಅವರ ಮನೆಬಾಗಿಲಿಗೆ ಬಂದು ಅವರ ಕಷ್ಟಗಳನ್ನು ಕೇಳುತ್ತಿದ್ದೇನೆ. ರಾಜಕಾರಣದಲ್ಲಿ ನಾನು ತಿಮಿಂಗಿಲಗಳ ನಡುವೆ ಈಜುತ್ತಿದ್ದೇನೆ.ಸಾಧ್ಯವಾದಲ್ಲಿ ನನ್ನನ್ನು ಕಾಪಾಡಿಕೊಳ್ಳಿ ಎಂದು ಶಾಸಕ ಪ್ರದೀಪ್ ಈಶ್ವರ್( MLA Pradeep Eshwar) ಮಾರ್ಮಿಕವಾಗಿ ಜನತೆಗೆ ಮನವಿ ಮಾಡಿದರು.
ನಗರದ ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಕಾಲಜ್ಞಾನಿ ಕನಕದಾಸರ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೧೬ನೇ ಶತಮಾನದಲ್ಲಿ ಕಾಲಜ್ಞಾನಿ ಕನಕದಾಸರು ಜಾತಿ ಪದ್ದತಿ ವಿರುದ್ಧ ಭಕ್ತಿ ಮತ್ತು ಕೀರ್ತನೆಗಳ ಮೂಲಕ ಬಹುದೊಡ್ಡ ಸಮರವನ್ನು ಸಾರಿದ್ದರು.ಅದರಲ್ಲಿ ಕೊಂಚಮಟ್ಟಿಗೆ ಯಶಸ್ಸನ್ನು ಸಾಧಿಸಿದ್ದರು. ನಾನು ರಾಜಕಾರಣ ಎಂಬ ಸಾಗರದಲ್ಲಿ ಅಭಿಮನ್ಯುವಿನಂತೆ ಈಜುತ್ತಿದ್ದೇನೆ.ನನ್ನಂತಹ ಶೋಷಿತ ಸಮುದಾಯದ ಯಾವ ಬ್ಯಾಕ್‌ಗ್ರೌಂಡ್ ಇಲ್ಲದ ಹುಡುಗ ಶಾಸಕನಾಗಿ ಇರುವುದು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಯಾರು ಏನೇ ಹೇಳಿದರೂ ಟೀಕೆಗಳ ಮೂಲಕ ನನ್ನನ್ನು ಅಪಹಾಸ್ಯ ಮಾಡಿದರೂ ನನ್ನ ನಾಯಕ ರಾದ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್,ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ಟೀಕಿಸಿದರೆ ಸುಮ್ಮನಿರುವ ಪೈಕಿ ನಾನಲ್ಲ ಎಂದರು.
ರಾಜಕಾರಣದಲ್ಲಿ ಯುವಕರು ಅಸ್ಥಿತ್ವ ಕಂಡುಕೊಳ್ಳಬೇಕಾದರೆ ಕಾಲೆಳೆಯುವವರ ಬಗ್ಗೆ, ಟೀಕಿಸುವವರ ಬಗ್ಗೆ,ನಮ್ಮ ಮನೋಸ್ಥೆöÊರ್ಯವನ್ನು ಕುಗ್ಗಿಸುವವರ ಬಗ್ಗೆ ತಲೆಕೆಡಿಸಿ ಕೊಳ್ಳದಿದ್ದರೆ ಬನ್ನಿ.ನನ್ನ ಬಗ್ಗೆ ನಾಯಿಗಳು ಬೊಗಳುತ್ತಲೇ ಇರುತ್ತವೆ.ಈ ಸಿಂಹದ ಗರ್ಜನೆ ಕುಗ್ಗಿದೆಯಾ? ಇಲ್ಲತಾನೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಏಕವಚನದಲ್ಲಿ ಯಾರಾದರೂ ಮಾತನಾಡಿ ದರೆ ನಾನು ಸುಮ್ಮನಿರುವ ಮಾತೇಯಿಲ್ಲ.ಅದು ಪತ್ನಾಳ್ ಆದರೂ ಯತ್ನಾಳ್ ಆದರೂ, ಇಲಿಯಾದರೂ, ಮರಿಯಾದರೂ ಸುಮ್ಮನಿರಲ್ಲ.ನನ್ನ ಮುಖ್ಯಮಂತ್ರಿ ನನ್ನ ಧೈರ್ಯ,ನನ್ನ ಭರವಸೆ ನನ್ನ ಭವಿಷ್ಯ ಎಂದರು.
