ದಿಢೀರ್ ಬೆಲೆಯೇರಿಕೆ ಕಂಡ ಈರುಳ್ಳಿ: ಗ್ರಾಹಕರ ಜೇಬಿಗೆ ಭಾರದ ಹೊರೆ: ಗೌರಿ ಗಣೇಶ ಹಬ್ಬಕ್ಕೂ ಮುನ್ನವೇ ಕೆ.ಜಿಗೆ 100ರ ಗಡಿ ತಲುಪುವ ಆತಂಕ
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಾಮಾನ್ಯ. ಆದರೆ ಈಗ ಈರುಳ್ಳಿ ಬೆಲೆ ಕೇಳಿ ದರೂ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ. ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಯಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗೌರಿ ಗಣೇಶ ಹಬ್ಬದ ವೇಳೆಗೆ ಕೆ.ಜಿಗೆ 100 ತಲುಪುವ ಸಾಧ್ಯತೆ ಇದೆ.
ಮಾರುಕಟ್ಟೆಯಲ್ಲಿ ಬಂದಿರುವ ಈರುಳ್ಳಿ -
ಚಿಕ್ಕಬಳ್ಳಾಪುರ: ಹಲವು ತಿಂಗಳುಗಳಿಂದ ಗ್ರಾಹಕ ಸ್ನೇಹಿಯಾಗಿದ್ದ ಈರುಳ್ಳಿ ಬೆಲೆ ಇದೀಗ ದಿಢೀರೆಂದು ಗಗನಮುಖಿಯಾಗಿರುವುದು ನೋಡಿದರೆ ಹಬ್ಬಗಳ ಸರಣಿ ಶುರುವಾಗುವ ಹೊತ್ತಿನಲ್ಲಿ ಗ್ರಾಹಕರ ಜೇಬಿನ ಭಾರ ಹೆಚ್ಚಿಸುವಲ್ಲಿ ಯಶ ಕಾಣುವ ಸೂಚನೆ ನೀಡಿದೆ.
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಾಮಾನ್ಯ. ಆದರೆ ಈಗ ಈರುಳ್ಳಿ ಬೆಲೆ ಕೇಳಿ ದರೂ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ. ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಯಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗೌರಿ ಗಣೇಶ ಹಬ್ಬದ ವೇಳೆಗೆ ಕೆ.ಜಿಗೆ 100 ತಲುಪುವ ಸಾಧ್ಯತೆ ಇದೆ.
ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 50ರಿಂದ 65ರವರೆಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದೇ ಈರುಳ್ಳಿ 70ರಿಂದ 80ರವರೆಗೆ ಮಾರಾಟ ವಾಗುತ್ತಿದೆ. ಮಹಾರಾಷ್ಟ್ರದ ನಾಗಪುರ, ನಾಸಿಕ್ ಮತ್ತು ಪೂನಾ ಭಾಗಗಳಿಂದ ಬಂದ ಹಳೆಯ ದಾಸ್ತಾನು ಈರುಳ್ಳಿ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ 5 ಸಾವಿರದಿಂದ 7 ಸಾವಿರದವರೆಗೆ ಮಾರಾಟ ವಾಗಿರುವುದು ಬೆಲೆಯೇರಿಕೆಗೆ ಸಾಕ್ಷಿಯಾಗಿದೆ.
ಸೋಮವಾರ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಕ್ವಿಂಟಲ್‌ಗೆ 4400ರಿಂದ 4600ರವರೆಗೆ, ಸಾಧಾರಣ ಗಾತ್ರದ ಈರುಳ್ಳಿ 3800ರಿಂದ 4 ಸಾವಿರದವರೆಗೆ ಮಾರಾಟವಾಯಿತು. ಸ್ಥಳೀಯ ಹೊಸ ಈರುಳ್ಳಿ ಕ್ವಿಂಟಲ್‌ಗೆ 1 ಸಾವಿರದಿಂದ 1200ರವರೆಗೆ ಖರೀದಿಯಾಯಿತು.
ಈ ಹಿಂದೆ ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗ ಗಳಿಂದ ಹಾಗೂ ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ ಅಕಾಲಿಕ ಮಳೆ ಮತ್ತು ಬರದಿಂದಾಗಿ ಈರುಳ್ಳಿ ಬೆಳೆ ರೈತರ ಕೈ ಸೇರಿಲ್ಲ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಕಾರಣ ಮಹಾರಾಷ್ಟ್ರದ ಈರುಳ್ಳಿಯನ್ನೇ ಅವಲಂಬಿಸಬೇಕಾಗಿದೆ ಎಂದು ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ.
