ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಮದಕರಿ ನಾಯಕನ ಶೌರ್ಯ ಸಾಹಸ ಯುವ ಜನತೆಗೆ ಮಾದರಿ : ಆಂಧ್ರ ಸಂಸದ ಅಂಬಿಕಾ ಜಿ ಲಕ್ಷ್ಮೀನಾರಾಯಣ

ನಾಯಕ ಸಮಾಜ ರಾಜಕೀಯ ವನ್ನು ಬದಿಗೊತ್ತಿ ಒಂದುಗೂಡಬೇಕು, ಯಾರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಚಿಂತೆಯಿಲ್ಲ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು, ಉಳಿದಂತೆ ಸಮಾಜದ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು , ತಾಲ್ಲೂಕಿನಲ್ಲಿ ಮದಕರಿ ಯುವ ಬ್ರಿಗೇಡ್ ಮೂಲಕ ಅರ್ಥಪೂರ್ಣವಾಗಿ ಮದಕರಿ ನಾಯಕರ ಜಯಂತಿ ಆಚರಣೆ ಮಾಡಿದ್ದಾರೆ

ಮದಕರಿ ನಾಯಕನ ಶೌರ್ಯ ಸಾಹಸ ಯುವ ಜನತೆಗೆ ಮಾದರಿ

-

Ashok Nayak Ashok Nayak Nov 4, 2025 6:12 PM

ಗೌರಿಬಿದನೂರು: ಶತ್ರುಗಳನ್ನು ಸದೆಬಡಿದು ಗಂಡುಮೆಟ್ಟಿನ ನಾಡು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಎಲ್ಲರ ಪ್ರಾಣ ಮಾನ ಕಾಪಾಡಿದ ರಾಜಾವೀರ ಮದಕರಿನಾಯಕನನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಆಂಧ್ರ ಪ್ರದೇಶದ ಅನಂತಪುರ ಲೋಕಸಭಾ ಕ್ಷೇತ್ರದ ಸಂಸದರಾದ ಅಂಬಿಕಾ ಜಿ ಲಕ್ಷ್ಮೀನಾರಾಯಣ 
(MP from Anantapur, Ambika G Lakshminarayana, ) ತಿಳಿಸಿದರು.

 ನಗರದ ಡಾ.ಎಚ್ಎನ್ ಕಲಾ ಭವನದಲ್ಲಿ ಮದಕರಿ ನಾಯಕ ಯುವ ಬ್ರಿಗೇಡ್ ಹಾಗೂ ತಾಲ್ಲೂಕು ನಾಯಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಾಡದೊರೆ ವೀರ ಮದಕರಿ ನಾಯಕ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮದಕರಿ ನಾಯಕರ ಶೌರ್ಯ ಸೂರ್ಯ, ಚಂದ್ರ ಇರುವವರೆಗೆ ಅವರ ಕೀರ್ತಿ ಇರುತ್ತದೆ ಎಂದರು.

