Internal reservation: ಒಳಮೀಸಲಾತಿ ರೋಸ್ಟರ್ ಹಂಚಿಕೆಗೆ ವಿರೋಧ: 24ರಂದು ಬೆಂಗಳೂರಿನಲ್ಲಿ ಸಮಾವೇಶ
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿ ಜಾರಿ ಮಾಡಿದ್ದು, ಇದು ಎಸ್‌ಸಿ ಒಳಮೀಸಲಾತಿ ವರ್ಗೀಕರಣದಲ್ಲಿ ಸಿ-ಪ್ರವರ್ಗ ದಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ, ಆದಿಯಾ, ಅಗೇರ ಸೇರಿದಂತೆ 63 ಜಾತಿಗಳಿಗೆ ಮಾರಕ ವಾಗಿದೆ. ರೋಸ್ಟರ್ ಪದ್ಧತಿ ಜೀವಂತ ಶವವಾಗಿದೆ.
-
ಬಾಗೇಪಲ್ಲಿ: ಒಳಮೀಸಲಾತಿ ರೋಸ್ಟರ್ ಹಂಚಿಕೆ(Internal reservation roster allocation) ವಿರೋಧಿಸಿ, ಹಳೇ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿಗೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಮಾ.24ರಂದು ಬೆಳಗ್ಗೆ 10ಕ್ಕೆ ಬೃಹತ್ ಸಮಾವೇಶ ಕೈಗೊಂಡಿದ್ದು, ಇದರಲ್ಲಿ ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸೂಕ್ಷ್ಮ ಪರಿಶಿಷ್ಟ ಜಾತಿಗಳ ಸಮುದಾಯದವರು ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯರಾದ ಎಂ.ವಿ.ಕೃಷ್ಣಪ್ಪ ಕರೆ ನೀಡಿದರು.
ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಭಾನುವಾರ ಭೋವಿ ಸಮಾಜ ಹಾಗೂ ಸೂಕ್ಷ್ಮ ಪರಿಶಿಷ್ಟ ಜಾತಿಗಳ ನೇತೃತ್ವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿ ಜಾರಿ ಮಾಡಿದ್ದು, ಇದು ಎಸ್‌ಸಿ ಒಳಮೀಸಲಾತಿ ವರ್ಗೀಕರಣದಲ್ಲಿ ಸಿ-ಪ್ರವರ್ಗ ದಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ, ಆದಿಯಾ, ಅಗೇರ ಸೇರಿದಂತೆ 63 ಜಾತಿಗಳಿಗೆ ಮಾರಕವಾಗಿದೆ. ರೋಸ್ಟರ್ ಪದ್ಧತಿ ಜೀವಂತ ಶವವಾಗಿದೆ.
ಇದನ್ನೂ ಓದಿ: Bagepally News: ವ್ಯವಹಾರಿಕ ಕೌಶಲ ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿ: ಆರ್.ಹನುಮಂತ ರೆಡ್ಡಿ
ಈ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಈ ಸಮಾವೇಶ ಆಯೋಜಿಸಿದ್ದು, ಈ ಸಮುದಾಯ ಗಳ ಪ್ರತಿ ಮನೆಯಿಂದ ಒಬ್ಬ ಸದಸ್ಯ ಭಾಗವಹಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡ ಬೇಕಾಗಿದೆ. ಆದ್ದರಿಂದ ಸಾಗರೋಪಾದಿಯಾಗಿ ಸಮುದಾಯದ ಜನರು ಆಗಮಿಸಬೇಕು ಎಂದು ತಿಳಿಸಿದರು.
ಎಸ್‌ಸಿ ರೋಸ್ಟರ್ ಪದ್ಧತಿ ಪ್ರಕಾರ ಈ 63 ಸಮುದಾಯದವರಿಗೆ ಮೀಸಲು ಸೌಲಭ್ಯ ದೊರೆಯಬೇಕಾದರೆ ಎರಡು ತಲೆಮಾರು ಬೇಕಾಗುತ್ತದೆ. ಇದು ಶಾಶ್ವತವಾಗಿ ಜಾರಿಯಾದರೆ ಈ ಸಮುದಾಯಗಳೆಲ್ಲ ಅಧೋಗತಿಯತ್ತ ಮುಖ ಮಾಡಲಿವೆ. ಸಮಾಜದ ಬೆಳವಣಿಗೆಯೂ ಇಳಿಮುಖವಾಗಲಿದೆ ಎಂದು ಎಚ್ಚರಿಸಿದರು.
