ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನ.8ಕ್ಕೆ ಶ್ರೀಕನಕದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು: ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

ಶ್ರೀಕನಕದಾಸರ ಜಯಂತಿಯ ಅಂಗವಾಗಿ ನ.೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಚಿಕ್ಕಬಳ್ಳಾಪುರ ನಗರದ ಮರುಳು ಸಿದ್ದೇಶ್ವರ ದೇವಾಲಯದಿಂದ ಅದ್ದೂರಿ ಮೆರವಣಿಗೆ ಆಯೋಜಿಸಿ ಜಾನಪದ ಕಲಾ ತಂಡಗಳು ಹಾಗೂ ಪಲ್ಲಕ್ಕಿಗಳೊಂದಿಗೆ ನಡೆಸಲಾಗುವುದು. ಮೆರವಣಿಗೆಯು ಎಂ. ಜಿ ರಸ್ತೆ,ಬಿ.ಬಿ ರಸ್ತೆ ಮೂಲಕ ಕನ್ನಡ ಭವನದವರೆಗೆ ಸಾಗಲಿದೆ,

ನ.8ಕ್ಕೆ ಶ್ರೀಕನಕದಾಸ ಜಯಂತಿ ಅರ್ಥಪೂರ್ಣ ಆಚರಣೆ

ಕನಕ ದಾಸರ ಜಯಂತಿಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನವೆಂಬರ್ ೮ ರಂದು ನಗರದ ಕನ್ನಡ ಭವನದಲ್ಲಿ  ಸಂಭ್ರಮ, ಸಡಗರದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು. -

Ashok Nayak Ashok Nayak Nov 1, 2025 5:33 PM

ಚಿಕ್ಕಬಳ್ಳಾಪುರ: ಕನಕ ದಾಸರ ಜಯಂತಿಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನ.8 ರಂದು ನಗರದ ಕನ್ನಡ ಭವನದಲ್ಲಿ  ಸಂಭ್ರಮ, ಸಡಗರದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗು ವುದು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನಕದಾಸ ಜಯಂತಿ ಅಂಗವಾಗಿ ಶುಕ್ರವಾರ ನಡೆದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಸಮುದಾಯದ ಮುಖಂಡ ರಿಂದ ಸಲಹೆಗಳನ್ನು ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ಶ್ರೀಕನಕ ದಾಸರ ಜಯಂತಿಯ ಅಂಗವಾಗಿ ನವೆಂಬರ್ ೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಚಿಕ್ಕಬಳ್ಳಾಪುರ ನಗರದ ಮರುಳು ಸಿದ್ದೇಶ್ವರ ದೇವಾಲಯದಿಂದ ಅದ್ದೂರಿ ಮೆರವಣಿಗೆ ಆಯೋಜಿಸಿ ಜಾನಪದ ಕಲಾತಂಡಗಳು ಹಾಗೂ ಪಲ್ಲಕ್ಕಿಗಳೊಂದಿಗೆ ನಡೆಸಲಾಗುವುದು. ಮೆರವಣಿಗೆಯು ಎಂ. ಜಿ ರಸ್ತೆ,ಬಿ.ಬಿ ರಸ್ತೆ ಮೂಲಕ ಕನ್ನಡ ಭವನದವರೆಗೆ ಸಾಗಲಿದೆ, ಸ್ತಬ್ದ ಚಿತ್ರಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ.ನಂತರ  ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Chikkaballapur News: ಶ್ರೀರಾಮ್ ಫೈನಾನ್ಸ್ ವತಿಯಿಂದ ೩೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವಿತರಣೆ ಶ್ರೀ ಮಂಗಳನಾಥ ಸ್ವಾಮೀಜಿ ಭಾಗಿ

ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಕನಕ ದಾಸರ ವಿಚಾರದಾರೆಗಳ ಕುರಿತು ಭಾಷಣ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಮುದಾಯದ ಸಾಧಕರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ  ಶ್ರೀಕನಕದಾಸರ ಜಯಂತಿಯನ್ನು ಬೆಳಿಗ್ಗೆ ೯ ಗಂಟೆಗೆ  ಆಚರಿಸಲು ಸೂಚನೆ ನೀಡಲಾಗಿದೆ. ಜಿಲ್ಲಾ ಮಟ್ಟದ ವೇದಿಕೆ ಕಾರ್ಯಕ್ರಮವು ೧೨.೩೦ ಕ್ಕೆ ಆರಂಭ ವಾಗುವುದು. ಜಿಲ್ಲೆಯ ಎಲ್ಲ  ಸರ್ಕಾರಿ ಕಚೇರಿಗಳಲ್ಲಿ ಶ್ರೀ ಕನಕ ದಾಸರ ಜಯಂತಿಯನ್ನು ಆಚರಿಸ ಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಮುದ್ರಣ, ವಿತರಣೆ, ವೇದಿಕೆ ಸಿದ್ಧತೆ ಮತ್ತು ಅಲಂಕಾರ, ಕುಡಿಯುವ ನೀರು, ಆಂಬುಲೆನ್ಸ್ ವ್ಯವಸ್ಥೆ, ಪೋಲೀಸ್ ಬಿಗಿ ಭದ್ರತೆ,ಮಧ್ಯಾಹ್ನದ ಉಪಹಾರ, ನಗರದ ಸ್ವಚ್ಚತೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಕಲಾತಂಡಗಳೊಂದಿಗೆ ಮೆರವಣಿಗೆ, ಸಾಧಕರ ಆಯ್ಕೆ  ಸೇರಿದಂತೆ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಸಕಲ ಸಿದ್ಧತೆಗಳನ್ನು ಮಾಡಿ ಕೊಳ್ಳಲು ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಇಲಾಖಾವಾರು ಕಾರ್ಯಭಾರವನ್ನು ಸಭೆಯಲ್ಲಿ ಹಂಚಿಕೆ ಮಾಡಿ ಈ ಎಲ್ಲ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ ಯಶಸ್ವಿಗೊಳಿಸಲು  ಜಿಲ್ಲಾಧಿಕಾರಿಗಳು ತಿಳಿಸಿದರು.

ಜಯಂತ್ಯೋತ್ಸವಕ್ಕೆ ಯಾವುದೇ ಲೋಪದೋಷವಾಗದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸು ವಂತೆ ಸೂಚನೆಗಳನ್ನು ಸಂಬಂಧಪಟ್ಟ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಈ ವೇಳೆ ನೀಡಿದರು.

ಜಿಲ್ಲೆಯ ಸಮಸ್ತ ನಾಗರಿಕರು, ಸಮುದಾಯದ ಮುಖಂಡರು, ಪದಾಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಮುಖಂಡರು, ಸದಸ್ಯರು, ರೈತ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಜಿಲ್ಲಾಧಿಕಾರಿಗಳು  ಈ ವೇಳೆ ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ತಹಸೀಲ್ದಾರ್ ರಶ್ಮಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ, ಸಮುದಾಯದ ಮುಖಂಡರಾದ ಎ. ನಾಗರಾಜು, ಮರಿಯಣ್ಣ, ಡಾ. ಚಂದ್ರಶೇಖರ್, ಶ್ರೀ ಕನಕ ದಾಸರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.