ಇದನ್ನೂ ಓದಿ: Gauribidanur News: ನ.2ಕ್ಕೆ ಮದಕರಿ ಯುವ ಬ್ರಿಗೇಡ್‌ನಿಂದ ಮದಕರಿ ಜಯಂತಿ

ಮಾಜಿ ಸಚಿವ ಸುರಪುರ ನರಸಿಂಹ ನಾಯಕ ಅವರು ಮಾತನಾಡಿ ನಾಯಕ ಸಮಾಜ ರಾಜಕೀಯ ವನ್ನು ಬದಿಗೊತ್ತಿ ಒಂದುಗೂಡಬೇಕು, ಯಾರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಚಿಂತೆಯಿಲ್ಲ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು, ಉಳಿದಂತೆ ಸಮಾಜದ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು , ತಾಲ್ಲೂಕಿನಲ್ಲಿ ಮದಕರಿ ಯುವ ಬ್ರಿಗೇಡ್ ಮೂಲಕ ಅರ್ಥಪೂರ್ಣವಾಗಿ ಮದಕರಿ ನಾಯಕರ ಜಯಂತಿ ಆಚರಣೆ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ನಾಯಕ ಸಮುದಾಯದ ಮುಖಂಡ ಆರ್ ಅಶೋಕ್ ಕುಮಾರ್ ಅವರು ಮಾತನಾಡಿ ವೀರಮದಕರಿ ನಾಯಕರು ಕೆಚ್ಚೆದೆಯ ಹೋರಾಟಗಾರರು ತಮ್ಮ ದಿಗ್ವಿಜಯ ಹಾಗೂ ಜನಪರ ಕಾರ್ಯಗಳಿಂದ ಹೆಸರುವಾಸಿಯಾಗಿದ್ದಾರೆ. ಕೆರೆ, ಕೋಟೆ, ಕೊತ್ತಲಗಳನ್ನು ನಿರ್ಮಿಸಿ ನಾಡಿನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು ,ಆ ಮೂಲಕ ನಾಡದೊರೆ ಎಂಬ ಜನಮನ್ನಣೆಯನ್ನು ಪಡೆದುಕೊಂಡ ವರು. ಅವರ ಹೋರಾಟ, ಸಾಧನೆಗಳನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕು, ವೀರ ಮದಕರಿ ನಾಯಕರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ,ಅವರು ಸಮುದಾಯವನ್ನು ಮೀರಿ ನಾಡಿಗಾಗಿ ದುಡಿದವರು ಎಂದರು.

ನಾಯಕ ಸಮುದಾಯದ ಮುಖಂಡರಾದ ಬಿ ಎನ್ ರಂಗನಾಥ್ ರವರು ಮಾತನಾಡಿ ನಾಯಕ ಸಮುದಾಯದವರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು , ಸಮುದಾಯದ ಯುವಕರು ಒಟ್ಟಾಗಿ ಸೇರಿ ನಾಡ ದೊರೆ ವೀರ ಮದಕರಿ ನಾಯಕರ ಜಯಂತಿಯನ್ನು ಆಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಸಮುದಾಯದ ಸಂಘಟನೆಗೆ ಯುವಕರು ಶ್ರಮಿಸಬೇಕೆಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಎನ್ ಬಾಬಣ್ಣ, ಮದಕರಿ ನಾಯಕರ ರಾಜ ವಂಶಸ್ಥರಾದ ರಾಜ ಮದಕರಿ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್,

ರಾಜೇಂದ್ರ, ವಿಕ್ರಂ ಬಾಬಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್ ಆರ್ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನ್, ಯುವ ಉದ್ಯಮಿ ಯತೀಶ್ ನಾಯಕ, ಮದಕರಿ ಯುವ ಬ್ರಿಗೇಡ್ ನ ಮಾದನಹಳ್ಳಿ ಪ್ರಶಾಂತ್, ನವೀನ್, ಎಸ್ ವಿ ಟಿ ಲೋಕೇಶ್, ಮೂರ್ತಿ, ಎಟಿಎಂ ನಾಗರಾಜ್, ಗಂಗಾಧರ್, ಗಜಪಡೆ ನಾಗರಾಜ್ , ನಾರಾಯಣ ಸ್ವಾಮಿ, ಜಯಲಕ್ಷ್ಮಮ್ಮ, ಲಕ್ಷ್ಮೀ, ಹಿರಿಯ ಮುಖಂಡರಾದ ಕರೆ ತಿಮ್ಮಯ್ಯ, ಕೋಡಿರ್ಲಪ್ಪ, ರಾಘು, ಗಂಗಾಧರಪ್ಪ, ರಾಜ್ ಗೋಪಾಲ್ ನಾಯಕ ಹಾಗೂ ಸಮುದಾಯದ ಮುಖಂಡರು,ಯುವ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.