Mass Visa Cancellation: ಸಾಮೂಹಿಕ ವೀಸಾ ರದ್ದು ಯೋಜನೆ; ಕೆನಡಾದಲ್ಲಿರುವ ಭಾರತೀಯರಿಗೆ ಸಂಕಷ್ಟ?
ವಂಚನೆಯ ಆತಂಕದ ಹಿನ್ನೆಲೆಯಲ್ಲಿ ಸಾಮೂಹಿಕ ವೀಸಾ ರದ್ದತಿಗೆ ಯೋಜನೆ ರೂಪಿಸುತ್ತಿರುವ ಕೆನಡಾದಲ್ಲಿ ಈಗ ಭಾರತೀಯ ನಾಗರಿಕರು ಸಂಕಷ್ಟ ಎದುರಿಸುವಂತಾಗಿದೆ. ವಂಚನೆ ಮಾಡಿ ದೇಶದೊಳಗೆ ಪ್ರವೇಶಿಸಿರುವ ಕೆಲವು ಭಾರತೀಯರು ಸೇರಿದಂತೆ ಬೇರೆಬೇರೆ ದೇಶಗಳಿಂದ ಬಂದಿರುವ ವಲಸಿಗ ವೀಸಾ ಹೊಂದಿರುವ ಅರ್ಜಿಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಕೆನಡಾದ ಅಧಿಕಾರಿಗಳು ಕೋರಿದ್ದಾರೆ. ಈ ಕುರಿತು ಮಸೂದೆಯನ್ನು ಕಾನೂನುಬದ್ಧಗೊಳಿಸಲು ಈಗಾಗಲೇ ಇದನ್ನು ಕೆನಡಾದ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಪ್ರಧಾನಿ ಮಾರ್ಕ್ ಕಾರ್ನಿ ಅವರ ಸರ್ಕಾರವು ತ್ವರಿತವಾಗಿ ಅಂಗೀಕರಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ಯುಎಸ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಕೆನಡಾ ಸರ್ಕಾರವು ಸಾಮೂಹಿಕ ವೀಸಾ ರದ್ದು ಯೋಜನೆಯನ್ನು ಕಾನೂನು ಬದ್ಧಗೊಳಿಸಲು ಪ್ರಯತ್ನಿಸುತ್ತಿದೆ. (ಸಂಗ್ರಹ ಚಿತ್ರ) -
ವಿದ್ಯಾ ಇರ್ವತ್ತೂರು
Nov 4, 2025 9:44 PM
ಒಟ್ಟಾವಾ: ವಂಚನೆ ಕಳವಳದ ಹಿನ್ನೆಲೆಯಲ್ಲಿ ಸಾಮೂಹಿಕ ವೀಸಾ ರದ್ದತಿಗೆ (Mass Visa Cancellation) ಯೋಜನೆ ರೂಪಿಸುತ್ತಿರುವ ಕೆನಡಾದಲ್ಲಿ (Canada) ಭಾರತೀಯ ನಾಗರಿಕರು ಸಂಕಷ್ಟಕ್ಕೆ ಒಳಗಾಗಬಹುದು ಎನ್ನುವ ಆತಂಕ ಉಂಟಾಗಿದೆ. ಇದು ಸಾಮೂಹಿಕ ಗಡಿಪಾರು ಯೋಜನೆಯಾಗಿದೆ ಎಂದು 300ಕ್ಕೂ ಹೆಚ್ಚು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಭಾರತ (India) ಮತ್ತು ಬಾಂಗ್ಲಾದೇಶದಿಂದ (bangladesh) ಕೆನಾಡದೊಳಗೆ ನುಗ್ಗಲು ಕೆಲವರು ಮೋಸ ಮಾಡಿ ನಕಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದನ್ನು ಗುರುತಿಸಿ ರದ್ದುಗೊಳಿಸಲು ನಿರ್ಧರಿಸಿರುವ ಕೆನಡಾ ಅಧಿಕಾರಿಗಳು