Chikkaballapur News: ಶ್ರೀ ಕೃಷ್ಣ ದೇವಾಲಯ ಸ್ಥಾಪನೆಯ 3ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ
ಶ್ರೀಕೃಷ್ಣ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದ ದೇವಾಲಯದಲ್ಲಿ ಅರ್ಚಕರಿಂದ ದೇವತಾ ಕಾರ್ಯಗಳು ಸಾಂಗವಾಗಿ ನಡೆದವು.ಬೆಳ್ಳಂಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ,ಹೊವಿನ ಅಲಂಕಾರ,ಆಭರಣ ಅಲಂಕಾರ, ಧಾರ್ಮಿಕ ಕೈಂಕರ್ಯಗಳು ನಡೆದಿದ್ದು ಬಳಿಕ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು.

ತಾಲ್ಲೂಕಿನ ಕಡಶೀಗೇಹಳ್ಳಿ ಗ್ರಾಮಸ್ಥರು ಮತ್ತು ಶ್ರೀ ಕೃಷ್ಣದೇವಾಲಯ ಸಮಿತಿ ಶ್ರೀಕೃಷ್ಣಜನ್ಮಾಷ್ಠಮಿ ಹಾಗೂ ದೇವಾಲಯ ಸ್ಥಾಪನೆಯ ೩ನೇ ವರ್ಷದ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಚಿಕ್ಕಬಳ್ಳಾಪುರ : ತಾಲ್ಲೂಕಿನ ಕಡಶೀಗೇಹಳ್ಳಿ ಗ್ರಾಮಸ್ಥರು ಮತ್ತು ಶ್ರೀ ಕೃಷ್ಣದೇವಾಲಯ ಸಮಿತಿ ಶ್ರೀಕೃಷ್ಣಜನ್ಮಾಷ್ಠಮಿ ಹಾಗೂ ದೇವಾಲಯ ಸ್ಥಾಪನೆಯ 3ನೇ ವರ್ಷದ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಶ್ರೀಕೃಷ್ಣಜನ್ಮಾಷ್ಠಮಿ ಹಾಗೂ ದೇವಾಲಯ ಸ್ಥಾಪನೆಯ ೩ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಜನತೆ ಶ್ರದ್ಧಾಭಕ್ತಿಯಿಂದ ಈ ಎಲ್ಲಾ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಿ ಭಕ್ತಿಭಾವ ಮೆರೆದು ಭಗವಂತನ ಕೃಪೆಗೆ ಪಾತ್ರವಾದರು.
ಶ್ರೀಕೃಷ್ಣ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದ ದೇವಾಲಯದಲ್ಲಿ ಅರ್ಚಕರಿಂದ ದೇವತಾ ಕಾರ್ಯಗಳು ಸಾಂಗವಾಗಿ ನಡೆದವು.ಬೆಳ್ಳಂಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ,ಹೊವಿನ ಅಲಂಕಾರ,ಆಭರಣ ಅಲಂಕಾರ, ಧಾರ್ಮಿಕ ಕೈಂಕರ್ಯಗಳು ನಡೆದಿದ್ದು ಬಳಿಕ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು.ಇನ್ನೂ ಮಧ್ಯಾಹ್ನ ಶ್ರೀ ರಾಧಾಕೃಷ್ಣ ಉತ್ಸವ ಮೂರ್ತಿಯನ್ನು ಗ್ರಾಮದಲ್ಲೆ ಮೆರವಣಿಗೆ ಮಾಡಲಾಯಿತು.ಈವೇಳೆ ಮಹಿಳೆಯರು ಪೂರ್ಣಕುಂಭ ಕಳಶಗಳನ್ನು ತಲೆಯಮೇಲೆ ಹೊತ್ತು ಸಾಗಿದರೆ, ಮಂಗಳ ವಾದ್ಯಗಳ ನಿನಾಧ ಭಕ್ತಿಯ ಆವರಣಕ್ಕೆ ಮೆರಗು ನೀಡಿತ್ತು.
ಇದನ್ನೂ ಓದಿ: Hari Paraak Column: ಜೈಲಲ್ಲಿರೋ ಕೈದಿಗಳು: ʼಬಂದರೋ ಬಂದರೋ ಭಾವ ಬಂದರೋʼ
ಸಮುದಾಯದ ಮುಖಂಡ ಹಾಗೂ ಸೇವಾಕರ್ತರಾದ ಜಿ. ಪಂ ಮಾಜಿ ಸದಸ್ಯ, ಕೆ.ಎಂ.ಮುನೇಗೌಡ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ದೇವಾಲಯದ 3ನೇ ವಾರ್ಷಿಕೋತ್ಸವದ ಅಂಗವಾಗಿ ಇಡೀ ಗ್ರಾಮದಲ್ಲಿ ದೈವಿಕ ಕಳೆ ಮನೆಮಾಡಿದೆ. ನಮ್ಮ ಗ್ರಾಮವೇ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಸ್ಥರು ಕೂಡ ಈ ದೈವಕಾರ್ಯದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ.
ದೇವಾಲಯದಲ್ಲಿ ನಡೆದಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಅಂದರೆ ಮಹಾ ಮಂಗಳಾರತಿ, ಪಂಚಾಮೃತ ಅಭಿಷೇಕ, ಮೆರವಣಿಗೆ, ಪ್ರಸಾಧ ವಿನಿಯೋಗದಲ್ಲಿ ಕೈಜೋಡಿಸಿ ಸಹಕಾರ ನೀಡಿದ್ದಾರೆ. ಭಗವಾನ್ ಶ್ರೀಕೃಷ್ಣ ಪರಮಾತ್ಮನ ಬಾಲಲೀಲೆಗಳನ್ನು ಗ್ರಾಮಸ್ಥರು ಕೂಡಿ ಆಡುವ ಮೂಲಕ ದೇವರಿಗೆ ಪ್ರಿಯರಾಗುವ ಕ್ರಮ ನಿಜಕ್ಕೂ ಮನಸ್ಸಂತೋಷಗೊಳಿಸಲಿದೆ. ಭಗವಂತನ ಶ್ರೀರಕ್ಷೆ ಎಲ್ಲಾ ಜೀವಸಂಕುಲದ ಮೇಲಿರಲಿ.ಮಳೆ ಬೆಳೆ ಚೆನ್ನಾಗಿ ಆಗಿ, ಸುಖಸಮೃದ್ಧಿ ನೆಲೆಸಲಿ ಎಂದರು.
ಈ ವೇಳೆ ಸೇವಾಕರ್ತರಾದ ಗ್ರಾಮದ ಮುನಿರಾಜು, ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸಾಚಾರಿ, ಕೆ.ಎಂ.ದೇವರಾಜ್, ಶಾಂತಕುಮಾರ್,ಶಿವಕುಮಾರ್,ನಾರಾಯಣಸ್ವಾಮಿ,ಆನAದ ಕುಮಾರ್,ಮಂಜು ಇತರರು ಉಪಸ್ಥಿತರಿದ್ದರು.