ಮುಖ್ಯಮಂತ್ರಿಗಳ ಪರವಾಗಿ ಮಾತನಾಡುತ್ತಿರುವ ನನ್ನ ಬಾಯಿ ಕಟ್ಟಿಹಾಕಲು ನನ್ನ ಮೇಲೆ ೮ ಕೇಸು ಹಾಕಿದ್ದಾರೆ.ನೀವು ಎಷ್ಟೇ ಕೇಸು ಹಾಕಿದರೂ ನನ್ನ ಕಂಟ್ರೋಲ್ ಮಾಡಲು ಆಗುವುದಿಲ್ಲ.ಪವರ್ ಇಲ್ಲದಿರುವಾಗಲೇ ಚಿಕ್ಕಬಳ್ಳಾಪುರದಲ್ಲಿ ನನ್ನ ಸ್ಪೀಡ್ ಕಂಟ್ರೋಲ್ ಮಾಡಲು ಆಗಲಿಲ್ಲ,ಅಣಕನೂರಿಗೆ ಕರೆದುಕೊಂಡು ಹೋದರು, ವಾಪಸ್ಸು ಬಂದೆ. ವಿರೋಧ ಪಕ್ಷಗಳಿಗೆ ಹೇಳುವುದಿಷ್ಟೆ. ನಮ್ಮ ಲೀಡರ್‌ಗೆ ಗೌರವಕೊಟ್ಟು ಮಾತನಾಡಿ ನಿಮ್ಮ ತಂಟೆಗೆ ಬರೋದಿಲ್ಲ, ಅಗೌರವ ತೋರಿದರೆ ಬಿಡುವ ಮಾತೇ ಇಲ್ಲ ಎಂದು ಹಿಂದೂ ಇಲಿ, ಮೈಸೂರಿನ ಕೋತಿಗೆ ಹೇಳುತ್ತಿದ್ದೇನೆ ಎಂದರು.
ಅಕ್ಕಿಕೊಟ್ಟರೆ ಸೋಮಾರಿಗಳಾಗುತ್ತಾರೆ ಎನ್ನುವ ಬಿಜೆಪಿ ಜೆಡಿಎಸ್ ಮುಟ್ಟಾಳರೇ ಹಳ್ಳಿಗಳಿಗೆ ಬಂದು ಬಡವರ ಕಷ್ಟವನ್ನು ಕಣ್ಣಾರೆ ನೋಡಿ.ಅಲ್ಲಿ ಎಷ್ಟೋ ಜನಕ್ಕೆ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.ಸ್ವಾಮಿ ನಾವು ಕೂಲಿಗೆ ಹೋಗದಿದ್ದರೆ ನಮ್ಮ ಕಷ್ಟ ಕಳೆಯುವುದಿಲ್ಲ ಎನ್ನುತ್ತಿದ್ದಾರೆ.ಇಂದಿರಾ ಕಿಟ್ ಇಂತಹವರಿಗೆ ನೆರವಾಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ದೇಶದ ಅತಿದೊಡ್ಡ ಒಬಿಸಿ ನಾಯಕ.ಪ್ರಶ್ನಾತೀತ ನಾಯಕರು, ರಾಜ್ಯವನ್ನು ತಮ್ಮ ದಕ್ಷ ಆಡಳಿತದ ಮೂಲಕ ಸುಭಿಕ್ಷವಾಗಿ ಇಟ್ಟಿದ್ದಾರೆ ಎಂದರೆ ಅದಕ್ಕೆ ಕುರುಬ ಸಮುದಾಯದ ಬಲವೇ ಸಾಕ್ಷಿ.ಸಿದ್ಧರಾಮಯ್ಯ ಎನ್ನುವುದು ಬರೀ ಹೆಸರಲ್ಲ,ಅದೊಂದು ಬ್ರಾಂಡ್.ಇದೇ ಸಮುದಾಯದ ಭೈರತಿ ಸುರೇಶ್, ಮತ್ತೊಂದು ಶಕ್ತಿ ಎಂದರು.
ನಾನು ಲೀಡರ್‌ಗಳ ಶಾಸಕ ಅಲ್ಲ, ಜನಸಾಮಾನ್ಯರ ಶಾಸಕ. ಹಿಂದೆ ಇಲ್ಲಿ ಎಂ.ಎಲ್.ಎ ಆದವರು ಐಬಿಗಳಲ್ಲಿ ಬಂದು ಹತ್ತಿಪ್ಪತ್ತು ಮುಖಂಡರನ್ನು ಜತೆಗೆ ಇಟ್ಟುಕೊಂಡು ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದರು.ಆದರೆ ನಾನು ಹಳ್ಳಿಗೆ ಹೋಗಿ ಅವರ ಕಷ್ಟ ಕೇಳು ತ್ತಿದ್ದೇನೆ. ಇದು ನನ್ನ ತಪ್ಪಾ? ಏನಾದರೂ ಅಂದುಕೊಳ್ಳಿ ಬೆಳಿಗ್ಗೆ ೬ ಗಂಟೆಗೆ ಹಳ್ಳಿಗಳಿಗೆ ಬಂದು ೧೦-೨೦ ಲೀಡರ್‌ಗಳ ಬದಲಿಗೆ ೨೦೦ ಜನರ ಕಷ್ಟ ಆಲಿಸುತ್ತೇನೆ. ನಾನು ಶೋಷಿತ ನಾಗಿರುವ ಕಾರಣ ನನಗೆ ಹೆಜ್ಜೆ ಹೆಜ್ಜೆಗೂ ಅವಮಾನ, ಕಾಲೆಳೆಯುವ ಕೆಲಸ ಆಗುತ್ತಿದೆ ಎಂದರು.
