ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಒಂದು ತಿಂಗಳ ಕಾಲ ನಡೆದ ಸಿವಿವಿ ಜಯಂತಿ ಹಾಗೂ ದತ್ತಿ ದಿನಾಚರಣೆ ಸಂಪನ್ನ

ಕೆವಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಯಾದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ದತ್ತಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಚಟವಟಿಕೆಗಳು, ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಣೆ ಸೇರಿ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು.

ಸಿವಿವಿ ಜಯಂತಿ ಹಾಗೂ ದತ್ತಿ ದಿನಾಚರಣೆ ಸಂಪನ್ನ

Ashok Nayak Ashok Nayak Jul 30, 2025 11:32 PM

ಚಿಕ್ಕಬಳ್ಳಾಪುರ : ಕಳೆದ ಒಂದು ತಿಂಗಳಿಂದ ವಿವಿಧ ಚಟವಟಿಕೆಗಳು, ಸಾಮಾಜಿಕ ಕಾರ್ಯಕ್ರಮ ಗಳ ಮೂಲಕ ಮನೆ ಮಾತಾಗಿದ್ದ ಪಂಚಗಿರಿ ದತ್ತಿ ದಿನಾಚರಣೆ ಮತ್ತು ಸಿ.ವಿ.ವೆಂಕಟರಾಯಪ್ಪ ರವರ 110ನೇ ಜಯಂತಿಯು ಬುಧವಾರ ಸಿವಿವಿ ಸಮಾಧಿಗೆ ಪುಷ್ಪಾಲಂಕಾರ, ವೆಂಕಟರಾಯಪ್ಪ ಅವರ ಮೂರ್ತಿಯ ಪ್ರತಿಷ್ಠಾಪನೆ ಸಹಿತ ಪೂಜೆ, ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಗಣ್ಯರಿಗೆ ಸನ್ಮಾನ, ಸಂಸ್ಥೆಯ ನಿವೃತ್ತರಿಗೆ  ಅದ್ಧೂರಿ ಬೀಳ್ಕೊಡುಗೆ ಮೂಲಕ ಸಾರ್ಥಕವಾಗಿ ಸಂಪನ್ನವಾಯಿತು.

ನಗರಹೊರವಲಯದ ಕೆವಿ ಕ್ಯಾಂಪಸ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರು. ಕೆವಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಯಾದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ದತ್ತಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಚಟವಟಿಕೆಗಳು, ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಣೆ ಸೇರಿ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇದಕ್ಕೂ ಮುನ್ನ ಸಿವಿವಿ ಜಯಂತಿ ಅಂಗವಾಗಿ ಜಿಲ್ಲಾಸ್ಪತ್ರೆ, ತಾಯಿ ಮಕ್ಕಳ ಆಸ್ಪತ್ರೆ, ಮಾನಸ ಆಸ್ಪತ್ರೆ ರೋಗಿಗಳಿಗೆ ಟ್ರಸ್ಟ್ ಅಧ್ಯಕ್ಷ ಕೆ.ವಿ.ನವೀನ್‌ ಕಿರಣ್ ಹಣ್ಣು ಹಾಗೂ ಬ್ರೆಡ್ ವಿತರಿಸಿದರು. ಮಾನಸ ವೃದ್ಧಾಶ್ರಮ ಹಾಗೂ ಸುಲ್ತಾನಪೇಟೆ ದ್ವಾರಕಾಮಯಿ ವೃದ್ಧಾಶ್ರಮಗಳಲ್ಲಿ ಇಡೀ ದಿನದ ಮೂರು ಹೊತ್ತಿನ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Chikkaballapur News: ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು: ಪೆರೆಸಂದ್ರ ಎಂ.ವೆಂಕಟೇಶ್

ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಸಿ.ವಿ.ವೆಂಕಟರಾಯಪ್ಪ ಅವರಂತಹ ದೂರದೃಷ್ಟಿಯ ನಾಯಕರನ್ನು ನಾನು ಕಂಡಿಲ್ಲ.ಹಳ್ಳಿಯಲ್ಲಿ ತೋಟಗಳಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ರಾಜಕೀಯಕ್ಕೆ ಕರೆತಂದು ಶಾಸಕ ಮಾಡಿದರು.ಚಿಕ್ಕಬಳ್ಳಾಪುರವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡಿದರು. ಪುರಸಭೆಯಲ್ಲಿ ೨೫ ವರ್ಷಗಳ ಕಾಲ ಆಡಳಿತ ನಡೆಸಿದ ಅವರು ಜನಾನುರಾಗಿ ನಾಯಕತ್ವನ್ನು ನೀಡಿದ್ದರು.ಇಂತಹ ಮಹನೀಯರ ಜಯಂತಿ ಮತ್ತು ದತ್ತಿ ದಿನಾ ಚರಣೆಯನ್ನು ದೇಶದಲ್ಲಿ ಮಾದರಿಯಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ತಾತನ ಹಾದಿ ಯಲ್ಲಿ ನಡೆಯುತ್ತಿರುವ ಯುವನಾಯಕ ನವೀನ್‌ಕಿರಣ್ ಸಹ ಜನಾನುರಾಗಿ ನಾಯಕರಾಗಿ ಬೆಳೆದಿರುವುದು, ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ದಿ ಪಡಿಸಿಸುತ್ತಿರುವುದು ಆರೋಗ್ಯವಂತ ಸಮಾಜದ ಲಕ್ಷಣವಾಗಿದೆ ಎಂದರು.

sadhakarau

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಣ ಭೀಷ್ಮರೆಸಿಕೊಂಡಿರುವ ಸಿ.ವಿ.ವೆಂಕಟರಾಯಪ್ಪ ಅವರ ಸಾಧನೆಗಳು ಆಚಂದ್ರಾರ್ಕ ವಾಗಿ ಉಳಿದಿವೆ.ಶಿಕ್ಷಣವೇ ಪ್ರಗತಿಯ ಮೂಲ ಎಂಬುದನ್ನು ಅರಿತಿದ್ದ ಸಿ.ವಿ.ವೆಂಕಟರಾಯಪ್ಪ ಅವರು ಸರಕಾರಿ ಶಾಲಾ ಕಾಲೇಜುಗಳು ಮರೀಚಿಕೆಯಾಗಿದ್ದ ಕಾಲದಲ್ಲಿ ಪುರಸಭೆ ಮೂಲಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡವರ ಪಾಲಿನ ಆಶಾಕಿರವಾದವರು. ಇಂತಹ ದೂರದೃಷ್ಟಿಯ ನೇತಾರ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹನೀಯರ ಜಯಂತಿಯಲ್ಲಿ ಭಾಗವಹಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ ಸಿವಿವಿ ಎಂದರೆ ಶಿಕ್ಷಣ, ಶಿಕ್ಷಣ ಎಂದರೆ ಸಿವಿ.ವೆಂಕಟರಾಯಪ್ಪ ಎನ್ನಬಹುದು.ರಾಜಕೀಯದಲ್ಲಿ ಕುಪ್ಪಹಳ್ಳಿ ಪಿಳ್ಳಪ್ಪ, ಮತ್ತು ಸಿ.ವಿ.ವೆಂಕಟರಾಯಪ್ಪ ಅವರದ್ದು ಅಚ್ಚಳಿಯದ ವ್ಯಕ್ತಿತ್ವವಾಗಿತ್ತು.ತಮ್ಮ ತಾತನ ಜನ್ಮದಿನವನ್ನು ಮೊಮ್ಮಗನಾಗಿ ನವೀನ್‌ಕಿರಣ್ ಹಬ್ಬದಂತೆ ಆಚರಿಸಿಕೊಂಡು ಬರುತ್ತಿರುವುದು, ಇದರ ಅಂಗವಾಗಿ ರಕ್ತದಾನ, ದಾನ ದರ್ಮ ಸೇರಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಾಮಾನ್ಯ ವಿಚಾರವಲ್ಲ.ಮೊಮ್ಮಗ ಎಂದರೆ ನವೀನ್‌ಕಿರಣ್ ತರಿರಬೇಕು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವ ರೆಡ್ಡಿ, ಮಾವು ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ, ಸುಷ್ಮಾಶ್ರೀನಿವಾಸ್ ಸೇರಿ ಅಪಾರ ಪ್ರಮಾಣದಲ್ಲಿ ಗಣ್ಯಮಾನ್ಯರು ಭಾಗವಹಿಸಿ ಕಾರ್ಯಕ್ರಮ ಕ್ಕೆ ಕಳೆ ತಂದರು.