ಇದಕ್ಕಾಗಿ ಯುಎಸ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ವಂಚನೆ ಮಾಡಿ ದೇಶದೊಳಗೆ ಪ್ರವೇಶಿಸಿರುವ ಕೆಲವು ಭಾರತೀಯರು ಸೇರಿದಂತೆ ಬೇರೆಬೇರೆ ದೇಶಗಳಿಂದ ಬಂದಿರುವ ವಲಸಿಗ ವೀಸಾ ಹೊಂದಿರುವ ಅರ್ಜಿಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಕೆನಡಾದ ಅಧಿಕಾರಿಗಳು ಕೋರಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದಿಂದ ಬಂದಿರುವ ವೀಸಾ ಅರ್ಜಿಗಳನ್ನು ಗುರುತಿಸಿ ರದ್ದುಗೊಳಿಸಲು ಕೆನಡಾದ ಅಧಿಕಾರಿಗಳು ಅಮೆರಿಕದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: Viral Video: ನೋಡ ನೋಡುತ್ತಿದ್ದಂತೆ ಕುಸಿದು ಬಿತ್ತು ರೋಮ್‌ನ ಪ್ರಾಚೀನ ಗೋಪುರ: ವಿಡಿಯೋ ನೋಡಿ
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಒಟ್ಟಾವಾ ನಿರ್ಬಂಧ ಹೇರಿದ ಬಳಿಕ ಕೆನಡಾದ ಅಧಿಕಾರಿಗಳು ಈ ಒಪ್ಪಂದ ಮಾಡಿಕೊಳ್ಳುವ ಯೋಜನೆ ಮಾಡಲಾಗುತ್ತಿದೆ. ರದ್ದುಗೊಳಿಸಲು ಗುರುತಿಸಿರುವ ಅರ್ಜಿಗಳಲ್ಲಿ ವಿಶೇಷವಾಗಿ ಭಾರತದ ಅರ್ಜಿದಾರರು ಕೂಡ ಇದ್ದಾರೆ. ಕಳೆದ ಆಗಸ್ಟ್‌ನಲ್ಲಿ ಕೆನಡಾದ ಪೋಸ್ಟ್ ಸೆಕೆಂಡರಿ ಸಂಸ್ಥೆಗಳು ಅಧ್ಯಯನ ಮಾಡಲು ಅನುಮತಿ ಕೋರಿದ್ದ ಸುಮಾರು ಶೇ. 74ರಷ್ಟು ಭಾರತೀಯ ಅರ್ಜಿಗಳನ್ನು ಕೆನಡಾ ತಿರಸ್ಕರಿಸಿದೆ. ಇದರಲ್ಲಿ ನಾಲ್ಕು ಅರ್ಜಿಗಳಲ್ಲಿ ಸುಮಾರು ಮೂರು ಭಾರತೀಯರದ್ದಾಗಿದೆ.
ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಕೆನಡಾ (IRCC), ಕೆನಡಾ ಗಡಿ ಸೇವೆಗಳ ಸಂಸ್ಥೆ (CBSA) ಮತ್ತು ಅವರ ಯುಎಸ್ ಪಾಲುದಾರರು "ದೇಶ-ನಿರ್ದಿಷ್ಟ ಸವಾಲುಗಳ" ಬಗ್ಗೆ ಭಾರತ ಮತ್ತು ಬಾಂಗ್ಲಾದೇಶವನ್ನು ಪ್ರತ್ಯೇಕಿಸಿ ವೀಸಾಗಳನ್ನು ನಿರಾಕರಿಸಲು ಮತ್ತು ರದ್ದುಗೊಳಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲು ಕಾರ್ಯನಿರತ ಗುಂಪನ್ನು ರಚಿಸಿದ್ದಾರೆ ಎಂದು ವಲಸೆ ಸಚಿವರ ಕಚೇರಿ ತಿಳಿಸಿದೆ ಎನ್ನಲಾಗಿದೆ.
ಈ ಕಾರ್ಯನಿರತ ಗುಂಪು ವಿವಿಧ ಸನ್ನಿವೇಶಗಳಲ್ಲಿ ಸಾಮೂಹಿಕವಾಗಿ ವೀಸಾ ರದ್ದುಗೊಳಿಸುವ ಅಧಿಕಾರವನ್ನು ಬಳಸಬಹುದು. ಸಾಂಕ್ರಾಮಿಕ ಅಥವಾ ಯುದ್ಧದ ಸಂದರ್ಭಗಳಲ್ಲಿ ಸರ್ಕಾರವು ಇಂತಹ ವಿಶೇಷ ಅಧಿಕಾರವನ್ನು ಬಳಸಲು ಬಯಸುತ್ತಿದೆ ಎಂದು ಕೆನಡಾದ ವಲಸೆ ಸಚಿವೆ ಲೀನಾ ಡಯಾಬ್ ತಿಳಿಸಿದ್ದಾರೆ. ಈ ಕುರಿತು ಸಾರ್ವಜನಿಕವಾಗಿ ಹೇಳಿರುವ ಅವರು, ಈ ಬಗ್ಗೆ ನಿರ್ದಿಷ್ಟ ದೇಶದ ವೀಸಾ ಹೊಂದಿರುವವರ ಎನ್ನುವ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ವೀಸಾ ರದ್ದುಗೊಳಿಸುವ ಮಸೂದೆಯನ್ನು ಕಾನೂನುಬದ್ಧಗೊಳಿಸಲು ಈಗಾಗಲೇ ಇದನ್ನು ಕೆನಡಾದ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಪ್ರಧಾನಿ ಮಾರ್ಕ್ ಕಾರ್ನಿ ಅವರ ಸರ್ಕಾರವು ತ್ವರಿತವಾಗಿ ಅಂಗೀಕರಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: Celina Jaitley: ಭಾರತೀಯ ಸೇನೆಯ ನಿವೃತ್ತ ಮೇಜರ್ ಯುಎಇಯಲ್ಲಿ ಬಂಧನ; ಸಹೋದರನನ್ನು ರಕ್ಷಿಸಲು ಕೋರ್ಟ್ ಮೆಟ್ಟಿಲೇರಿದ ನಟಿ
ಪ್ರತಿಭಟನೆ
ವೀಸಾ ರದ್ದುಗೊಳಿಸುವ ಕಾನೂನಿಗೆ 300ಕ್ಕೂ ಹೆಚ್ಚು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಇದು ಸಾಮೂಹಿಕ ಗಡೀಪಾರು ಯಂತ್ರವನ್ನು ಸ್ಥಾಪಿಸಲಿದೆ ಎಂದು ಆರೋಪಿಸಿದೆ. ಸರ್ಕಾರವು ತನ್ನ ಹೆಚ್ಚುತ್ತಿರುವ ಅರ್ಜಿಗಳ ಬಾಕಿಯನ್ನು ಕಡಿಮೆ ಮಾಡಲು ಸಾಮೂಹಿಕ ರದ್ದತಿ ಅಧಿಕಾರವನ್ನು ಬಯಸುತ್ತಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯರನ್ನು ಗುರಿ ಮಾಡಿದ್ದು ಯಾಕೆ?
2023ರ ಮೇ ತಿಂಗಳಲ್ಲಿ ಭಾರತೀಯರಿಂದ 500ಕ್ಕಿಂತ ಕಡಿಮೆ ಅರ್ಜಿಗಳು ಬಂದಿದ್ದವು. 2024ರ ಜುಲೈ ವೇಳೆಗೆ ಅರ್ಜಿಗಳ ಸಂಖ್ಯೆ ಸುಮಾರು 2,000 ಕ್ಕೆ ಏರಿದೆ. ಭಾರತದಿಂದ ತಾತ್ಕಾಲಿಕ ನಿವಾಸಿ ವೀಸಾ ಅರ್ಜಿಗಳನ್ನು ಪರಿಶೀಲಿಸುವುದರಿಂದ ಅರ್ಜಿ ಪ್ರಕ್ರಿಯೆ ನಿಧಾನವಾಗುತ್ತಿದೆ. ಇದರ ಪ್ರಕ್ರಿಯೆ ಸಮಯವು 2023ರ ಜುಲೈ ಅಂತ್ಯದಿಂದ ಸರಾ ಸರಿ 30 ದಿನಗಳಿಂದ 54 ದಿನಗಳಿಗೆ ಏರಿದೆ. ಅರ್ಜಿ ಪರಿಶೀಲನೆಗೆ ಹೆಚ್ಚಿನ ಸಂಪನ್ಮೂಲಗಳನ್ನು ನೀಡಿದರೂ 2024ರಿಂದ ಅನುಮೋದನೆಗಳು ಕಡಿಮೆಯಾಗಲು ಪ್ರಾರಂಭವಾಯಿತು.