ನಮ್ಮಂತಹ ಹುಡುಗರನ್ನು ಸಿದ್ಧರಾಮಯ್ಯ ಅವರು ಬೆಳೆಸುತ್ತಿದ್ದಾರೆ.ಅದಕ್ಕೆ ಅವರ ಮೇಲೆ ನಮಗೆ ಪ್ರೀತಿ ಅಭಿಮಾನ.ನನ್ನ ಮನವಿಯಂತೆ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಿದರು.ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಒಪ್ಪಿದರು. ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಶನಿವಾರ ಇಡೀ ನಾಡಕಛೇರಿಯನ್ನು ಹಳ್ಳಿಗೆ ಕರೆದೊಯ್ದು ೧೯ ಜನಕ್ಕೆ ಅವರ ಊರಿನಲ್ಲಿಯೇ ಪೆನ್ಶನ್ ಕೊಡುವಂತೆ ಆಗಿದೆ. ಇವತ್ತಿಗೆ 201 ಹಳ್ಳಿಯ ಸಮಸ್ಯೆ ಆಲಿಸಿದ್ದೇನೆ. ಶೋಷಿತ ಸಮುದಾಯದ ಹುಡುಗಬ ಎಂಎಲ್‌ಎ ಆಗಿ ಬೆಳೆಯುವುದು ಸಾಮಾನ್ಯ ಅಲ್ಲವೇ ಅಲ್ಲ. ಕುರುಬ ಸಮುದಾಯಕ್ಕೆ ನಿವೇಶನ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
೨೧ನೇ ಶತಮಾನದಲ್ಲಿಯೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಎಸ್‌ಸಿ,ಎಸ್ಟಿ ಸಮುದಾಯ ವನ್ನು ಇಂದಿಗೂ ಮನೆಗಳಿಗೆ ಬಿಟ್ಟುಕೊಳ್ಳುತ್ತಿಲ್ಲ, ನಾನು ಶಾಸಕನಾದ ಮೇಲೆ ಐಎಎಸ್, ಕೆಎಎಸ್ ಅಧಿಕಾರಿಗಳ ಇಡೀ ತಂಡವನ್ನು ಈ ಸಮುದಾಯದ ಮನೆಯ ಒಳಗೆ ಕೂರಿಸಿ ಕೊಂಡು ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇನೆ.ಅಧಿಕಾರಿಗಳನ್ನು ಭೇಟಿ ಮಾಡಲು ಹರಸಾಹಸಪಡುತ್ತಿದ್ದರು,ನಾನು ಇದಕ್ಕೆ ತಿಲಾಂಜಲಿ ಇಟ್ಟು ಅವರಿದ್ದಲ್ಲಿಗೇ ಅಧಿಕರಿ ಗಳನ್ನು ಕರೆಸಿ ಸ್ಥಳದಲ್ಲಿಯೇ ಕಷ್ಟಗಳಿಗೆ ಪರಿಹಾರ ಕಾಣಿಸುತ್ತಿದ್ದೇನೆ. ಇದು ಅಂಬೇಡ್ಕರ್ ಮತ್ತು ಸಿದ್ಧರಾಮಯ್ಯ ಅವರು ನೀಡಿರುವ ಶಕ್ತಿಯಾಗಿದೆ ಎಂದರು.
ಪ್ರದೀಪ್ ಈಶ್ವರ್, ಯಲುವಹಳ್ಳಿ ರಮೇಶ್, ಕುರುಬ ಸಮುದಾಯದ ಜಿಲ್ಲಾಧ್ಯಕ್ಷ ನಾಗರಾಜ್,ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ,ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಾ. ಅಶ್ವಿನ್, ಉಪನ್ಯಾಸಕರು ಚಂದ್ರಶೇಖರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ,ಸಮುದಾಯದ ಮುಖಂಡ ರಂಗಪ್ಪ, ಇದ್ದರು.