ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Adichunchanagiri Sri : ಶಾಲಾ ಹಂತದಲ್ಲಿಯೇ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಬೇಕು : ಶ್ರೀ ಮಂಗಳನಾಥಸ್ವಾಮೀಜಿ

ಆಧುನಿಕತೆಯ ಅಂಧಾನುಕರಣೆಗೆ ಸಿಕ್ಕಿ ನಶಿಸಿಹೋಗುತ್ತಿರುವ ಈ ನೆಲದ ಭಾಷೆ ಸಂಸ್ಕೃತಿ ಮತ್ತು ಸಾಂಪ್ರದಾಯದ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಈ ವಿಚಾರದಲ್ಲಿ ಬಿಜಿಎಸ್ ಶಾಲೆ ಒಂದೆಜ್ಜೆ ಮುಂದಿದ್ದು ಗ್ರಾಮೀಣ ಆಟಗಳನ್ನು ಕೂಡ ಮಕ್ಕಳಿಗೆ ಪರಿಚಯಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಏಕೆಂದರೆ ಸಾಂಪ್ರದಾಯಿಕ ಆಟಗಳ ಪರಿಚಯವಾಗುವುದರಿಂದ ಮಕ್ಕಳಲ್ಲಿ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ

ಶಾಲಾ ಹಂತದಲ್ಲಿಯೇ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಬೇಕು

ಭಾರತ ದೇಶವು ಶ್ರೀಮಂತ ಸಂಸ್ಕೃತಿಯ ನೆಲೆವೀಡಾಗಿದ್ದು, ಇಲ್ಲಿನ ಆಚಾರ ವಿಚಾರ ಭಾಷೆ ಸಂಸ್ಕೃತಿಯಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಧಾರೆಯೆರೆಯುವ ಅಗತ್ಯವಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು. -

Ashok Nayak Ashok Nayak Oct 18, 2025 10:45 PM

ಚಿಕ್ಕಬಳ್ಳಾಪುರ : ಭಾರತ ದೇಶವು ಶ್ರೀಮಂತ ಸಂಸ್ಕೃತಿಯ ನೆಲೆವೀಡಾಗಿದ್ದು, ಇಲ್ಲಿನ ಆಚಾರ ವಿಚಾರ ಭಾಷೆ ಸಂಸ್ಕೃತಿಯಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಧಾರೆಯೆರೆಯುವ ಅಗತ್ಯವಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.

ಚಿಕ್ಕಬಳ್ಳಾಪುರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ನಡೆದ “ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ದಿನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿ ದೀಪ ಬೆಳಗಿ ಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಂತರ ತಮ್ಮ ಆಶೀರ್ವಚನದಲ್ಲಿ ತಿಳಿಸುತ್ತಾ ಆಧುನಿಕತೆಯ ಅಂಧಾನುಕರಣೆಗೆ ಸಿಕ್ಕಿ ನಶಿಸಿ ಹೋಗುತ್ತಿರುವ ಈ ನೆಲದ ಭಾಷೆ ಸಂಸ್ಕöÈತಿ ಮತ್ತು ಸಾಂಪ್ರದಾಯದ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು.ಈ ವಿಚಾರದಲ್ಲಿ ಬಿಜಿಎಸ್ ಶಾಲೆ ಒಂದೆಜ್ಜೆ ಮುಂದಿದ್ದು ಗ್ರಾಮೀಣ ಆಟಗಳನ್ನು ಕೂಡ ಮಕ್ಕಳಿಗೆ ಪರಿಚಯಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಏಕೆಂದರೆ ಸಾಂಪ್ರದಾಯಿಕ ಆಟಗಳ ಪರಿಚಯವಾಗುವುದರಿಂದ ಮಕ್ಕಳಲ್ಲಿ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಪೂರ್ಣಪ್ರಜ್ಞಾ ಶಾಲೆಯಲ್ಲಿ ಸಾಂಸ್ಕೃತಿಕ ದಿನಾಚರಣೆ ಕಲರವ: ವೇಷಭೂಷಣಗಳಲ್ಲಿ ಮಿಂಚಿದ ಗುರು ಶಿಷ್ಯರು

