ನಿವೇಶನ ಇಲ್ಲದ ಅರ್ಹರಷ್ಟೆ ನಿವೇಶನಗಳನ್ನು ಪಡೆಯುವಂತೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಜಿ.ಪ್ರಭು ಕರೆ
ಜಿಲ್ಲೆಯಲ್ಲಿ ಪಾರದರ್ಶಕವಾಗಿ ನಿವೇಶನಗಳನ್ನು ನಿವೇಶನ ರಹಿತರಿಗೇ ನೀಡುವ ಉದ್ದೇಶ ದಿಂದ ಗ್ರಾಮಸಭೆಗಳಲ್ಲಿ ಖುದ್ದಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಾಗಿ ವರದಿ ಸಲ್ಲಿಸಲು 154 ಗ್ರಾಮ ಪಂಚಾಯ್ತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡ ಲಾಗಿದೆ, ಈ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬಂಧಪಟ್ಟ ಗ್ರಾಮಸಭೆಗೆ ಹಾಜರಾಗಿ ಸರ್ಕಾರದ ನಿಯಮಾವಳಿ ರೀತ್ಯ ಫಲನುಭವಿಗಳನ್ನು ಆಯ್ಕೆ ಮಾಡಬೇಕು
ನಿವೇಶನ ಅಥವಾ ವಸತಿ ಇಲ್ಲದಿರುವುದರ ಬಗ್ಗೆ ಖಚಿತಪಡಿಸಿಕೊಂಡು ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. -
ಚಿಕ್ಕಬಳ್ಳಾಪುರ: ನಿವೇಶನ ಅಥವಾ ವಸತಿ ಇಲ್ಲದಿರುವುದರ ಬಗ್ಗೆ ಖಚಿತಪಡಿಸಿಕೊಂಡು ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ “ವಸತಿ/ನಿವೇಶನ ಯೋಜನೆ ಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪಾರದರ್ಶಕವಾಗಿ ನಿವೇಶನಗಳನ್ನು ನಿವೇಶನ ರಹಿತರಿಗೇ ನೀಡುವ ಉದ್ದೇಶ ದಿಂದ ಗ್ರಾಮಸಭೆಗಳಲ್ಲಿ ಖುದ್ದಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಾಗಿ ವರದಿ ಸಲ್ಲಿಸಲು 154 ಗ್ರಾಮ ಪಂಚಾಯ್ತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡ ಲಾಗಿದೆ, ಈ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬಂಧಪಟ್ಟ ಗ್ರಾಮಸಭೆಗೆ ಹಾಜರಾಗಿ ಸರ್ಕಾರದ ನಿಯಮಾವಳಿ ರೀತ್ಯ ಫಲನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.
ಇದನ್ನೂ ಓದಿ: Chikkaballapur News: ಆದಿಚುಂಚನಗಿರಿ ಶ್ರೀ ಅಮೃತ ಹಸ್ತದಿಂದ ಮೇ.13ರಂದು ಒಕ್ಕಲಿಗರ ಸಂಘದ ನೂತನ ವಾಣಿಜ್ಯ ಮಳಿಗೆಗಳ ಲೋಕಾರ್ಪಣೆ
ಸಂಬಂಧಪಟ್ಟ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಸಹ ಕಡ್ಡಾಯ ವಾಗಿ ಗ್ರಾಮಸಭೆಗಳಿಗೆ ಹಾಜರಾಗಿ ನಿವೇಶನ ರಹಿತರನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ಸಂದರ್ಭದಲ್ಲಿ ಸರ್ಕಾರ ನೀಡಿರುವ ಮಾನದಂಡಗಳನ್ನು ಪಾಲಿಸಬೇಕು. 2018ರಲ್ಲಿ ಸಮೀಕ್ಷೆ ಮಾಡಿ ಪಟ್ಟಿ ಮಾಡಿರುವ ಪಟ್ಟಿಯಲ್ಲಿ ಇರುವ ನಿವೇಶನರಹಿತರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಪಟ್ಟಿಯಲ್ಲಿ ಇರುವವರ ಹೆಸರಲ್ಲಿ ನಿವೇಶನ/ವಸತಿ ಇದೆಯೇ, ಇಲ್ಲವೇ ಎನ್ನುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ಷೇತ್ರ ವೀಕ್ಷಣೆ ಮಾಡಿ ಖಚಿತ ಪಡಿಸಿಕೊಳ್ಳಬೇಕು. ನಿವೇಶನ ಇಲ್ಲದವರಿಗೆ ವಸತಿ ರಹಿತರೆಂದು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ದೃಢೀ ಕರಣ ಪತ್ರ ನೀಡಬೇಕು. ಅಂತಹವರಿಗೆ ನಿವೇಶನ ಸಿಗಬೇಕು ಎಂದರು.
ಯಾವುದೇ ಗ್ರಾಮ ಸಭೆ ನಡೆಯಬೇಕಾದರೆ ನಿವೇಶನ ರಹಿತರ ಹೆಸರನ್ನು ಜೋರಾಗಿ ಓದಿ ವೇದಿಕೆಯ ಮೇಲೆ ಕರೆಯಬೇಕು. ಗ್ರಾಮ ಸಭೆಯಲ್ಲಿ ಭಾಗವಹಿಸಿರುವವರು ಸಹ ವೇದಿಕೆ ಮೇಲೆ ಬಂದವರಿಗೆ ನಿವೇಶನ ಇಲ್ಲ ಎಂದು ಖಾತ್ರಿಪಡಿಸಬೇಕು. ಅಂತಹವರಿಗೆ ನಿವೇಶನ ಗಳನ್ನು ನೀಡಲು ತ್ವರಿತ ಕ್ರಮ ತೆಗೆದುಕೊಳ್ಳಲು ತಾಲ್ಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಗ್ರಾಮಸಭೆಯಲ್ಲಿ ಕೋರಂ ಇರಬೇಕು.ಕನಿಷ್ಠ 100 ಜನ ಗ್ರಾಮವಾಸಿ ಮತದಾರರು ಇರಬೇಕು.ಜೀತ ವಿಮುಕ್ತರಿಗೆ, ಮಹಿಳಾ ಫಲಾನುಭವಿ ಗಳಿಗೆ, ಅಂಗವಿಕಲರಿಗೆ, ಮಾಜಿ ಸೈನಿಕರಿಗೆ ಆದ್ಯತೆ ನೀಡಿ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ಯೋಜನಾ ನಿರ್ದೇಶಕ ಮಂಜುನಾಥ,ತಾಲ್ಲೂಕು ತಹಸೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ನಗರಾಡಳಿತ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಭಾಗವಹಿಸಿದ್ದರು.