ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದುರುದ್ದೇಶದಿಂದ ಮೂಲ ನಿವಾಸಿಗಳಿಗೆ ಸೌಲಭ್ಯಗಳಿಂದ ವಂಚನೆ : ಅಂಕಾಲಮೊಡಗು ಭಾಸ್ಕರ್

ನಮ್ಮ ಪಂಚಾಯಿತಿಯಲ್ಲಿ ಜಲಜೀವನ ಮಿಷನ್ ಮತ್ತು ಎಂ.ಜಿ.ನರೇಗಾ , ಪಂಚಾಯತ್‌ ರಾಜ್, ಗ್ರಾಮೀಣ ಅನುದಾನಗಳ ಅಕ್ರಮ ದುರುಪಯೋಗವಾಗಿದೆ. ಈ ಬಗ್ಗೆ ಮಾಹಿತಿ ಕೋರಿ RTI ಮೂಲಕ ಅರ್ಜಿ ಸಲ್ಲಿಸಿದರೆ ನಾವು ಕೇಳಿರುವ ಮಾಹಿತಿ ಬಿಟ್ಟು ಬೇರೆಯದೇ ಮಾಹಿತಿ ನೀಡುವ ಮೂಲಕ ಅಧಿಕಾರಿಗಳು ಅಕ್ರಮ ನಡೆಸುವವರ ಪರ ವಹಿಸಿರುವುದು ಸ್ಪಷ್ಟವಾಗಿದೆ.

ಅಂಕಾಲಮೊಡಗು ಪಂಚಾಯಿತಿಯಲ್ಲಿ ಬೇನಾಮಿ ಹೆಸರಿಗೆ ಸರಕಾರಿ ಸೌಲತ್ತು

ನಗರದ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಶಿವಾರೆಡ್ಡಿ ಮಾತನಾಡಿದರು -

Ashok Nayak
Ashok Nayak Dec 26, 2025 11:32 PM

ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ತಾಲೂಕು ಕಡದನಮರಿ ಪಂಚಾಯಿತಿಯಲ್ಲಿ ಹರ್‌ಘರ್ ಜಲ್ ನೀರು ಸಂಪರ್ಕದ ಚಂದಾದಾರರ ಪಟ್ಟಿಯಲ್ಲಿ ಅನಿವಾಸಿಗಳ ಅಕ್ರಮ ಸೇರ್ಪಡೆ ಮೂಲಕ 14,15ನೇ ಹಣಕಾಸು ಆಯೋಗ(14th and 15th Finance Comm ission)ದ ಅನುದಾನವನ್ನು ಅಧಿಕಾರಿಗಳು ದುರ್ಭಳಕೆ ಮಾಡಿಕೊಂಡಿದ್ದಾರೆ. ಇದರ ಹಿಂದೆ ಯಾವುದೋ ದುಷ್ಟಾಲೋಚನೆ ಇದೆ ಎಂದು ಸಾಮಾಜಿಕ ಹೋರಾಟಗಾರ ಭಾಸ್ಕರ್ ಅಂಕಾಲಮೊಡಗು ಶಿವಾರೆಡ್ಡಿ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶ್ರೀ ಶಶಿಧರ್ ಕೋಸಂಬೆ ಅವರಿಂದ ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ

ನಮ್ಮ ಪಂಚಾಯಿತಿಯಲ್ಲಿ ಜಲಜೀವನ ಮಿಷನ್ ಮತ್ತು ಎಂ.ಜಿ.ನರೇಗಾ , ಪಂಚಾಯತ್‌ ರಾಜ್, ಗ್ರಾಮೀಣ ಅನುದಾನಗಳ ಅಕ್ರಮ ದುರುಪಯೋಗವಾಗಿದೆ. ಈ ಬಗ್ಗೆ ಮಾಹಿತಿ ಕೋರಿ RTI ಮೂಲಕ ಅರ್ಜಿ ಸಲ್ಲಿಸಿದರೆ ನಾವು ಕೇಳಿರುವ ಮಾಹಿತಿ ಬಿಟ್ಟು ಬೇರೆಯದೇ ಮಾಹಿತಿ ನೀಡುವ ಮೂಲಕ ಅಧಿಕಾರಿಗಳು ಅಕ್ರಮ ನಡೆಸುವವರ ಪರ ವಹಿಸಿರುವುದು ಸ್ಪಷ್ಟವಾಗಿದೆ.ಹೀಗಾಗಿ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಕಡದನಮರಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಆಡಳಿತಾತ್ಮಕ ಅವ್ಯವಸ್ಥೆ, ಪಾರದರ್ಶಕತೆಯ ಕೊರತೆ, ಸಾರ್ವಜನಿಕ ನಿಧಿಗಳ ದುರ್ಭಳಕೆ ಕುರಿತು ಮಾಧ್ಯಮದ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ ಎಂದರು.

ಸಾರ್ವಜನಿಕ ನಿಧಿಗಳ ದುರ್ಭಳಕೆ, ನಿಧಿಗಳ ಪ್ರಮಾಣ, ಹಂಚಿಕೆಯ ವಿಧಾನ, ಇದರಿಂದಾಗಿ ಗ್ರಾಮೀಣ ಅಭಿವೃದ್ದಿಯ ಮೇಲೆ ಆಗುವ ಪರಿಣಾಮ, ಸಾರ್ವಜನಿಕ ಸುರಕ್ಷತೆ ಮತ್ತು ಸಂಸ್ಥೆ ಗಳ ನೈತಿಕತೆಗೆ ಸಂಬಂಧಿಸಿದಂತೆ ಈ ಪ್ರಶ್ನೆಗಳನ್ನು ಎತ್ತುವುದು ನಾಗರೀಕರ ಮತ್ತು ಮಾಧ್ಯಮದ ಜವಾಬ್ದಾರಿಯಾಗಿದೆ. ಹೀಗಾಗಿ ಕಡದನಮರಿ ಗ್ರಾಮಪಂಚಾಯಿತಿ ಅಕ್ರಮಗಳ ಬಗ್ಗೆ ಧನಿ ಎತ್ತಿದರೆ ನನ್ನ ಮೇಲೆ ಹಲ್ಲೆ ಮಾಡಲು ಬರುತ್ತಾರೆ ಎಂದು ಹೇಳಿದರು.