ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಎಚ್‌.ಎನ್‌.ವ್ಯಾಲಿ ನೀರು ಅಕ್ರಮ ಬಳಕೆದಾರರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು

ಎಚ್‌.ಎನ್‌. ವ್ಯಾಲಿ ನೀರನ್ನು ಕೃಷಿ ಸೇರಿದಂತೆ ಇತರ ನೇರ ಬಳಕೆಗೆ ಪಡೆಯುವುದನ್ನು ನಿಷೇಧಿಸ ಲಾಗಿದ್ದು, ಅಕ್ರಮವಾಗಿ ನೀರು ಪಡೆಯುವುದನ್ನು ತಡೆಯಲು ಕಂದಾಯ, ಪೊಲೀಸ್, ಸಣ್ಣ ನೀರಾವರಿ ಹಾಗೂ ಬೆಸ್ಕಾಂ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯ ಪಡೆಗಳನ್ನು ರಚಿಸಲಾಗಿದೆ.

ಎಚ್‌.ಎನ್‌.ವ್ಯಾಲಿ ನೀರು ಅಕ್ರಮ ಬಳಕೆದಾರರ ವಿರುದ್ಧ ಕಾನೂನು ಕ್ರಮ

-

Profile
Ashok Nayak Sep 9, 2026 9:11 PM

ಚಿಕ್ಕಬಳ್ಳಾಪುರ: ಬರಪೀಡಿತ ಪ್ರದೇಶಗಳಿಗೆ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಹರಿಸ ಲಾಗುತ್ತಿರುವ ಎಚ್‌.ಎನ್‌. ವ್ಯಾಲಿ ಯೋಜನೆಯ ನೀರನ್ನು ಅಕ್ರಮವಾಗಿ ಸಂಗ್ರಹಿಸುವುದು ಹಾಗೂ ಕೃಷಿ ಮತ್ತು ಇತರ ಚಟುವಟಿಕೆಗಳಿಗೆ ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಎಚ್ಚರಿಸಿದ್ದಾರೆ.

ಎಚ್‌.ಎನ್‌.ವ್ಯಾಲಿ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ 12, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 24, ಶಿಡ್ಲಘಟ್ಟದಲ್ಲಿ 9, ಗೌರಿಬಿದನೂರಿನಲ್ಲಿ 8 ಮತ್ತು ಗುಡಿಬಂಡೆಯಲ್ಲಿ 3 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದರೆ ಕೆಲವರು ಕಾಲುವೆ ಹಾಗೂ ಕೆರೆಗಳ ಅಂಚಿನಲ್ಲಿ ಅಕ್ರಮವಾಗಿ ಪಂಪ್‌ ಮೋಟಾರ್ ಅಳವಡಿಸಿ ಕೊಂಡು ನೀರನ್ನು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಬಳಸುತ್ತಿರುವುದು ಗಮನಕ್ಕೆ ಬಂದಿದೆ ಎಂದರು.

ಇದನ್ನೂ ಓದಿ: Chikkaballapur News: ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸಲು ಒಕ್ಕೂಟದ ಪ್ರಯತ್ನ: ಅಧಿಕಾರಿಗಳು

ಇದರಿಂದ ಯೋಜನೆಯಡಿ ಕೊನೆಯ ಹಂತದಲ್ಲಿರುವ ಕೆರೆಗಳಿಗೆ ನೀರು ಹರಿಯಲು ಅಡ್ಡಿಯಾಗು ತ್ತಿದ್ದು, ಅಂತರ್ಜಲ ಅಭಿವೃದ್ಧಿಯ ಪ್ರಮುಖ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಯೋಜನೆ ಯಡಿ ಗುರುತಿಸಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗ ದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.

9cbpm6hvಒಒಕ

ಎಚ್‌.ಎನ್‌. ವ್ಯಾಲಿ ನೀರನ್ನು ಕೃಷಿ ಸೇರಿದಂತೆ ಇತರ ನೇರ ಬಳಕೆಗೆ ಪಡೆಯುವುದನ್ನು ನಿಷೇಧಿಸ ಲಾಗಿದ್ದು, ಅಕ್ರಮವಾಗಿ ನೀರು ಪಡೆಯುವುದನ್ನು ತಡೆಯಲು ಕಂದಾಯ, ಪೊಲೀಸ್, ಸಣ್ಣ ನೀರಾವರಿ ಹಾಗೂ ಬೆಸ್ಕಾಂ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಪಡೆಗಳನ್ನು ರಚಿಸಲಾಗಿದೆ.

ಅಕ್ರಮ ನೀರು ಬಳಕೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಾರ್ಯಪಡೆಗಳಿಗೆ ಸೂಚಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.