Chikkaballapur News: ದ್ರಾವಿಡ ನೆಲದ ಸಾಹಿತ್ಯ ಓದಿ ತಿಳಿಯುವ ಅಗತ್ಯವಿದೆ : ಕಸಾಪ ತಾಲೂಕು ಅಧ್ಯಕ್ಷ ಜನಾರ್ಧನ್‌ಮೂರ್ತಿ
ತೆಲುಗಿನ ಮೂಲ ಕಾದಂಬರಿಯನ್ನು ಕನ್ನಡ ಭಾಷೆಗೆ ಭಾಷಾಂತರ ಮಾಡುವ ಮೂಲಕ ದಕ್ಷಿಣ ದಿಕ್ಕಿನೆಡೆಗೆ ಕಾದಂಬರಿಗೆ ಹೊಸ ರೂಪ ನೀಡಿರುವ ಪದ್ಮ ಪ್ರಕಾಶ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘ ನೀಯವಾಗಿದೆ. ಈ ರೀತಿಯಾಗಿ ಹೆಚ್ಚು ಕೃತಿ, ಕಾದಂಬರಿ ಮತ್ತು ಲೇಖನಗಳು ಕನ್ನಡ ಭಾಷೆಗೆ ಪರಿಚಯ ವಾದಲ್ಲಿ ಮತ್ತಷ್ಟು ಸಾಹಿತಿಗಳು ಮತ್ತು ಸಾಹಿತ್ಯಾಭಿಮಾನಿಗಳನ್ನು ಕಾಣಲು ಸಾಧ್ಯವಾಗುತ್ತದೆ.


ಗೌರಿಬಿದನೂರು : ದ್ರಾವಿಡ ನೆಲದಲ್ಲಿ ಹುಟ್ಟಿ ಬೆಳೆದಿರುವ ನಾವೆಲ್ಲರೂ ಈ ನೆಲದ ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.ದಕ್ಷಿಣ ದಿಕ್ಕಿಗೆ ಕೃತಿ ಅನುವಾದಿಸಿದ ಪದ್ಮಪ್ರಕಾಶ್ ಅವರಂತಹ ಯುವ ಸಾಹಿತಿಗಳು ಮತ್ತಷ್ಟು ಕಥೆ, ಕಾದಂಬರಿಗಳನ್ನು ರಚಿಸುವಂತಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜನಾರ್ಧನ್ ಮೂರ್ತಿ ತಿಳಿಸಿದರು.
ಅವರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ಸಾಹಿತಿ ಪದ್ಮಪ್ರಕಾಶ್ ಅನುವಾದಿಸಿರುವ "ದಕ್ಷಿಣ ದಿಕ್ಕಿಗೆ"ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ತೆಲುಗಿನ ಮೂಲ ಕಾದಂಬರಿಯನ್ನು ಕನ್ನಡ ಭಾಷೆಗೆ ಭಾಷಾಂತರ ಮಾಡುವ ಮೂಲಕ ದಕ್ಷಿಣ ದಿಕ್ಕಿನೆಡೆಗೆ ಕಾದಂಬರಿಗೆ ಹೊಸ ರೂಪ ನೀಡಿರುವ ಪದ್ಮ ಪ್ರಕಾಶ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ. ಈ ರೀತಿಯಾಗಿ ಹೆಚ್ಚು ಕೃತಿ, ಕಾದಂಬರಿ ಮತ್ತು ಲೇಖನಗಳು ಕನ್ನಡ ಭಾಷೆಗೆ ಪರಿಚಯವಾದಲ್ಲಿ ಮತ್ತಷ್ಟು ಸಾಹಿತಿಗಳು ಮತ್ತು ಸಾಹಿತ್ಯಾಭಿಮಾನಿಗಳನ್ನು ಕಾಣಲು ಸಾಧ್ಯವಾಗುತ್ತದೆ. ಪ್ರಯತ್ನ ದೃಢವಾಗಿದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಮಾಡುತ್ತೇವೆ ಎಂಬುದಕ್ಕೆ ಪದ್ಮರವರ ಪ್ರಯತ್ನ ನಿಜಕ್ಕೂ ಪ್ರೇರಣೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ ಉಳಿಸಿ : ಕೆ.ಎಚ್.ಪದ್ಮರಾಜ್ ಜೈನ್
ದಕ್ಷಿಣ ದಿಕ್ಕಿನೆಡೆಗೆ ಪುಸ್ತಕದ ಅನುವಾದಕಿ ಪದ್ಮ ಪ್ರಕಾಶ್ ಮಾತನಾಡಿ, ಮೊದಲ ಪ್ರಯತ್ನದಲ್ಲಿ ತೆಲುಗಿನ ಒಂದು ಕಾದಂಬರಿಯನ್ನು ಕನ್ನಡ ಭಾಷೆಗೆ ಅನುವಾದ ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ಇದಕ್ಕೆ ಅನೇಕ ಮಂದಿ ಸಾಹಿತಿಗಳು, ಸ್ನೇಹಿತರು ಮತ್ತು ಹಿತೈಷಿಗಳು ಬೆನ್ನೆಲುಬಾಗಿ ಶ್ರಮಿಸಿದ್ದಾರೆ. ಅವರೆಲ್ಲರ ಸಹಕಾರಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಪುಟ್ಟ ಪ್ರಯತ್ನವನ್ನು ಮಾಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಸಾಹಿತಿ ಆಶಾ ಜಗದೀಶ್ ಅಚ್ಚುಕಟ್ಟಾಗಿ ನಿರೂಪಣೆ ಮಾಡಿ, ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರಾದ ವಕೀಲ ಎಚ್.ಎಲ್.ವಿ.ವೆಂಕಟೇಶ್,ಪೊಲೀಸ್ ವೃತ್ತ ನಿರೀಕ್ಷ ಕೆಪಿ ಸತ್ಯನಾರಾಯಣ್, ನಾಗರತ್ನಮ್ಮ,ಡಾ.ಕೆ.ಪ್ರಭಾ ನಾರಾಯಣಗೌಡ,ಗೌರೀಶ್, ಎಂ.ಆರ್.ಲಕ್ಷ್ಮಿನಾರಾಯಣ, ಆನೂಡಿ ನಾಗರಾಜ್, ಆರ್.ಆರ್.ರೆಡ್ಡಿ, ನಾಗೇಂದ್ರ , ದಸ್ತಗಿರ್ ಸಾಬ್, ಎ.ಎಸ್.ಜಗನ್ನಾಥ್, ಹಾಗೂ ಇನ್ನಿತರರು ಭಾಗವಹಿಸಿದ್ದರು.