Lok Adalat: ಲೋಕ್ ಅದಾಲತ್ ಮುನ್ನಾ ದಿನವೇ : ಮುನಿಸು ಮರೆತು ಮತ್ತೆ ಒಂದಾದ ದಂಪತಿಗಳು
Lok Adalat: ಲೋಕ್ ಅದಾಲತ್ ಮುನ್ನಾ ದಿನವೇ : ಮುನಿಸು ಮರೆತು ಮತ್ತೆ ಒಂದಾದ ದಂಪತಿಗಳು
Ashok Nayak
Dec 13, 2024 1:32 PM
ಬಾಗೇಪಲ್ಲಿ: ಕೌಟುಂಬಿಕ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಗಳಿಂದ ದಂಪತಿಗಳ ನಡುವೆ ಬಿರುಕು ಉಂಟಾಗಿ ಬೇರೆ ಆಗಿ ಮತ್ತೆ ಒಂದಾದ ಘಟನೆ ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದಲ್ಲಿ ನಡೆದಿದೆ.
ಪಟ್ಟಣದ ನ್ಯಾಯಾಲಯಗಳಲ್ಲಿ ತಿಂಗಳ ಕೊನೆಯ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯುವುದು ವಾಡಿಕೆ. ಆದರೆ ಬಾಗೇಪಲ್ಲಿಯ ಕೋರ್ಟಿನಲ್ಲಿ ಶನಿವಾರ ವಿಚಾರಣೆಗೆ ಬರಬೇಕಿದ್ದ ವಿಚ್ಛೇದನ ಜೋಡಿ ವಿರಸ ಮರೆತು ಶುಕ್ರವಾರವೇ ಒಂದಾಗುವ ಮೂಲಕ ನ್ಯಾಯಾಧೀಶರಿಗೆ ಅಚ್ಚರಿ ಮೂಡಿಸಿದ್ದಾರೆ.
ವೈವಾಹಿಕ ವಿವಾದಗಳಿಗೆ ಸಂಬAಧಿಸಿದAತೆ ಕಾರಣಾಂತರಗಳಿ0ದ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣ ಗಳು ರಾಜೀ ಮುಖಾಂತರ ಸುಖಾಂತ್ಯವಾಗಿರುತ್ತದೆ. ವಿಶೇಷವಾಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾರತಿ ಇವರ ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಸಂಬAಧಿಸಿದAತೆ ೨೦೨೦ನೇ ಸಾಲಿನಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಹೆಸರು ಹೇಳಲು ಇಚ್ಚಿಸಿದ ದಂಪತಿಗಳುಇದೀಗ ನ್ಯಾಯಾಧೀಶರು ಹಾಗೂ ವಕೀಲರ ಮನವೊಲಿಕೆಯಿಂದ ಈ ದಂಪತಿಗಳು ಮನಸ್ತಾಪ ಮರೆತು ರಾಜೀಯಾಗಿ ಜೀವನದಲ್ಲಿ ಒಂದಾಗಿ ಬಾಳುತ್ತೇವೆ ಎಂದು ದಂಪತಿಗಳು ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ಧನ್ಯವಾದ ಹೇಳಿ ದಂಪತಿಗಳು ಹೂವಿನ ಹಾರ ಬದಲಿಸಿ ಸಿಹಿಯನ್ನು ತಿನ್ನಿಸುವ ಮೂಲಕ ಒಂದಾದರು.
ವಕೀಲರ ಸಂಘದ ಅಧ್ಯಕ್ಷ ಎ.ನಂಜುAಡಪ್ಪ ಮಾತನಾಡಿ, ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ಜನತಾ ನ್ಯಾಯಾಲಯದಲ್ಲಿ ರಾಜಿ–ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದ್ದು, ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ರಾಷ್ಟಿçÃಯ ಲೋಕ ಅದಾಲತ್ ದಂಪತಿಗಳು ಒಂದಾದ ಪ್ರಕರಣಕ್ಕೆ ಯಶಸ್ವಿಗೆ ವಕೀಲರು, ಕಕ್ಷಿದಾರರು ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮವಾಗಿ ಸಹಕರಿಸಿದ್ದಾರೆ. ಲೋಕ್ ಅದಾಲತ್‌ನಲ್ಲಿ ಸಹಭಾಗಿಯಾದ ಸಾರ್ವಜನಿಕರಿಗೆ, ಕಕ್ಷಿದಾರರಿಗೆ, ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹಿರಿಯ ನ್ಯಾಯಾಧೀಶರಾದ ಭಾರತಿ ಅವರು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಚಿನ್ನಸ್ವಾಮಿ,ನಾಗಭೂಷಣ, ಮುಸ್ತಕ್ ಅಹಮದ್, ಅಲ್ಲಾ ಬಕಾಷ್,ನರಸಿಂಹ ರೆಡ್ಡಿ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.