Chikkaballapur News: ವಿದ್ಯೆಯು ವಿನಯ, ಉತ್ತಮ ನಡತೆ ಕೊಡಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ
ವಿಶ್ವ ಸಾಂಸ್ಕೃತಿಕ ಮಹೋತ್ಸವಕ್ಕೆ ಬರುತ್ತಿರುವ ಸಾಧಕರು ತಮ್ಮ ಸಾಧನೆಯಿಂದ ಜಗತ್ತಿನ ಗಮನ ಸೆಳೆದಿದ್ದರೂ ವಿನಯವಂತಿಕೆಗೂ ಮಾದರಿ ಎನ್ನುವಂತೆ ವರ್ತಿಸುತ್ತಾರೆ. ಇವರೆಲ್ಲರ ನಡವಳಿಕೆಯು ಮಕ್ಕಳಿಗೆ ಅತ್ಯುತ್ತಮ ಉದಾಹರಣೆಯಾಗುತ್ತದೆ. ಲಾಭದ ಅಪೇಕ್ಷೆಯಿಲ್ಲದೆ ಉದ್ಯಮಗಳನ್ನು ನಡೆಸಲು ಆಗುವುದಿಲ್ಲ. ಆದರೆ ಆ ಲಾಭವನ್ನು ಸಮಾಜದ ಅಭಿವೃದ್ಧಿಗೆ ಮರಳಿ ಕೊಡುವುದು ಅವರ ವಿಶಿಷ್ಟ ಸೇವೆಯಾಗುತ್ತದೆ
-
ಚಿಕ್ಕಬಳ್ಳಾಪುರ: ವಿದ್ಯೆಯು ವಿನಯ ಕೊಡಬೇಕು. ಫಲತುಂಬಿದ ಮರವು ಬಾಗುವಂತೆ ವಿದ್ಯಾವಂತರು ವಿನಯವಂತಿಕೆಯನ್ನು ರೂಢಿಸಿಕೊಳ್ಳಬೇಕು. ಸಮಾಜದ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadhguru Shri Madhusudan Sai)ಹೇಳಿದರು.
'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 85 ನೇ ದಿನವಾದ ಶನಿವಾರ (ನ 8) ಆಶೀರ್ವಚನ ನೀಡಿದ ಅವರು, 'ಜ್ಞಾನದಿಂದ ಸಿಗುವ ಎಲ್ಲವೂ ಸಮಾಜದ ಒಳಿತಿಗೆ ಬಳಕೆಯಾಗಬೇಕು' ಎಂದು ಅಭಿಪ್ರಾಯಪಟ್ಟರು.
ಕೆಲಸ ಮತ್ತು ಸೇವೆಯಿಂದ ಸಂಪತ್ತು ಸಂಪಾದನೆಯಾಗುತ್ತದೆ. ಕೇವಲ ಹಣವೊಂದೇ ಸಂಪತ್ತು ಅಲ್ಲ. ಜ್ಞಾನದಿಂದ ಸಂಪಾದಿಸುವ ಎಲ್ಲವನ್ನೂ ಸಮಾಜದ ಒಳಿತಿಗೆ ವಿನಯ ದಿಂದ ಬಳಸಿದರೆ ಧರ್ಮದ ದಾರಿಯಲ್ಲಿ ಮುನ್ನಡೆದಂತೆ ಆಗುತ್ತದೆ. ಅದರಿಂದ ಸುಖವು ಪ್ರಾಪ್ತವಾಗುತ್ತದೆ ಎಂದು ವಿವರಿಸಿದರು.
ವಿಶ್ವ ಸಾಂಸ್ಕೃತಿಕ ಮಹೋತ್ಸವಕ್ಕೆ ಬರುತ್ತಿರುವ ಸಾಧಕರು ತಮ್ಮ ಸಾಧನೆಯಿಂದ ಜಗತ್ತಿನ ಗಮನ ಸೆಳೆದಿದ್ದರೂ ವಿನಯವಂತಿಕೆಗೂ ಮಾದರಿ ಎನ್ನುವಂತೆ ವರ್ತಿಸುತ್ತಾರೆ. ಇವರೆಲ್ಲರ ನಡವಳಿಕೆಯು ಮಕ್ಕಳಿಗೆ ಅತ್ಯುತ್ತಮ ಉದಾಹರಣೆಯಾಗುತ್ತದೆ. ಲಾಭದ ಅಪೇಕ್ಷೆಯಿಲ್ಲದೆ ಉದ್ಯಮಗಳನ್ನು ನಡೆಸಲು ಆಗುವುದಿಲ್ಲ. ಆದರೆ ಆ ಲಾಭವನ್ನು ಸಮಾಜದ ಅಭಿವೃದ್ಧಿಗೆ ಮರಳಿ ಕೊಡುವುದು ಅವರ ವಿಶಿಷ್ಟ ಸೇವೆಯಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Sadguru Sri Madhusudan Sai: ಮುಂಬರುವ ದಿನಗಳಲ್ಲಿ ಭಾರತ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುತ್ತದೆ: ಶ್ರೀ ಮಧುಸೂದನ ಸಾಯಿ
ಪ್ರಿಕಾಲ್ ಲಿಮಿಟೆಡ್ ಕಂಪನಿಯ ಅಧ್ಯಕ್ಷೆ ಮತ್ತು ನಿರ್ದೇಶಕಿ ವನಿತಾ ಮೋಹನ್, ಸಿಟಿ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ ಎನ್.ಕಾಮಕೋಟಿ ಹಾಗೂ ಲ್ಯಾಂಡ್‌ಮಾರ್ಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಮತ್ತು ಆಡಳಿತ ಮಂಡಳಿ ಸದಸ್ಯ ರಾಮನಾಥನ್ ಹರಿಹರನ್ ಅವರಿಗೆ 'ಒನ್ ವರ್ಲ್ಡ್ ಒನ್ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್' ನೀಡಿ ಪುರಸ್ಕರಿಸಲಾಯಿತು. ಕ್ಯಾಮ್ಸ್ ಕಂಪನಿಯ ಹಿರಿಯ ಉಪಾಧ್ಯಕ್ಷ ಮಣಿಕಂಠನ್ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಿದರು.
ಅಖಂಡ ಭಜನೆ
ಲೋಕ ಕಲ್ಯಾಣಾರ್ಥವಾಗಿ ಶನಿವಾರ (ನ 8) ಸಂಜೆ 6 ರಿಂದ ಭಾನುವಾರ (ನ 9) ಸಂಜೆ 6 ರವರೆಗೆ 24 ಗಂಟೆಗಳ ನಿರಂತರ ಅಖಂಡ ಭಜನೆ ನಡೆಯಲಿದೆ. ಜಗತ್ತಿನ ಯಾವುದ ಮೂಲೆ ಯಲ್ಲಿದ್ದರೂ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿ. 'ಸಾವಿರಾರು ದನಿ, ಒಂದೇ ಉದ್ದೇಶ, ಸಾಮರಸ್ಯಕ್ಕೆ ಗಡಿಗಳು ಇಲ್ಲ. ಜಗತ್ತಿನಲ್ಲಿ ನಾವು ಎಲ್ಲಿ ಇದ್ದರೂ ಒಂದೇ ಕುಟುಂಬದ ಸದಸ್ಯರು' ಎನ್ನುವುದು ಅಖಂಡ ಭಜನೆಯ ಆಶಯವಾಗಿದೆ.