Chikkaballapur News: ಪ್ರತಿಭಾವಂತರನ್ನು ಗುರುತಿಸಿ ಪುರಸ್ಕರಿಸುವುದು ನಾಗರೀಕ ಸಮಾಜದ ಜವಾಬ್ದಾರಿ : ಸಿ.ಹೆಚ್.ವಿಜಯಶಂಕರ್
ಗುರುಗಳ ಪ್ರೋತ್ಸಾಹ ಮಕ್ಕಳಿಗೆ ಸದಾ ಕಾಲ ದಾರಿದೀಪವಷ್ಟೇ ಅಲ್ಲದೆ ಭವಿಷ್ಯದ ಸಾಧನೆಗೆ ಪ್ರೇರಣೆಯಾಗಲಿದೆ. ಬಾಬಾ ಸಾಹೇಬರಿಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ನಿಜಕ್ಕೂ ಸಂತೋಷ ತಂದಿದೆ. ಅಂಬೇಡ್ಕರ್ ಅವರ ಸಾಧನೆ ಸಾಧಕರಿಗೆ ಮಾರ್ಗದರ್ಶನ ಆಗಬೇಕು.ಶೂನ್ಯದಿಂದ ಬ್ರಹ್ಮಾಂಡ ಸೃಷ್ಟಿಸಿದವರು ಅಂಬೇಡ್ಕರ್.

ಬಾಲ್ಯದಲ್ಲಿಯೇ ಮಕ್ಕಳ ಆಸಕ್ತಿಯನ್ನು ಗುರುತಿಸಿ ಅಅದರಂತೆ ಓದಿಗೆ ಹಚ್ಚಿದರೆ ಖಂಡಿತವಾಗಿ ಪ್ರತಿಯೊಬ್ಬರೂ ಕೂಡ ಸಾಧಕರೇ ಆಗುತ್ತಾರೆ.ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಾಗರೀಕರ ಕರ್ತವ್ಯವಾಗಬೇಕಿದೆ ಎಂದು ಹಿರಿಯ ವಕೀಲ ಸಿ.ಹೆಚ್.ವಿಜಯಶಂಕರ್ ಹೇಳಿದರು. -

ಚಿಕ್ಕಬಳ್ಳಾಪುರ : ಬಾಲ್ಯದಲ್ಲಿಯೇ ಮಕ್ಕಳ ಆಸಕ್ತಿಯನ್ನು ಗುರುತಿಸಿ ಅಅದರಂತೆ ಓದಿಗೆ ಹಚ್ಚಿದರೆ ಖಂಡಿತವಾಗಿ ಪ್ರತಿಯೊಬ್ಬರೂ ಕೂಡ ಸಾಧಕರೇ ಆಗುತ್ತಾರೆ.ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಾಗರೀಕರ ಕರ್ತವ್ಯವಾಗಬೇಕಿದೆ ಎಂದು ಹಿರಿಯ ವಕೀಲ ಸಿ.ಹೆಚ್.ವಿಜಯ ಶಂಕರ್( Senior Advocate C.H. Vijayashankar) ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಅನುಕೋಚಿಂಗ್ ಸೆಂಟರ್‌ವತಿಯಿಂದ ಏರ್ಪಡಿಸಿದ್ದ ೨೦೨೫ -೨೬ನೇ ಸಾಲಿನ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ನಗರದ ವಾಸಿಯಾದ ಚೆನ್ನಕೃಷ್ಣಪ್ಪ ಅವರು ಅನು ಕೋಚಿಂಗ್ ಸೆಂಟರ್ ಮೂಲಕ ಬಾಲ್ಯದಲ್ಲಿಯೇ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ನವೋದಯ, ಸೈನಿಕ ಶಾಲೆ,ಅಳಿಕೆ ಶಿಕ್ಷಣ ಸಂಸ್ಥೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುವ ಕೆಲಸವನ್ನು ನಿಷ್ಟೆಯಿಂದ ಮಾಡುತ್ತಾ ಪೋಷಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದ್ದಾರೆ.ಅವರ ಸಂಸ್ಥೆಯಿAದ ಏರ್ಪಡಿಸಿರುವ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾ ರಂಭದಲ್ಲಿ ಭಾಗಿಯಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ: Chikkaballapur News: ದೇವೇಗೌಡರ ಆರೋಗ್ಯ ಸುಧಾರಿಸಲೆಂದು ಜೆಡಿಎಸ್‌ನಿಂದ 101 ಈಡುಗಾಯಿ ಹೊಡೆದು ದೇವರ ಮೊರೆ