ಅಪೂರ್ಣವಾಗಿರುವ ನ್ಯಾ.ನಾಗಮೋಹನದಾಸ್ ವರದಿಯಲ್ಲೇ 29 ಕೋಷ್ಟಕಗಳ ಪೈಕಿ 19 ಕೋಷ್ಟಕಗಳಲ್ಲಿ ಈ ಸಮುದಾಯಗಳು ಸಾಮಾಜಿಕವಾಗಿ ಹಿಂದುಳಿದಿವೆ. ಸುಪ್ರೀಕೋರ್ಟ್ ತೀರ್ಪಿನ ಪ್ರಕಾರ ಹಿಂದುಳಿವಿಕೆಯ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣವಾದರೆ ಇವುಗಳೆಲ್ಲವೂ ಎ-ಪ್ರವರ್ಗದಲ್ಲಿ ಬರಬೇಕು. ಆದರೆ ರಾಜಕೀಯ ಶಕ್ತಿ, ಧ್ವನಿ ಇಲ್ಲದ ಕಾರಣಕ್ಕೆ ಸಿ-ಪ್ರವರ್ಗಕ್ಕೆ ಸೇರಿಸಲಾಗಿದೆ. ಆದ್ದರಿಂದ ಒಳ ಮೀಸಲಾತಿ ವರ್ಗೀಕರಣವನ್ನೇ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದಿಂದ ಜನಗಣತಿ ನಡೆಯಲಿದ್ದು, ಇದರಿಂದ ದೊರೆಯುವ ಎಸ್‌ಸಿ ಜನಸಂಖ್ಯೆ ದತ್ತಾಂಶದ ಮೇಲೆ ಒಳಮೀಸಲಾತಿ ನಿಗದಿಪಡಿಸಬೇಕು. ಈಗ ಆಗಿರುವ ಅನ್ಯಾಯ ಸರಿಪಡಿಸಿದ್ದರೆ ಸಿಡಿದೇಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭೋವಿ ಸಮಾಜದ ಜಿಲ್ಲಾ ಅದ್ಯಕ್ಷ ಪಿ.ಡಿ.ವೆಂಕಟರಾಮನ ಮಾತನಾಡಿ, ಮೀಸಲಾತಿ ವಿಷಯದಲ್ಲಿ ಅನ್ಯಾಯ ಮಾಡಿದ ಹಿಂದಿನ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಿದ್ದು, ಇದೀಗ ಒಳಮೀಸಲಾತಿಯಲ್ಲಿನ ಸಮಸ್ಯೆ ಬಗೆಹರಿಸದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೂ ಪಾಠ ಕಲಿಸು ವುದು ನಿಶ್ಚಿತ. ಎಸ್‌ಸಿ ಶೇ.15ರಷ್ಟು ಪ್ರಕಾರ ನೇಮಕಾತಿ ಕೈಗೊಂಡಿರುವುದು ತಾತ್ಕಾಲಿಕ ವಾಗಿ ನಿರಾಳತೆ ಸಿಕ್ಕಿದೆ. ನಮಗೆ ದುರಾಸೆ ಇಲ್ಲ. ಎಸ್‌ಸಿಗಳೆಲ್ಲರನ್ನೂ ಜತೆಯಲ್ಲಿ ಕರೆದು ಕೊಂಡು ಹೋಗಬೇಕು. ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಎಸ್‌ಸಿ-ಎಸ್‌ಟಿ ಮೀಸಲಾತಿ (SC-ST Reservation) ಪ್ರಮಾಣ ಏರಿಕೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು. ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ಪೂರ್ಣಪ್ರಮಾಣದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಬಳಕೆ ಮಾಡಬೇಕು. ಅನ್ಯಉದ್ದೇಶಕ್ಕೆ ಬಳಕೆಗೆ ಕಡಿವಾಣ ಹಾಕ ಬೇಕು. ಹೀಗಾಗಿ, ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೋವಿ ಸಂಘದ ಅಧ್ಯಕ್ಷ ವಿನಯ್ ಕುಮಾರ್, ಅಶ್ವತ್ಥಪ್ಪ,ಶ್ರೀನಿವಾಸ್ ಕೆ.ವಿ., ಲಂಬೂ ಶ್ರೀನಿವಾಸ್, ರಾಮಾಂಜನಪ್ಪ, ನಾರಾಯಣಪ್ಪ, ವೆಂಕಟೇಶ್. ಆರ್., ತಿವೇಂದ್ರ, ನರೇಂದ್ರ, ರಂಗಸ್ವಾಮಿ, ತಿಪ್ಪನ್ನ ಹಾಗೂ ಇತರರು ಹಾಜರಿದ್ದರು.