ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಕಾಸಾಪ ಏಕಪಕ್ಷೀಯ ನಿರ್ಧಾರಕ್ಕೆ ಆಕ್ರೋಶ; ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮ್ಮೇಳನ ಆಯೋಜನೆ ಆರೋಪ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ, ತಾಲೂಕು ಅಧ್ಯಕ್ಷರು ಮತ್ತು ಕನ್ನಡಪರ ಹೋರಾಟ ಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಭೆ ನಡೆಸಿ ಸಮ್ಮೇಳನದ ದಿನಾಂಕವನ್ನು ಏಕಪಕ್ಷೀಯವಾಗಿ ನಿಗದಿಪಡಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರರಾದ ಅಗ್ರಹಾರ ಮೋಹನ್, ಶ್ರೀರಾಮನಗರ ಶಂಕರ್, ಪ್ರಕಾಶ್, ಮಂಜುನಾಥ್, ಆಸೀಫ್ ಹಾಗೂ ಸತ್ಯನಾರಾಯಣ ಸಿಂಗ್ ಆರೋಪಿಸಿದರು.

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಪರ ಸಂಘಟನೆಗಳ ಬಹಿಷ್ಕಾರ

-

Profile
Ashok Nayak Nov 17, 2026 9:44 PM

ಚಿಂತಾಮಣಿ: ನಗರದ ಅಂಬೇಡ್ಕರ್ ಭವನದಲ್ಲಿ ನ.19 ಮತ್ತು 20ರಂದು ನಡೆಯಲಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahitya Sammelana)ವನ್ನು ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟ ಬಹಿಷ್ಕರಿಸಲು ನಿರ್ಧರಿಸಿದೆ.

ಸಮ್ಮೇಳನದ ಆಯೋಜನಾ ವೈಖರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಕಾರ್ಯ ವೈಖರಿಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದ ಕನ್ನಡಪರ ಸಂಘಟನೆಗಳ ಮುಖಂಡರು, ಪರಿಷತ್ತಿನ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ಮತ್ತು ಪದಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಏಕಪಕ್ಷೀಯ ನಿರ್ಧಾರಕ್ಕೆ ವಿರೋಧ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿ ಕಾರಿಗಳು ಯಾವುದೇ ಮುನ್ಸೂಚನೆ ನೀಡದೆ, ತಾಲೂಕು ಅಧ್ಯಕ್ಷರು ಮತ್ತು ಕನ್ನಡಪರ ಹೋರಾಟ ಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಭೆ ನಡೆಸಿ ಸಮ್ಮೇಳನದ ದಿನಾಂಕವನ್ನು ಏಕಪಕ್ಷೀಯವಾಗಿ ನಿಗದಿಪಡಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರರಾದ ಅಗ್ರಹಾರ ಮೋಹನ್, ಶ್ರೀರಾಮನಗರ ಶಂಕರ್, ಪ್ರಕಾಶ್, ಮಂಜುನಾಥ್, ಆಸೀಫ್ ಹಾಗೂ ಸತ್ಯನಾರಾಯಣ ಸಿಂಗ್ ಆರೋಪಿಸಿದರು.

ಇದನ್ನೂ ಓದಿ: Chikkaballapur News: ಹಿರಿಯರಿಂದ ಕಿರಿಯರಿಗೆ ದೀಪ ವರ್ಗಾವಣೆ; ಕುಟುಂಬದ ಐಕ್ಯತೆ, ಕುಲಪರಂಪರೆ ಸಾರಿದ ವಿಶಿಷ್ಟ ಸಂಪ್ರದಾಯ

ನಾಡು, ನುಡಿ, ನೆಲ ಮತ್ತು ಜಲದ ವಿಚಾರವಾಗಿ ಹೋರಾಟ ನಡೆಸುವ ಕನ್ನಡಪರ ಸಂಘಟನೆ ಗಳನ್ನು ಪರಿಷತ್ತು ನಿರಂತರವಾಗಿ ಕಡೆಗಣಿಸುತ್ತಿದೆ. ಕನ್ನಡ ಭವನದ ಉದ್ಘಾಟನೆಯಿಂದ ಹಿಡಿದು ವಿವಿಧ ಕಾರ್ಯಕ್ರಮಗಳವರೆಗೆ ಹೋರಾಟಗಾರರನ್ನು ಆಹ್ವಾನಿಸಿ ಗೌರವಿಸಿಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ಅನುದಾನದ ಬಳಕೆ ಕುರಿತು ಪ್ರಶ್ನೆ: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಯಾರ ವೈಯಕ್ತಿಕ ಹಣದಿಂದ ನಡೆಯುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹೀಗಾಗಿ ಪರಿಷತ್ತನ್ನು ಯಾರೂ ತಮ್ಮ ಸ್ವಂತ ಆಸ್ತಿಯಂತೆ ಪರಿಗಣಿಸಬಾರದು ಎಂದು ಮುಖಂಡರು ಎಚ್ಚರಿಸಿದರು.

ಪರಿಷತ್ತಿನ ಪದಾಧಿಕಾರಿಗಳ ಈ ಧೋರಣೆಗೆ ಮುಂಬರುವ ಚುನಾವಣೆಯಲ್ಲಿ ಆಜೀವ ಸದಸ್ಯರು ಹಾಗೂ ಮತದಾರರಾಗಿರುವ ಕನ್ನಡಪರ ಹೋರಾಟಗಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಕನ್ನಡ ಜಾಗೃತಿ ವೇದಿಕೆ, ಕನ್ನಡ ಸೇನೆ, ಕನ್ನಡ ಸಿಂಹ ಸೇನೆ, ಕರವೇ ಸ್ವಾಭಿಮಾನಿ ಬಣ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.