ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಚಿಕ್ಕತೇಕಹಳ್ಳಿಯಲ್ಲಿ ಕೋಲಾಟದ ಸಂಭ್ರಮ; ಜನಮನ ಗೆದ್ದ ಜನಪದ ಕಲಾ ವೈಭವ

ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಗ್ರಾಮಸ್ಥರೇ ಕೋಲಾಟ ಕಲಿತು ವಿವಿಧ ಕೋಪುಗಳಲ್ಲಿ ಪ್ರದರ್ಶಿಸಿದರು. ಗ್ರಾಮೀಣ ಸೊಗಡಿನ ಈ ಜನಪದ ಕಲೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಕಲಾಭಿಮಾನಿಗಳು ಆಗಮಿಸಿದ್ದರು.

Shidlaghatta News: ಚಿಕ್ಕತೇಕಹಳ್ಳಿಯಲ್ಲಿ ಕೋಲಾಟದ ಸಂಭ್ರಮ

ತಾಲ್ಲೂಕಿನ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಕೋಲಾಟ ತಂಡದ ವತಿಯಿಂದ ಆಯೋಜಿಸಿದ್ದ ಕೋಲಾಟ ಪ್ರದರ್ಶನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು ಎರಡು ತಿಂಗಳ ಕಾಲ ತರಬೇತಿ ಪಡೆದ ಕಲಾವಿದರು ಮೊದಲ ಬಾರಿಗೆ ಸಾರ್ವಜನಿಕವಾಗಿ ನೀಡಿದ ಪ್ರದರ್ಶನ ಜನರನ್ನು ರಂಜಿಸಿತು. -

Profile
Ashok Nayak Jun 9, 2026 11:45 PM

ಶಿಡ್ಲಘಟ್ಟ: ತಾಲ್ಲೂಕಿನ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಕೋಲಾಟ ತಂಡದ ವತಿಯಿಂದ ಆಯೋಜಿಸಿದ್ದ ಕೋಲಾಟ ಪ್ರದರ್ಶನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು ಎರಡು ತಿಂಗಳ ಕಾಲ ತರಬೇತಿ ಪಡೆದ ಕಲಾವಿದರು ಮೊದಲ ಬಾರಿಗೆ ಸಾರ್ವಜನಿಕ ವಾಗಿ ನೀಡಿದ ಪ್ರದರ್ಶನ ಜನರನ್ನು ರಂಜಿಸಿತು.

ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಗ್ರಾಮಸ್ಥರೇ ಕೋಲಾಟ ಕಲಿತು ವಿವಿಧ ಕೋಪುಗಳಲ್ಲಿ ಪ್ರದರ್ಶಿಸಿದರು. ಗ್ರಾಮೀಣ ಸೊಗಡಿನ ಈ ಜನಪದ ಕಲೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಕಲಾಭಿಮಾನಿಗಳು ಆಗಮಿಸಿದ್ದರು.

ಇದನ್ನೂ ಓದಿ: Shidlaghatta News: ಶಿಡ್ಲಘಟ್ಟದಲ್ಲಿ ಅದ್ದೂರಿಯಾಗಿ ನಡೆದ ಶ್ರೀರಾಮ ಶೋಭಾಯಾತ್ರೆ

ಇಂದಿನ ದಿನಗಳಲ್ಲಿ ಯುವಜನತೆ ಮೊಬೈಲ್, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ, ಕೋಲಾಟದಂತಹ ಸಾಂಪ್ರದಾಯಿಕ ಕಲೆಗಳು ಮತ್ತೆ ಜನರ ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ. ಕೋಲಾಟದ ನೃತ್ಯ, ಸಂಗೀತ ಹಾಗೂ ನಾಗರೀಕರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದವು.

ಕೋಲಾಟ ತರಬೇತುದಾರರಾದ ಭೋಗ ನಾಗರಾಜ್ ಮಾತನಾಡಿ, ಕೋಲಾಟವು ಕೇವಲ ಮನರಂಜ ನೆಯ ಕಲೆಯಲ್ಲ, ಅದು ಆರೋಗ್ಯ, ಶಿಸ್ತು ಹಾಗೂ ಸಾಮರಸ್ಯವನ್ನು ಬೆಳೆಸುವ ಜನಪದ ಕಲೆ ಯಾಗಿದೆ. ಈ ಕಲೆಯಲ್ಲಿ ಪ್ರತಿಯೊಬ್ಬರೂ ಸಮಾನವಾಗಿ ಭಾಗವಹಿಸಿ ಗುಂಪಿನಲ್ಲಿ ಪ್ರದರ್ಶನ ನೀಡುವ ಮೂಲಕ ಒಗ್ಗಟ್ಟಿನ ಸಂದೇಶ ಸಾರುತ್ತಾರೆ ಎಂದು ಹೇಳಿದರು.

9cbpm3

ಸುಮಾರು ಎರಡು ತಿಂಗಳ ಕಾಲ ಕಲಿತ ಕಲೆಯನ್ನು ಸಾವಿರಾರು ಜನರ ಎದುರು ಪ್ರದರ್ಶಿಸಿದ ತಂಡದ ಸದಸ್ಯರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಕೋಲಾಟದ ವಿವಿಧ ಕೋಪುಗಳು ಹಾಗೂ ಮನಮೋಹಕ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ಕೋಲಾಟ ಕಲಾವಿದರಾದ ಭೋಗ ನಾಗರಾಜ್, ವೇಮು ಮಾಸ್ಟರ್, ಸಂಗೀತ ಮಾಸ್ಟರ್, ಇನಮಿಂಚೇನಹಳ್ಳಿ ಶ್ರೀನಿವಾಸ್, ಜನಪದ ಕಲಾವಿದ ಈ ಧರೆ ಪ್ರಕಾಶ್ ಹಾಗೂ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಮತ್ತು ಕಲಾಭಿಮಾನಿಗಳು ಉಪಸ್ಥಿತರಿದ್ದರು.