Bagepally News: ತಾಲ್ಲೂಕಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ: ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿದ ಶ್ರೀರಾಮ ಭಕ್ತರು
ಪಟ್ಟಣದ ಬಯಲಾಂಜನೇಯ, ಹಳೆ ಎಸ್. ಬಿ.ಎಂ ರಸ್ತೆಯಲ್ಲಿರುವ ಕೋದಂಡ ರಾಮಸ್ವಾಮಿ, ದೇವರಗುಡಿಪಲ್ಲಿ ಒಂದು ಕಣ್ಣಿನ ಆಂಜನೇಯ ಸ್ವಾಮಿ, ಪಂಚಮುಖಿ ಆಂಜನೇಯ ಸ್ವಾಮಿ, ನಗರ್ಲ ಬಯಲು ಆಂಜನೇಯ ಸ್ವಾಮಿ, ಗೂಳೂರು ಆಂಜನೇಯ ಸ್ವಾಮಿ ಹಾಗೂ ವಿವಿಧ ಶ್ರೀರಾಮಮಂದಿರ ದಲ್ಲಿ ಮರ್ಯಾದಾ ಪುರಷೋತ್ತಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
-
ಬಾಗೇಪಲ್ಲಿ: ತಾಲ್ಲೂಕಿನಾದ್ಯಂತ ಇಂದು ಶ್ರೀರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪಟ್ಟಣ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆಯೇ ಶ್ರೀರಾಮನನ್ನು ವಿವಿಧ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಬಯಲಾಂಜನೇಯ, ಹಳೆ ಎಸ್. ಬಿ.ಎಂ ರಸ್ತೆಯಲ್ಲಿರುವ ಕೋದಂಡ ರಾಮಸ್ವಾಮಿ, ದೇವರಗುಡಿಪಲ್ಲಿ ಒಂದು ಕಣ್ಣಿನ ಆಂಜನೇಯ ಸ್ವಾಮಿ, ಪಂಚಮುಖಿ ಆಂಜನೇಯ ಸ್ವಾಮಿ, ನಗರ್ಲ ಬಯಲು ಆಂಜನೇಯ ಸ್ವಾಮಿ, ಗೂಳೂರು ಆಂಜನೇಯ ಸ್ವಾಮಿ ಹಾಗೂ ವಿವಿಧ
ಶ್ರೀರಾಮಮಂದಿರದಲ್ಲಿ ಮರ್ಯಾದಾ ಪುರಷೋತ್ತಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮುಂಜಾನೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ಅನುಸರಿಸಲಾಯಿತು. ಶ್ರೀರಾಮ, ಲಕ್ಷ್ಮಣ, ಸೀತಾಮಾತೆ ಮತ್ತು ಆಂಜನೇಯ ಮೂರ್ತಿಗಳಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು. ನಂತರ ವಿವಿಧ ವೇಷಭೂಷಣಗಳ ಆಭರಣಗಳ ಪುಷ್ಪಮಾಲೆಗಳಿಂದ ಅಲಂಕರಿಸಿ ಪೂಜೆ ನಡೆದವು.
ಪಟ್ಟಣದ ವಿವಿಧ ರಸ್ತೆಗಳಲ್ಲಿ ಶ್ರೀರಾಮ ಭಕ್ತರಿಂದ ಹಾಗೂ ಸಂಘ ಸಂಸ್ಥೆಗಳಿಂದ ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಮಾಡಿದರು.