ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KPCC: ಎಸ್ ಐ ಆರ್ ಪ್ರಕ್ರಿಯೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಕೆಪಿಸಿಸಿ ಸದಸ್ಯ ಸೈಯದ್ ಎಜಾಜ್ ಸ್ಪಷ್ಟನೆ

ಫಾರ್ಮ್ ಭರ್ತಿ ಮಾಡುವಾಗ ಹೆಸರು ಹಾಗೂ ಇತರೆ ವಿವರಗಳ ಸ್ಪೆಲ್ಲಿಂಗ್ ಸರಿಯಾಗಿದೆಯೇ ಎಂಬು ದನ್ನು ಖಚಿತಪಡಿಸಿಕೊಳ್ಳಬೇಕು.ಮಾಹಿತಿ ಭರ್ತಿ ಮಾಡಿದ ಬಳಿಕ ಸಹಿ ಮಾಡಬೇಕು. ಒಂದು ಪ್ರತಿಯನ್ನು ಅಧಿಕಾರಿಗಳು ಕೊಂಡೊಯ್ಯಲಿದ್ದು, ಮತ್ತೊಂದು ಪ್ರತಿಯನ್ನು ಸಾರ್ವಜನಿಕರು ರಸೀದಿಯಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕು.

ಎಸ್ ಐ ಆರ್ ಪ್ರಕ್ರಿಯೆ:ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ

-

Profile
Ashok Nayak Jun 29, 2026 8:19 PM

ಚಿಂತಾಮಣಿ: ಮುಂಬರುವ ಜುಲೈ ತಿಂಗಳ 1ನೇ ತಾರೀಖಿನಿಂದ ಆರಂಭವಾಗಲಿರುವ ಎಸ್ ಐ ಆರ್ ಪ್ರಕ್ರಿಯೆಯ ಕುರಿತಾಗಿ ಸಾರ್ವಜನಿಕರು,ವಿಶೇಷವಾಗಿ ಮಹಿಳೆಯರು ಯಾವುದೇ ರೀತಿಯ ಆತಂಕ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೆಪಿಸಿಸಿ (KPCC)ಸದಸ್ಯರಾದ ಸೈಯದ್ ಎಜಾಜ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಅವರು ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಸಲ್ಲಿಸಲು ಸಾರ್ವಜನಿಕರು ಸೈಬರ್ ಕೇಂದ್ರಗಳಿಗೆ ಅಲೆದಾಡುತ್ತಿರುವುದು ಮತ್ತು ತಲ್ಲಣಗೊಳ್ಳುತ್ತಿರು ವುದು ತಮ್ಮ ಗಮನಕ್ಕೆ ಬಂದಿದೆ.ಆದರೆ,ಸರ್ಕಾರವು ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈಗಾಗಲೇ ಬಿಎಲ್‌ಒ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಪ್ರತಿ ವಾರ್ಡ್ ಹಾಗೂ ಗ್ರಾಮೀಣ ಭಾಗದ ಹಳ್ಳಿಗಳಿಗೆ ಬಿಎಲ್‌ಒಗಳನ್ನು ನಿಯೋಜಿಸಲಾಗಿದ್ದು, ಅವರು ಆಯಾ ಪ್ರದೇಶದ ಜವಾಬ್ದಾರಿಯನ್ನು ಹೊಂದಿರುತ್ತಾರೆ. 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು,ನಿಮ್ಮ ಪತ್ನಿ ಅಥವಾ ತಂದೆ-ತಾಯಿ ಹೆಸರು ಇದ್ದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.

ಇದನ್ನೂ ಓದಿ: KPCC President Oath Ceremony: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣ; ಅಧಿಕಾರ ಹಸ್ತಾಂತರಿಸಿದ ಡಿಕೆಶಿ

ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೂ, ನಿಮ್ಮ ತಂದೆ-ತಾಯಿಯ ಹೆಸರು ಪಟ್ಟಿಯಲ್ಲಿದ್ದರೆ,ಆ ದಾಖಲೆಗಳನ್ನು ಜೋಡಿಸಿ ಈಗಾಗಲೇ ಮ್ಯಾಪಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಇಟ್ಟುಕೊಳ್ಳ ಲಾಗಿದೆ. ಬಿಎಲ್‌ಒಗಳು ಮನೆಗೆ ಬಂದಾಗ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯನ್ನು ಸಿದ್ಧವಾಗಿಟ್ಟುಕೊಂಡು ತೋರಿಸಬೇಕು.

ಅಧಿಕಾರಿಗಳಿಗೆ ಯಾವುದೇ ಜೆರಾಕ್ಸ್ ಪ್ರತಿಗಳನ್ನು ನೀಡುವ ಅಗತ್ಯವಿರುವುದಿಲ್ಲ.ಅವರು ಕೇವಲ ನಿಮ್ಮ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ವೋಟರ್ ಲಿಸ್ಟ್ ಸಂಖ್ಯೆ ಮತ್ತು ಕ್ಯೂಆರ್ ಕೋಡ್ ಒಳಗೊಂಡಿರುವ ಫಾರ್ಮ್ ಅನ್ನು ಸರ್ಕಾರದಿಂದಲೇ ನೀಡಲಾಗುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಫಾರ್ಮ್ ಇರಲಿದ್ದು ಸಾರ್ವಜನಿಕರು ಗೊಂದಲಕ್ಕೊಳಗಾಗಬಾರದು ಎಂದು ವಿವರಿಸಿದರು.

ಫಾರ್ಮ್ ಭರ್ತಿ ಮಾಡುವಾಗ ಹೆಸರು ಹಾಗೂ ಇತರೆ ವಿವರಗಳ ಸ್ಪೆಲ್ಲಿಂಗ್ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.ಮಾಹಿತಿ ಭರ್ತಿ ಮಾಡಿದ ಬಳಿಕ ಸಹಿ ಮಾಡಬೇಕು.ಒಂದು ಪ್ರತಿಯನ್ನು ಅಧಿಕಾರಿಗಳು ಕೊಂಡೊಯ್ಯಲಿದ್ದು, ಮತ್ತೊಂದು ಪ್ರತಿಯನ್ನು ಸಾರ್ವಜನಿಕರು ರಸೀದಿಯಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕು.

"ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ,ಆತಂಕಕ್ಕೆ ಒಳಗಾಗದೆ ಬಿಎಲ್‌ಒ ಗಳ ಮೂಲಕ ಅಗತ್ಯ ಸಹಕಾರವನ್ನು ಪಡೆದುಕೊಳ್ಳಬಹುದು ಎಂದು ಸೈಯದ್ ಎಜಾಜ್ ಅವರು ಮನವಿ ಮಾಡಿದ್ದಾರೆ.