ಹಬ್ಬದ ಯಾದಿ ಶುರುವಾಗುವ ವೇಳೆಗೆ ಈರುಳ್ಳಿ ಬೆಲೆ ಇಳಿಯಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ದರ ಕಡಿಮೆಯಾಗುವ ಬದಲು ಮತ್ತಷ್ಟು ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಹೊಸ ಈರುಳ್ಳಿಗೂ ಹೆಚ್ಚಿದ ಬೇಡಿಕೆ: ಎಪಿಎಂಸಿ ಮಾರುಕಟ್ಟೆಯಲ್ಲಿ ಹೊಸ ಈರುಳ್ಳಿಗೂ ಬೇಡಿಕೆ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ 30ಕ್ಕೂ ಹೆಚ್ಚು ಟ್ರಕ್‌ಗಳಲ್ಲಿ ಹೊಸ ಈರುಳ್ಳಿ ಪೂರೈಕೆಯಾಗಿದೆ. ಉತ್ತಮ ಗುಣಮಟ್ಟದ ಹೊಸ ಈರುಳ್ಳಿ ಕ್ವಿಂಟಲ್‌ಗೆ 4700ರಿಂದ 5 ಸಾವಿರದವರೆಗೆ ಮಾರಾಟ ವಾಯಿತು ಎಂದು ಎಪಿಎಂಸಿ ಸಗಟು ಈರುಳ್ಳಿ ವ್ಯಾಪಾರಿ ವೆಂಕಟೇಶ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ನಾಗಪುರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಬೆಳೆ ಹಾನಿ ಯಾಗಿರುವುದರಿಂದ ಹೊಸ ಈರುಳ್ಳಿಯ ಬೆಲೆಯೂ ಏರಿಕೆಯಾಗಿದೆ. ಇನ್ನೂ ಕೆಲವು ದಿನ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈರುಳ್ಳಿ ಪೂರೈಕೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಿಂದ 30 ಟ್ರಕ್ ಪೂರೈಕೆ
ಶನಿವಾರ ಜಿಲ್ಲೆಗೆ ಮಹಾರಾಷ್ಟ್ರದಿಂದ 30 ಟ್ರಕ್ ಈರುಳ್ಳಿ ಪೂರೈಕೆಯಾಗಿದೆ. ನಾಗಪುರ, ನಾಸಿಕ್ ಮತ್ತು ಪೂನಾ ಸೇರಿದಂತೆ ವಿವಿಧ ಭಾಗಗಳಿಂದ ರಾಜ್ಯಕ್ಕೆ 500ಕ್ಕೂ ಹೆಚ್ಚು ಟ್ರಕ್‌ಗಳಲ್ಲಿ ಈರುಳ್ಳಿ ಬಂದಿದೆ.
ಎಪಿಎAಸಿಯಲ್ಲಿ ಸಗಟು ದರ ಕೆ.ಜಿಗೆ ೫೦ರಷ್ಟಿರುವುದರಿಂದ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಬೇರೆ ಬೇರೆ ದರದಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ. ಮಧ್ಯಮ ಗಾತ್ರದ ಈರುಳ್ಳಿ ಕೆ.ಜಿಗೆ 70ರಷ್ಟಿದ್ದು, ಉತ್ತಮ ಗುಣಮಟ್ಟದ ಹಾಗೂ ಹೆಚ್ಚು ದಿನ ಬಾಳಿಕೆ ಬರುವ ಈರುಳ್ಳಿ 80ರಿಂದ 90ರವರೆಗೆ ಮಾರಾಟ ವಾಗುತ್ತಿದೆ. ಗೌರಿ ಗಣೇಶ ಹಬ್ಬದ ವೇಳೆಗೆ ಕೆ.ಜಿಗೆ 100 ತಲುಪಬಹುದು ಎಂದು ಸಗಟು ವ್ಯಾಪಾರಿ ವಿ.ಮೋಹನ್ ತಿಳಿಸಿದ್ದಾರೆ.
“ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈರುಳ್ಳಿ ಬೆಲೆ ಕೇಳಿದರೆ ಮಾತ್ರ ಕಣ್ಣಲ್ಲಿ ನೀರು ಬರುತ್ತದೆ. ಬರ ಮತ್ತು ಇತರ ಕಾರಣಗಳಿಂದ ನಮ್ಮ ಭಾಗದಲ್ಲಿ ಈರುಳ್ಳಿ ಬೆಳೆದಿಲ್ಲ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಕಾರಣ ಎಪಿಎಂಸಿ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಬೆಲೆ ಹೆಚ್ಚಾಗಿದೆ” ಎಂದು ಗೃಹಿಣಿ ನಾಗರತ್ನ ಹೇಳಿದ್ದಾರೆ.