ಗುರುಗಳ ಪ್ರೋತ್ಸಾಹ ಮಕ್ಕಳಿಗೆ ಸದಾ ಕಾಲ ದಾರಿದೀಪವಷ್ಟೇ ಅಲ್ಲದೆ ಭವಿಷ್ಯದ ಸಾಧನೆಗೆ ಪ್ರೇರಣೆಯಾಗಲಿದೆ. ಬಾಬಾ ಸಾಹೇಬರಿಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ನಿಜಕ್ಕೂ ಸಂತೋಷ ತಂದಿದೆ. ಅಂಬೇಡ್ಕರ್ ಅವರ ಸಾಧನೆ ಸಾಧಕರಿಗೆ ಮಾರ್ಗದರ್ಶನ ಆಗಬೇಕು.ಶೂನ್ಯದಿಂದ ಬ್ರಹ್ಮಾಂಡ ಸೃಷ್ಟಿಸಿದವರು ಅಂಬೇಡ್ಕರ್. ಸಂವಿಧಾನ ಬರೆಯುವ ಮೂಲಕ ನಮ್ಮ ದೇಶಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿಕೊಟ್ಟ ಪುಣ್ಯಾತ್ಮರು. ಅವರ ಬದುಕು ಬರಹಗಳನ್ನು ಓದುವ ಮೂಲಕ ಸಂವಿಧಾನವನ್ನು ಅರಿಯುವ ಕೆಲಸ ಮಾಡಬೇಕಿದೆ ಎಂದರು.
ಇದರ ಜತೆಗೆ ಕನ್ನಡ ಕೀರ್ತೀ ಬೆಳಗಿದ ಬಾದಾಮಿ ಚಾಲುಕ್ಯರ ಇತಿಹಾಸ ತಪ್ಪದೆ ಓದಬೇಕು.ಕನ್ನಡ ನಾಡಿನ ದೊರೆಗಳ ಇತಿಹಾಸ ಸಾಧನೆ ಅರಿಯುವಅ ಜತೆಗೆ ಕನ್ನಡದ ಕವಿಗಳನ್ನು ಓದಬೇಕು. ಕರುನಾಡಿನ ನೆಲ ಜಲ ಸಂಗೀತ ಸಾಹಿತ್ಯ ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಭಾರತರತ್ನರಾದ ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್, ತಾತಯ್ಯ,ವೀರಬ್ರಹ್ಮೇಂದ್ರ ಯತಿಗಳನ್ನು ಓದಿಕೊಳ್ಳಿ ಇವರು ನಮ್ಮವರು ಎಂದರು.
ಪ್ರಾAಶುಪಾಲರು ಅನುಕೋಚಿಂಗ್ ಸೆಂಟರ್ ಮಾಲಿಕ ಮುನಿಕೃಷ್ಣಪ್ಪ ಮಾತನಾಡಿ ನಗುವನ್ನು ಸ್ವರ್ಗಕ್ಕೆ ಹೋಲಿಸುತ್ತಾರೆ.ಮಕ್ಕಳ ನಗು ಮತ್ತು ಮುಗ್ಧತೆಯನ್ನು ಯಾರೂ ಕಸಿಯಲು ಬಾರದು. ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳನ್ನು ಹತ್ತಾರು ವರ್ಷಗಳಿಂದ ನವೋದಯ ಶಾಲೆ ಅಳಿಕೆ ಸತ್ಯ ಸಾಯಿ ಶಾಲಾ ಪ್ರವೇಶ, ಸೈನಿಕ ಶಾಲೆ, ಪ್ರತಿಷ್ಟಿತ ಶಾಲೆ ಪ್ರವೇಶ ಪಡೆದಿದ್ದಾರೆ. ಬೇಕಾದ ತರಬೇತಿ ನೀಡಿ ಯಶಸ್ವಿಯಾಗಿ ಗುರಿಮುಟ್ಟುವಂತೆ ಮಾಡಲಾಗಿದೆ. ಪೋಷಕರ ನಂಬಿಕೆ ವಿದ್ಯಾರ್ಥಿಗಳ ಪರಿಶ್ರಮವೇ ನಮ್ಮ ಸಂಸ್ಥೆಯ ಶಕ್ತಿಯಾಗಿದೆ. ೨೦೨೫-೨೬ನೇ ಸಾಲಿನಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂಧನಾ ಸಮಾರಂಭಕ್ಕೆ ಸಾಕ್ಷಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಕ್ಕಳೇ ಪುಟ್ ಬಾಲ್ ದಂತಕಥೆ ಪೀಲೆ ತಾವು ಸಣ್ಣವರಿದ್ದಾಗ ಅವರ ತಂದೆ ಅಳುತ್ತಿರುತ್ತಾರೆ. ಯಾಕೆ ಎಂದು ಕೇಳಿದಾಗ ನಮ್ಮ ದೇಶ ಫುಟ್ಪಾಲ್‌ನಲ್ಲಿ ಟ್ರೋಪಿ ತರುವಲ್ಲಿ ಸೋತಿದೆ ಎಂದು ಹೇಳಿದಾಗ ನನಗೆ ೧೮ ವರ್ಷ ಆಗಲಿ, ನಾನು ತಂಡದಲ್ಲಿ ಆಡಿ ಗೆಲುವು ತರುತ್ತೇನೆ ಎಂದು ಭರವಸೆ ನೀಡುತ್ತಾರೆ. ಭವಿಷ್ಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡು ಫುಟ್‌ಬಾಲ್ ಆಟದ ದಂತಕಥೆಯಾಗುತ್ತಾರೆ. ಗೆಲುವಿಗೆ ಸರಿಯಾದ ಮನೋಸ್ಥಿತಿ ಬೇಕಷ್ಟೇ.ಪ್ರತಿ ಮಗುವೂ ಕೂಡ ವಿಶಿಷ್ಟವಾದದ್ದು.ಇದನ್ನು ಅರಿತು ಓದಿಸಿ ಮಕ್ಕಳಲ್ಲಿ ಕೀಳರಿಮೆ ಭಾವ ಮೂಡಿದಂತೆ ಮಾಡಬೇಕು. ಬಲಿಷ್ಟವಾದ ಮನೋ ಬಲವೇ ಗೆಲುವಿನ ಮಹಾಶಕ್ತಿಯಾಗಿದೆ.ನಾವು ಇರುವುದನ್ನು ಒಪ್ಪಿಕೊಂಡೇ ಸಾಧನೆ ಮಾಡೋಣ. ಅದಕ್ಕೂ ಮೊದಲು ಹೃದಯವಂತರಾಗೋಣ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.ವೇದಿಕೆ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಹಾರ ತುರಾಯಿ ಪುಸ್ತಕ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ಅನು ಕೋಚಿಂಗ್ ಸೆಂಟರ್ ಏರ್ಪಡಿಸಿದ್ದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ದಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಅಭಿಷೇಕ್, ಸಿ.ಹೆಚ್.ಹಿರಿಯ ವಕೀಲ ವಿಜಯಶಂಕರ್, ಚಂದ್ರಶೇಖರ್, ಶಿಕ್ಷಕ ಪಟೇಲ್ ನಾರಾಯಣಸ್ವಾಮಿ, ಪಿಡಿಒ ವಿಜಯೇಂದ್ರ, ಜನಾರ್ಧನ್, ಪ್ರಾಂಶುಪಾಲರು ಹಾಗೂ ಅನು ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಚನ್ನಕೃಷ್ಣಪ್ಪ, ರತ್ನಮ್ಮ ಚೆನ್ನ ಕೃಷ್ಣಪ್ಪ,ಕಸಾಪ ಗೌರವ ಕಾರ್ಯದರ್ಶಿ ಚಂದ್ರಶೇಖರ್, ಕಿರಿಯ ಕಲಾವಿದೆ, ಭೈರವಿ ಚಲನ ಚಿತ್ರದ ಶ್ರೇಷ್ಠ ನಟಿ ಪ್ರಶಸ್ತಿ ವಿಜೇತೆ ಕುಮಾರಿ ಭೈರವಿ ಮಹೇಶ್ ಮತ್ತಿತರರು ಇದ್ದರು.