ನಮ್ಮ ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಕಲಿಕೆಯೊಂದಿಗೆ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಆ ಮೂಲಕ ಮಕ್ಕಳಿಗೆ ಪ್ರಾಚೀನ ಪರಂಪರೆ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಕನ್ಯ  ಮಾತನಾಡುತ್ತ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ, ಸಂಸ್ಕೃತಿಯನ್ನು ಕೊಡುವಂತಹ ಶಿಕ್ಷಣಸಂಸ್ಥೆ ಇದಾಗಿದ್ದು, ಒಂದು ವಿಶ್ವ ; ಒಂದು ಕುಟುಂಬ ಎಂಬಂತೆ ‘ಒಂದು ಶಾಲೆ ; ಒಂದು ಕುಟುಂಬ’ ಎನ್ನುವ ಧ್ಯೇಯದೊಂದಿಗೆ ಮಕ್ಕಳನ್ನು ರೂಪಿಸು ತ್ತಿರುವುದು ಸಂತೋಷಕರ ವಿಷಯವಾಗಿದೆ. ದೀಪಾವಳಿ ಹಬ್ಬವು ‘ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ’ ಎನ್ನುವ ಹಾಗೆ ನಮ್ಮಲ್ಲಿರುವ ಕೆಟ್ಟಗುಣಗಳನ್ನು ಹೋಗಲಾಡಿಸಿಕೊಂಡು, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವ ಅವಕಾಶ ನೀಡಲಿ ಎಂದು ಹಾರೈಸಿದರು.

ಮುಖ್ಯೋಪಾಧ್ಯಾಯ ಡಿ.ಸಿ.ಮೋಹನ್ ಕುಮಾರ್ ಮಾತನಾಡುತ್ತ ನಮ್ಮ ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮಕ್ಕಳಲ್ಲಿ ಬೆಳಸಲು ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಹಮ್ಮಿಕೊಂಡು ಬರಲಾಗಿದೆ. ವಿವಿಧ ರಾಜ್ಯಗಳ ಉಡುಗೆ, ತೊಡುಗೆ ಮತ್ತು ಆಹಾರ ಪದ್ದತಿಗಳನ್ನು ಪರಿಚಯಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ೮ ತರಗತಿ ಡಿಜಿಟೆಕ್ ವಿಭಾಗದ ವಿದ್ಯಾರ್ಥಿ ಎಂ. ಪೂರ್ಣಚಂದ್ರ ಸಾಂಸ್ಕೃತಿಕ ದಿನದ ಮಹತ್ವದ ಕುರಿತು ನೀಡಿದ ಉಪನ್ಯಾಸ ವಿದ್ಯಾರ್ಥಿಗಳ ವಿವಿಧತೆಯಲ್ಲಿ ಏಕತೆಯುಳ್ಳ ಭಾರತದ ಚರಿತ್ರೆಯನ್ನು ಮೆಲುಕು ಹಾಕುವಂತಿತ್ತು.ಕರತಾಡನದ ಮೂಲಕ ಉಪನ್ಯಾಸಕ್ಕೆ ಮೆಚ್ಚುಗೆ ಸೂಚಿಸಿದ್ದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ  ಮಕ್ಕಳು ಬೇರೆ ಬೇರೆ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ, ತೊಡುಗೆಗಳನ್ನು ಉಟ್ಟು ಶಾಲಾ ಆವರಣಕ್ಕೆ ಮೆರುಗನ್ನು ತಂದುಕೊಟ್ಟರು. ಇದೇ ವೇಳೆ ಪರಿಸರ ಪ್ರಿಯ ದೀಪಾವಳಿ ಹಬ್ಬದ ಆಚರಣೆಯನ್ನು ಕೂಡ ಮಾಡಲಾಯಿತು. ಹಾಗೆಯೇ ವಿದ್ಯಾರ್ಥಿಗಳು ದೇಶದ ಸಂಸ್ಕöÈತಿಯನ್ನು ಬಿಂಬಿಸುವ ಹಾಡುಗಳಿಗೆ ನೃತ್ಯವನ್ನು ಮಾಡಿ ನಲಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ರಮೇಶ್ , ಬಿಜಿಎಸ್ ಸಂವಿತ್ ಶಾಲೆಯ ಶೈಕ್ಷಣಿಕ ಸಲಹೆಗಾರರು ಮತ್ತು ಕೌನ್ಸಿಲರ್ ಆದ ಶ್ರೀಮತಿ ಕಲಾವತಿ ಕೆ.ಆರ್ , ಬಿಜಿಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ|| ರವಿ ಕುಮಾರ್ ಹಾಗೂ ಶಿಕ್ಷಕವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.