ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಪಿಯು ಉಪನ್ಯಾಸಕ ಸಂಘದ ಚುನಾವಣೆ: ಅಧ್ಯಕ್ಷರಾಗಿ ಡಾ.ಸಿ.ಶಂಕರಪ್ಪ ಪ್ರ.ಕಾರ್ಯದರ್ಶಿ ಮಧುಸೂಧನ್ ಆಯ್ಕೆ

ನಗರದ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ನಡೆದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 125 ಮತಗಳ ಪೈಕಿ 119 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ ಡಾ.ಬಸವರಾಜ್ ಹೆಚ್.ಚಿಕ್ಕಣಜಿ 49 ಮತಗಳನ್ನು ಪಡೆದರೆ ಡಾ.ಶಂಕರಪ್ಪ ಅವರು 68 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆ ಯಾದರು.

ಅಧ್ಯಕ್ಷರಾಗಿ ಡಾ. ಸಿ.ಶಂಕರಪ್ಪ ಪ್ರ.ಕಾರ್ಯದರ್ಶಿ ಮಧುಸೂಧನ್ ಆಯ್ಕೆ

೨೦೨೬ ರಿಂದ ೨೦೩೧ರ ೫ ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಾ.ಶಂಕರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮಧುಸೂಧನ್ ಆಯ್ಕೆಯಾಗಿದ್ದು ಉಪನ್ಯಾಸಕವರ್ಗ ಆತ್ಮೀಯವಾಗಿ ಅಭಿನಂದನೆ ಸಲ್ಲಿಸಿದ್ದಾರೆ. -

Profile
Ashok Nayak Jun 7, 2026 9:35 PM

ಚಿಕ್ಕಬಳ್ಳಾಪುರ: 2026ರಿಂದ 2031ರ 5 ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆ ಯಲ್ಲಿ ಅಧ್ಯಕ್ಷರಾಗಿ ಡಾ.ಶಂಕರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮಧುಸೂಧನ್ ಆಯ್ಕೆ ಯಾಗಿದ್ದು ಉಪನ್ಯಾಸಕವರ್ಗ ಆತ್ಮೀಯವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ನಗರದ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ನಡೆದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 125 ಮತಗಳ ಪೈಕಿ 119 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ ಡಾ.ಬಸವರಾಜ್ ಹೆಚ್.ಚಿಕ್ಕಣಜಿ ೪೯ ಮತಗಳನ್ನು ಪಡೆದರೆ ಡಾ.ಶಂಕರಪ್ಪ ಅವರು 68 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆ ಯಾದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು  ಸ್ಪರ್ಧಿಸಿದ್ದು ಎಂ.ಸಿ.ನಾಗೇಶ್ 38 ಮತಗಳನ್ನು ಪಡೆದು ಪರಾಭವಗೊಂಡರೆ, ಮಧುಸೂಧನ್ ಅವರು 80 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಇದನ್ನೂ ಓದಿ: Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಡಾ.ಸಿ.ಶಂಕರಪ್ಪ ನಮ್ಮ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ರಾದ ಕೆ.ಹೆಚ್.ನಿಂಗೇಗೌಡ ಅವರ ಬಣವು ಅಭೂತಪೂರ್ವ ಗೆಲುವು ಸಾಧಿಸಿದ್ದು ಜಿಲ್ಲೆಯಲ್ಲಿಯೂ ಅವರದೇ ಬಣ ಎಲ್ಲಾ ೯ ಸ್ಥಾನಗಳಲ್ಲಿ ಜಯಶಾಲಿಯಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ.ನಮ್ಮ ಬಣದ ಮೇಲೆ ವಿಶ್ವಾಸವಿಟ್ಟು ಮತಚಲಾಯಿಸಿದ ಎಲ್ಲಾ ಗೌರವಾ ನ್ವಿತ ಮತದಾರ ಉಪನ್ಯಾಸಕ ಬಂಧುಗಳಿಗೆ ಆಭಾರಿಯಾಗಿರುತ್ತೇವೆ. ನಿಮ್ಮ ಯಾವುದೇ ಸಮಸ್ಯೆ ಇರಲಿ ಕಾನೂನಿನ ಪರಿಮಿತಿಯಲ್ಲಿ ಅದನ್ನು ಈಡೇರಿಸುವ ಕೆಲಸ ಮಾಡಲಾಗುವುದು ಎಂದರು.

ಸರಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ನಿಯೋಜನೆ ಪದ್ದತಿ ಇದೆ. ದಾಖಲಾತಿ ಕಡಿಮೆ ಇದೆ.ಬಡ್ತಿ ಮತ್ತು ವರ್ಗಾವಣೆ ಸಮಸ್ಯೆಗಳಿವೆ. ಕಾರ್ಯದ ಒತ್ತಡ ವಿಪರೀತ ಇದೆ. ಕಾಮ್ಸ್ ಎಂಬ ಡಿಜಿಟಲ್ ಹಾಜರಾತಿ ಪದ್ದತಿ ಸೇರಿ ಅನೇಕ ಸಮಸ್ಯೆಗಳಿವೆ. ಇವೆಲ್ಲವನ್ನು ಹಂತಹಂತ ವಾಗಿ ಪರಿಹರಿಸಲಾಗುವುದು ಎಂದರು.

d

ಜಿಲ್ಲೆಯು ಫಲಿತಾಂಶ ಸುಧಾರಣೆಯಲ್ಲಿ 8ನೇ ಸ್ಥಾನದಲ್ಲಿದೆ. ಅದಕ್ಕೂ ಹಿಂದೆ 11, ಅದರ ಹಿಂದಿನ ವರ್ಷ 18ನೇ ಸ್ಥಾನದಲ್ಲಿತ್ತು.ಫಲಿತಾಂಶ ಸುಧಾರಣೆಗೆ ಕಾರಣವೇ ನಮ್ಮೆಲ್ಲಾ ಉಪನ್ಯಾಸಕರ ಬದ್ಧತೆ, ಪರಿಣಾಮಕಾರಿ ಬೋಧನೆ ಮತ್ತು ಸಮರ್ಪಣಾ ಭಾವವೇ ಆಗಿದೆ. ರಾಜ್ಯದಲ್ಲಿ 8ನೇ ಸ್ಥಾನಕ್ಕೆ ಏರಲು ನಮ್ಮೆಲ್ಲಾ ಉಪನ್ಯಾಸಕರ ಪರಿಶ್ರಮವೇ ಕಾರಣ ಎಂಬ ಹೆಮ್ಮೆ ನಮಗಿದೆ ಎಂದರು.

ಜಿಲ್ಲೆಯಲ್ಲಿ 21 ಸರಕಾರಿ ಪದವಿಪೂರ್ವ ಕಾಲೇಜು, 5 ಅನುದಾನಿತ ಕಾಲೇಜು, 4 ಆದರ್ಶ ಪದವಿ ಪೂರ್ವ ಕಾಲೇಜುಗಳಿವೆ. 200 ಉಪನ್ಯಾಸಕರಿದ್ದು ಈ ಚುನಾವಣೆಯಲ್ಲಿ 125 ಮತದಾರರಿದ್ದು 119 ಮಂದಿ ಮತಚಲಾಯಿಸಿದ್ದಾರೆ ಎಂದರು.

*
2026 ರಿಂದ 2031ರ 5 ವರ್ಷದ ಅವಧಿಗೆ ಆಯ್ಕೆಯಾಗಿರುವ ಕರ್ನಾಟಕ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ನೂತನ ಸಮಿತಿ ಹೀಗಿದೆ.
ಅಧ್ಯಕ್ಷ : ಡಾ.ಶಂಕರಪ್ಪ, ಕಾರ್ಯಾಧ್ಯಕ್ಷ : ಕೃಷ್ಣಪ್ಪ ಎಂ.ಎನ್., ರೆಡ್ಡಮ್ಮ: ಉಪಾಧ್ಯಕ್ಷರು, ಶಾಂತ ರಾಜು.ಎ.: ಖಜಾಂಚಿ, ಕೆ.ಎನ್.ಶ್ರೀನಿವಾಸಯ್ಯ: ಪ್ರಧಾನ ಸಂಘಟನಾ ಕಾರ್ಯದರ್ಶಿ,ಕೆ.ಶ್ರೀನಿವಾಸ್ ಕಾರ್ಯದರ್ಶಿ, ಬಿ.ಕೆ.ರವಿ : ಜಂಟಿ ಕಾರ್ಯದರ್ಶಿ, ಮುನಿರಾಜು ಹೆಚ್.ಸಿ.ಸಂಚಾಲಕರು.