Gauribidanur News: ಪ್ರಜ್ಞಾ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ
ಜಿಲ್ಲಾ ನಿರ್ದೇಶಕರಾದ ಚಿದಾನಂದ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಜ್ಞಾನ ವಿಕಾಸ ದಿಂದ ಮಹಿಳೆಯರು ಉತ್ತಮ ಜ್ಞಾನವಂತರಾಗಿರುವ ಬಗ್ಗೆ, ಉತ್ತಮ ನಾಯಕತ್ವ ಗುಣ ಬೆಳೆಸಿ ಉನ್ನತ ಸ್ಥಾನ ದಲ್ಲಿರುವ ಬಗ್ಗೆ ತಿಳಿಸಿದ ಅವರು ಯೋಜನೆಯ ಕಾರ್ಯಕ್ರಮಗಳನ್ನು ಬಳಸಿಕೊಂಡು ಉನ್ನತಿಗೊಳ್ಳುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
-
ಗೌರಿಬಿದನೂರು: ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ಗುರುವಾರ ನಾಮಗೊಂಡ್ಲು ಗ್ರಾಮದ ಪ್ರಜ್ಞಾ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಕಾರ್ಯಕ್ರಮ ನಡೆಸಲಾಯಿತು.
ಜಿಲ್ಲಾ ನಿರ್ದೇಶಕರಾದ ಚಿದಾನಂದ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಜ್ಞಾನ ವಿಕಾಸದಿಂದ ಮಹಿಳೆಯರು ಉತ್ತಮ ಜ್ಞಾನವಂತರಾಗಿರುವ ಬಗ್ಗೆ, ಉತ್ತಮ ನಾಯಕತ್ವ ಗುಣ ಬೆಳೆಸಿ ಉನ್ನತ ಸ್ಥಾನದಲ್ಲಿರುವ ಬಗ್ಗೆ ತಿಳಿಸಿದ ಅವರು ಯೋಜನೆಯ ಕಾರ್ಯಕ್ರಮಗಳನ್ನು ಬಳಸಿಕೊಂಡು ಉನ್ನತಿಗೊಳ್ಳುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ವಿವಿಧ ಬಗೆಯ ಪೌಷ್ಠಿಕ ಆಹಾರಗಳನ್ನು ಸದಸ್ಯರು ತಯಾರು ಮಾಡಿಕೊಂಡು ಬಂದು ಅದರ ಬಗ್ಗೆ ಸದಸ್ಯರು ಉತ್ತಮವಾಗಿ ಪ್ರಸ್ತುತ ಪಡಿಸಿದರು. ಯೋಜನೆಯಿಂದ ನಿರ್ಗತಿಕರಿಗೆ ಮಾಶಾಸನ ನೀಡುತ್ತಿದ್ದು, ತಾಲೂಕಿನಲ್ಲಿ ಸುಮಾರು ಎಪ್ಪತ್ತು ಮಂದಿಗೆ ಪ್ರತಿ ತಿಂಗಳು ಸಾವಿರ ರೂಪಾಯಿಗಳ ಮಾಶಾಸನ ನೀಡುತ್ತಿದ್ದು, ಪ್ರಸ್ತುತ ಜರಬಂಡಿಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಪಾಂಡುರಂಗಪ್ಪ ಅವರಿಗೆ ಯಾರು ಇಲ್ಲದೆ ನಿರ್ಗತಿಕರಾಗಿದ್ದು, ಇವರಿಗೆ ಈ ತಿಂಗಳಿಂದ ಮಾಶಾಸನ ಮಂಜೂರಾಗಿದ್ದು, ಮಂಜೂರಾತಿ ಕೈಪಿಡಿಯನ್ನು ಈ ಸಂದರ್ಭ ದಲ್ಲಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಲಯನ್ಸ್ ಕ್ಲಬ್ ಸಂಸ್ಥೆಯ ಅಶ್ವಥರೆಡ್ಡಿ ಮಾತನಾಡಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಾರ್ಯಕ್ರಮಗಳು ಜನ ಹಿತವಾಗಿ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು. ನಾಮಗೊಂಡ್ಲು ಗ್ರಾಮದ ಇತಿಹಾಸವನ್ನು ತಿಳಿಸಿದರು. ತಾಲ್ಲೂಕು ಯೋಜನಾಧಿಕಾರಿಗಳಾದ ನಾಗರಾಜ್ ನಾಯ್ಕ್ ರವರು ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನೀತಾ ಅವರು, ವಹಿಸಿಕೊಂಡು ಜ್ಞಾನ ವಿಕಾಸ ಕೇಂದ್ರವನ್ನು ಉತ್ತಮವಾಗಿ ನೆಡೆಸಿಕೊಂಡು ಹೋಗುವ ಬಗ್ಗೆ ತಿಳಿಸಿದರು. ಕಾರ್ಯಕ್ರಮ ವನ್ನು ಜ್ಞಾನ ವಿಕಾಸ ಸಮನ್ವಯಧಿಕಾರಿ ಅಶ್ವಿನಿ ನಿರ್ವಹಣೆ ಮಾಡಿದರು. ಮೇಲ್ವಿಚಾರಕ ರಾದ ಉಷಾ, ಸೇವಾಪ್ರತಿನಿಧಿ ಹಸಿನ, ಕೇಂದ್ರದ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತ ರಿದ್ದರು.