Chikkaballapur News: ಬಾಗೇಪಲ್ಲಿಯ ಪಿ.ಎಂ.ಶ್ರೀ ಶಾಲೆ ಜಿಲ್ಲಾ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆ
ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಆಶಯದೊಂದಿಗೆ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಜಿಲ್ಲೆಯ ೧೦ ‘ಪಿಎಂಶ್ರೀ ಶಾಲೆಗಳಲ್ಲಿ ಅನುಷ್ಠಾನ ಮಾಡಿದ್ದು ಈ ಪೈಕಿ ಬಾಗೇಪಲ್ಲಿ ಪಟ್ಟಣದ ಪಿ.ಎಂ.ಶ್ರೀ ಶಾಲೆ ಅತ್ಯುತ್ತಮ ಶಾಲೆ ಪ್ರಶಸ್ತಿ ಪಡೆದಿರುವುದು ಸಂತಸದ ವಿಷಯವಾಗಿದೆ ಇದಕ್ಕೆ ಕಾರಣರಾದ ಸಿ.ಆರ್.ಸಿ.ಶಿಕ್ಷಣ ಸಂಯೋಜಕರು ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ

ರಾಷ್ಟ್ರೀಯ ಶಿಕ್ಷಣ ನೀತಿ ಆಯೋಗ ಬಿಡುಗಡೆಯಾದ ಐದು ವರ್ಷಗಳನ್ನು ಗುರುತಿಸುವ ಸಲುವಾಗಿ ಶಿಕ್ಷಣ ಸಚಿವಾಲಯವು ದೆಹಲಿಯಲ್ಲಿ ಜುಲೈ ೨೯ ರಂದು ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು.

ಬಾಗೇಪಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿ ಆಯೋಗ ಬಿಡುಗಡೆಯಾದ ಐದು ವರ್ಷಗಳನ್ನು ಗುರುತಿಸುವ ಸಲುವಾಗಿ ಶಿಕ್ಷಣ ಸಚಿವಾಲಯವು ದೆಹಲಿಯಲ್ಲಿ ಜುಲೈ ೨೯ ರಂದು ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು.
ಭಾಗ್ಯನಗರದ ಬಿ.ಆರ್.ಸಿ.ಕೇಂದ್ರದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಶಿಕ್ಷಣ ಸಂಯೋಜಕರು ಶಿಕ್ಷಕರು, ಹಾಗೂ ಪಟ್ಟಣದ ಪಿ.ಎಂ.ಶ್ರೀ ಶಾಲೆಯ ಮಕ್ಕಳೊಂದಿಗೆ ಬಿಇಒ ವೆಂಕಟಶಪ್ಪ ನೇರ ಪ್ರಸಾರದ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಆಶಯದೊಂದಿಗೆ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಜಿಲ್ಲೆಯ ೧೦ ‘ಪಿಎಂಶ್ರೀ ಶಾಲೆಗಳಲ್ಲಿ ಅನುಷ್ಠಾನ ಮಾಡಿದ್ದು ಈ ಪೈಕಿ ಬಾಗೇಪಲ್ಲಿ ಪಟ್ಟಣದ ಪಿ.ಎಂ.ಶ್ರೀ ಶಾಲೆ ಅತ್ಯುತ್ತಮ ಶಾಲೆ ಪ್ರಶಸ್ತಿ ಪಡೆದಿರುವುದು ಸಂತಸದ ವಿಷಯವಾಗಿದೆ ಇದಕ್ಕೆ ಕಾರಣರಾದ ಸಿ.ಆರ್.ಸಿ.ಶಿಕ್ಷಣ ಸಂಯೋಜಕರು ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ತಪ್ಪಿತಸ್ಥರಿಗೆ ಕಾನೂನಿನಂತೆ ಶಿಕ್ಷೆಯಾಗಬೇಕು
ಹೊಸ ಶಿಕ್ಷಣ ನೀತಿಯನ್ನು ಬಾಗೇಪಲ್ಲಿ ಪಟ್ಟಣದ ಪಿ.ಎಂ.ಶ್ರೀ ಶಾಲೆ ಅಳವಡಿಸಲಾದ ಅತ್ಯಾಧುನಿಕ ಮೂಲ ಸೌಕರ್ಯ, ಸುಸಜ್ಜಿತ ಪ್ರಯೋಗಾಲಯ. ತಂತ್ರಜ್ಞಾನ ಆಧಾರಿತ ಸ್ಟ್ರಾರ್ಟ್ ಕ್ಲಾನ್, ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಎಲ್ಲ ಮಾದರಿಯ ಕ್ರೀಡೆಗಳಿಗೆ ಪ್ರೊತ್ಸಾಹ ನೀಡುವುದು ಹಾಗೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಹಿನ್ನಲೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಆರ್.ಹನುಮಂತ ರೆಡ್ಡಿ ಮಾತನಾಡಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರ ಕನಸಿನ ಯೋಜನೆಯಾದ ಪಿಎಂ ಶ್ರೀ ಯೋಜನೆ ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಜಾರಿಗೊಳ್ಳಲಿರುವ ಈ ಯೋಜನೆಯು ಶಾಲೆಗಳಲ್ಲಿ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ರೂಂ, ಗ್ರಂಥಾಲಯಗಳು, ಕ್ರೀಡಾ ಸಲಕರಣೆಗಳು, ಕಲಾ ಕೊಠಡಿ ಸಹಿತ ಅತ್ಯಾಧುನಿಕ ಶಿಕ್ಷಣವನ್ನು ಒದಗಿಸಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ. ಸರಕಾರಿ ಶಾಲೆಗಳು ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕು, ಇಲ್ಲಿನ ಮಕ್ಕಳು ರಾಷ್ಟ್ರಮಟ್ಟದಲ್ಲಿ ಬೆಳೆಯ ಬೇಕು ಎಂಬುದೇ ಮಾನ್ಯ ಪ್ರಧಾನಿಗಳ ಸಹಿತ ನಮ್ಮೆಲ್ಲರ ಆಶಯವಾಗಿದೆ ಎಂದರು.
ಕೇಂದ್ರ ಸರ್ಕಾರದ ಆಶಯಕ್ಕೆ ತಕ್ಕಂತೆ ಜಿಲ್ಲಾ ಮಟ್ಟದ ಸಾಧನೆ ತೋರಿರುವ ಕಾರಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಮಸ್ತ ಆಡಳಿತ ಮಂಡಳಿ ಅಭಿನಂದನೆಗೆ ಅರ್ಹರು ಎಂದು ಶಿಕ್ಷಣ ಸಂಯೋಜಕ ಆರ್ .ವೆಂಕಟರಾಮ್ ಹೇಳಿದರು.
ಈ ಸಂದರ್ಭದಲ್ಲಿ ಪಿ.ಎನ್.ನಾರಾಯಣ ಸ್ವಾಮಿ, ಬಿ.ಆರ್.ಸಿ.ಮಂಜುನಾಥ್, ವೈ.ಎ.ಮಂಜುನಾಥ್, ಶಿವಪ್ಪ ಹಾಗೂ ಪಿ.ಎಂ.ಶ್ರೀ ಶಾಲಾ ಶಿಕ್ಷಕರು ಮಕ್ಕಳು ಹಾಜರಿದ್ದರು.