Bagepally News: ಶ್ರೀ ಅವಧೂತ ಆದಿನಾರಾಯಣಸ್ವಾಮಿಯವರ 99ನೇ ಅದ್ದೂರಿ ಜಯಂತೋತ್ಸವ
ಬೆಳಗಿನ ಜಾವದಿಂದಲೇ ಅವಧೂತ ಆದಿನಾರಾಯಣಸ್ವಾಮಿ ಅವರ ಸಮಾಧಿ ಬಳಿ ಗಣಪತಿ ಪೂಜೆ, ಗಂಗಾಪೂಜ, ಕಳಶಾರಾಧನೆ, ಯಾಗಮಂಟಪಪೂಜೆ, ಕಂಕಣಧಾರಣೆ, ವಾಸ್ತು ಪೂಜೆ, ಪೂರ್ಣಾ ಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು. ಹಾಗು ಸಾವಿರಾರು ಭಕ್ತಾದಿಗಳಿಂದ ಇಡಿ ರಾತ್ರಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
-
ಬಾಗೇಪಲ್ಲಿ: ತಾಲೂಕು ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಜ್ಞಾನಂಪಲ್ಲಿ ಗ್ರಾಮದ ಶ್ರೀ ಅವಧೂತ ಆದಿನಾರಾಯಣಸ್ವಾಮಿಯವರ 99ನೇ ಜಯಂತೋ ತ್ಸವ ಕಾರ್ಯಕ್ರಮ ಸಾವಿರಾರು ಭಕ್ತಾದಿಗಳ ನಡುವೆ ಅದ್ಧೂರಿಯಾಗಿ ನಡೆಯಿತು.
ಬೆಳಗಿನ ಜಾವದಿಂದಲೇ ಅವಧೂತ ಆದಿನಾರಾಯಣಸ್ವಾಮಿ ಅವರ ಸಮಾಧಿ ಬಳಿ ಗಣಪತಿ ಪೂಜೆ, ಗಂಗಾಪೂಜ, ಕಳಶಾರಾಧನೆ, ಯಾಗಮಂಟಪಪೂಜೆ, ಕಂಕಣಧಾರಣೆ, ವಾಸ್ತು ಪೂಜೆ, ಪೂರ್ಣಾ ಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು. ಹಾಗು ಸಾವಿರಾರು ಭಕ್ತಾದಿಗಳಿಂದ ಇಡಿ ರಾತ್ರಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕೋಲಾಟ, ಭಜನೆ, ನಾಟಕ ಪ್ರದರ್ಶನ, ರಸಮಂಜರಿ ಕಾರ್ಯಕ್ರಮ, ಹಲವಾರು ಅಯ್ಯಪ್ಪ ಸ್ವಾಮಿ ಮಾಲಧಾರಿಗಳಿಂದ ಭಜನೆ ಗೀತಾರಾಧನೆ ಕಾರ್ಯಕ್ರಮಗಳು ನಡೆಸಲಾಯಿತು.
ಈ ಸಂದರ್ಭದಲ್ಲಿ ಎನ್.ಡಿ.ಎ. ಮುಖಂಡರಾದ ಹರಿನಾಥ ರೆಡ್ಡಿ ರವರು ಸುಜ್ಞಾನಂಪಲ್ಲಿ ಶ್ರೀ ಅವಧೂತ ಆದಿನಾರಾಯಣಸ್ವಾಮಿ ಯವರ ಆಶ್ರಮಕ್ಕೆ ಬೇಟಿ ನೀಡಿ ಸಮಾಧಿಗೆ ನಮಸ್ಕರಿಸಿ ಮಾತನಾಡಿ ಪ್ರತಿವರ್ಷ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಜಾತ್ರಾ ಸಂದರ್ಭದಲ್ಲಿ ಸುಜ್ಞಾನಂಪಲ್ಲಿ ಅವಧೂತ ಆದಿನಾರಾಯಣಸ್ವಾಮಿ ಯವರ ಆಶ್ರಮಕ್ಕೆ ಹೆಚ್ಚು ಸಂಖ್ಯೆಯಲ್ಲಿ ಸೇರುವ ಭಕ್ತಾಧಿ ಗಳಿಗೆ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸ ಬೇಕಿದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರ ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂದಂತಹ ಸಾವಿರಾರು ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖಂಡರಾದ ಜೆಪಿ ಚಂದ್ರಶೇಖರ್ ರೆಡ್ಡಿ, ತೋಳ್ಳಪಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಲಲಿತಮ್ಮ ಈಶ್ವರ ರೆಡ್ಡಿ, ಉಪಾಧ್ಯಕ್ಷರಾದ ಗ್ರಾಮ ಪಂಚಾಯತಿ ಸದಸ್ಯ ಶ್ರೀನಿವಾಸ ರೆಡ್ಡಿ, ವೇಣುಗೋಪಾಲ್, ವಿ.ಎಸ್.ಎಸ್. ಎನ್. ಬ್ಯಾಂಕ್ ಮಾಜಿ ಸದಸ್ಯ ನಂದೆಪ್ಪಗಾರಿಪಲ್ಲಿ ಅಶ್ವಥ್ ರೆಡ್ಡಿ, ನರಸಿಂಹರೆಡ್ಡಿ, ಮಲ್ಲಿಕಾರ್ಜುನ, ಮುಖಂಡರಾದ ಸುದರ್ಶನ ನಾಯ್ಡು, ಬಾಬುರೆಡ್ಡಿ, ಯಲ್ಲಂಪಲ್ಲಿ ಮಂಜುನಾಥ್, ಲಕ್ಷ್ಮೀನಾರಾಯಣರೆಡ್ಡಿ, ಪಿ.ಟಿ. ಶ್ರೀರಾಮ್, ಚೌಡರೆಡ್ಡಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.