ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SIR: ಎಸ್‌ಐಆರ್‌ ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 9.44 ಲಕ್ಷ ಮತದಾರರು

ಜಿಲ್ಲೆಯ ಐದು ಕ್ಷೇತ್ರಗಳ ವ್ಯಾಪ್ತಿಯ 10,69,504 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸ ಲಾಗಿತ್ತು. ಈ ಪೈಕಿ ಆಗಸ್ಟ್‌ 17ರವರೆಗೆ 9,44,623 ಮತದಾರರ ಮಾಹಿತಿಯನ್ನು ಸ್ವೀಕರಿಸಿ ಗಣಕೀಕರಣ ಮಾಡಲಾಗಿದೆ. ಗೌರಿಬಿದನೂರು ಕ್ಷೇತ್ರದಲ್ಲಿ 1,89,197, ಬಾಗೇಪಲ್ಲಿಯಲ್ಲಿ 1,83,728, ಚಿಕ್ಕಬಳ್ಳಾಪುರದಲ್ಲಿ 1,91,567, ಶಿಡ್ಲಘಟ್ಟದಲ್ಲಿ 1,84,975 ಹಾಗೂ ಚಿಂತಾಮಣಿಯಲ್ಲಿ 1,95,156 ಮತದಾರರ ಮಾಹಿತಿ ಪರಿಷ್ಕರಿಸಲಾಗಿದೆ

ಎಸ್‌ಐಆರ್‌ ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 9.44 ಲಕ್ಷ ಮತದಾರರು

-

Profile
Ashok Nayak Aug 25, 2026 12:04 PM

ಸೆ.23ರವರೆಗೆ ಹಕ್ಕು–ಆಕ್ಷೇಪಣೆಗೆ ಅವಕಾಶ | ಅ.27ರಂದು ಅಂತಿಮ ಪಟ್ಟಿ ಪ್ರಕಟ

ಚಿಕ್ಕಬಳ್ಳಾಪುರ: ಭಾರತ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌)-2026 ರಡಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 9,44,623 ಮತದಾರರು ಇರುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಐದು ಕ್ಷೇತ್ರಗಳ ವ್ಯಾಪ್ತಿಯ 10,69,504 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಈ ಪೈಕಿ ಆಗಸ್ಟ್‌ 17ರವರೆಗೆ 9,44,623 ಮತದಾರರ ಮಾಹಿತಿಯನ್ನು ಸ್ವೀಕರಿಸಿ ಗಣಕೀಕರಣ ಮಾಡಲಾಗಿದೆ. ಗೌರಿಬಿದನೂರು ಕ್ಷೇತ್ರದಲ್ಲಿ 1,89,197, ಬಾಗೇಪಲ್ಲಿಯಲ್ಲಿ 1,83,728, ಚಿಕ್ಕಬಳ್ಳಾಪುರದಲ್ಲಿ 1,91,567, ಶಿಡ್ಲಘಟ್ಟದಲ್ಲಿ 1,84,975 ಹಾಗೂ ಚಿಂತಾಮಣಿಯಲ್ಲಿ 1,95,156 ಮತದಾರರ ಮಾಹಿತಿ ಪರಿಷ್ಕರಿಸಲಾಗಿದೆ ಎಂದರು.

ಕರಡು ಪಟ್ಟಿಯಲ್ಲಿರುವ ಮತದಾರರ ಪೈಕಿ 4,68,325 ಪುರುಷರು, 4,76,255 ಮಹಿಳೆಯರು ಹಾಗೂ 43 ಇತರೆ ಮತದಾರರು ಇದ್ದಾರೆ. ಐದು ಕ್ಷೇತ್ರಗಳಲ್ಲಿ 218 ಸೇವಾ ಮತದಾರರ ಕರಡು ಪಟ್ಟಿಯನ್ನೂ ಪ್ರಕಟಿಸಲಾಗಿದೆ.

ಇದನ್ನೂ ಓದಿ: Chikkaballapur News: ಆಯುಷ್ ಆಸ್ಪತ್ರೆ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ

ಸೆ.23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಕರಡು ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸೆ.23ರವರೆಗೆ ಸಲ್ಲಿಸಬಹುದು. ಸಾರ್ವಜನಿಕರು ತಮ್ಮ ಹೆಸರು, ವಿಳಾಸ ಹಾಗೂ ಮತದಾರರ ವಿವರಗಳನ್ನು ಪರಿಶೀಲಿಸಿ ಲೋಪ ಕಂಡುಬಂದಲ್ಲಿ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ವಿವಿಧ ಕಾರಣಗಳಿಂದ 1,24,881 ಮತದಾರರನ್ನು ಎಎಸ್‌ಡಿಡಿಒ ವರ್ಗಕ್ಕೆ ಗುರುತಿಸಲಾಗಿದ್ದು, ಇವರಲ್ಲಿ 28,814 ಮಂದಿ ಮೃತರು, 78,380 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 9,836 ಮಂದಿ ಬೇರೆಡೆ ನೋಂದಾಯಿತರಾಗಿರುವವರು ಹಾಗೂ 7,844 ಮಂದಿ ಗೈರುಹಾಜರಾಗಿರುವವರು ಎಂದು ತಿಳಿಸಿದರು. 

ಜಿಲ್ಲೆಯಲ್ಲಿ 43,173 ಅನಾಮಲಿ ಹಾಗೂ 11,670 ನೋ-ಮ್ಯಾಪಿಂಗ್ ಪ್ರಕರಣಗಳನ್ನು ಗುರುತಿಸ ಲಾಗಿದ್ದು, ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸ ಲಾಗುವುದು ಎಂದರು.

ಅರ್ಹ ಹೊಸ ಮತದಾರರ ಸೇರ್ಪಡೆಗೆ ಅಕ್ಟೋಬರ್‌ ಮೊದಲ ವಾರದವರೆಗೆ ಅವಕಾಶವಿದ್ದು, ಈಗಾಗಲೇ 18 ಸಾವಿರಕ್ಕೂ ಹೆಚ್ಚು ಯುವ ಮತದಾರರು ಅರ್ಜಿ ಸಲ್ಲಿಸಿದ್ದಾರೆ. ಅಂತಿಮ ಪರಿಶೀಲನೆ ಬಳಿಕ ಅಕ್ಟೋಬರ್‌ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿ.ಪ್ರಭು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕರಡು ಮತದಾರರ ಪಟ್ಟಿಯ ಪ್ರತಿಗಳನ್ನು ವಿತರಿಸಿದರು.