Chikkaballapur News: ಪಸುಪಲೋಡು ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ಆಯ್ಕೆ
ತಾಲೂಕಿನ ಪಸುಪಲೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಸಾಮಾನ್ಯ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯ 18 ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಸದಸ್ಯರು ಸಭೆ ನಡೆಸಿ, ಸುಮತಿ ಅವರನ್ನು ಎಸ್‌ಡಿಎಂಸಿ ಅಧ್ಯಕ್ಷರಾಗಿ ಹಾಗೂ ಜಿ.ವಿ. ವೆಂಕಟೇಶಪ್ಪ ಅವರನ್ನು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು.
-
ಚಿಕ್ಕಬಳ್ಳಾಪುರ: ತಾಲೂಕಿನ ಪಸುಪಲೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಸಾಮಾನ್ಯ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯ 18 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಆಯ್ಕೆಯಾದ ಸದಸ್ಯರು ಸಭೆ ನಡೆಸಿ, ಸುಮತಿ ಅವರನ್ನು ಎಸ್‌ಡಿಎಂಸಿ ಅಧ್ಯಕ್ಷರಾಗಿ ಹಾಗೂ ಜಿ.ವಿ. ವೆಂಕಟೇಶಪ್ಪ ಅವರನ್ನು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು.
ಇದನ್ನೂ ಓದಿ: Chikkaballapur News: ಭಾರತ್ ಜೋಡೋ ಯುವ ಸಂಘಗಳಿಗೆ ನೋಂದಣಿ ಆರಂಭ
ಸಮಿತಿಯ ಸದಸ್ಯರಾಗಿ ಸುಮತಿ, ಗೀತಾ, ಶ್ರೀನಾಥ್, ನಾಗಮಣಿ, ಗಣೇಶ್ ಸಿಂಗ್, ಚಲಪತಿ, ಗೀತಾ, ನಳಿನ, ಗಂಗೆಶ್ ಜಿ.ಆರ್., ವೆಂಕಟೇಶಪ್ಪ ಜಿ.ವಿ., ಆನಂದ್, ಸರಸ್ವತಿ, ಶೈಲಜ, ಮಂಜುನಾಥ್, ರೇಣುಕಾ, ಗೀತಾ, ಗಂಗಮ್ಮ ಹಾಗೂ ಕೆ.ಆರ್. ಶ್ರೀನಿವಾಸ್ ಆಯ್ಕೆಯಾದರು.
ಸಭೆಯಲ್ಲಿ ಪ್ರೌಢಶಾಲಾ ಶಿಕ್ಷಣ ಸಂಯೋಜಕರಾದ ಶ್ರೀನಿವಾಸ್ ಅವರು ಎಸ್‌ಡಿಎಂಸಿ ಸದಸ್ಯರ ಆಯ್ಕೆ ಪ್ರಕ್ರಿಯೆ ಹಾಗೂ ನಿಯಮಾವಳಿಗಳ ಕುರಿತು ವಿವರಿಸಿ, ಪಾರದರ್ಶಕವಾಗಿ ಚುನಾವಣೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ವಿ. ಶ್ರೀರಾಮಪ್ಪ, ಸಹಶಿಕ್ಷಕಿಯರಾದ ಉಮಾ ದೇವಿ ಹಾಗೂ ಷಾಜೀಯ ಪರ್ವೀನ್, ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.