ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಕೇಂದ್ರ ಬಿಜೆಪಿ ಸರ್ಕಾರವು ಸಂವಿಧಾನ ಬಾಹಿರವಾಗಿ ಮೂರನೇ ಬಾರಿ ಚುನಾವಣಾ ಅಕ್ರಮ ನಡೆಸಿ ಅಧಿಕಾರಕ್ಕೆ ಬಂದಿದೆ : ಕೆ.ಪಿ.ಪದ್ಮರಾಜ್ ಜೈನ್

ಎಐಸಿಸಿ ಮುಖಂಡರು ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಪದೇ ಪದೇ ಇದರ ವಿರುದ್ಧ ವೋಟ್ ಚೋರಿ ಎಂದು ದಾಖಲಾತಿಗಳ ಮುಖಾಂತರ ದೇಶದ ಜನತೆಯ ಮುಂದೆ ಹೇಳು ತ್ತಿದ್ದರೂ ಕೂಡ ಕೇಂದ್ರ ಸರ್ಕಾರ ವಾಗಲಿ ಅಥವಾ ಚುನಾವಣಾ ಆಯೋಗವಾಗಲಿ ಇದರ ಬಗ್ಗೆ ಗಮನ ಹರಿಸಿರುವುದಿಲ್ಲ

ಕೇಂದ್ರ ಬಿಜೆಪಿ ಸರ್ಕಾರವು ಸಂವಿಧಾನ ಬಾಹಿರವಾಗಿ ಅಧಿಕಾರಕ್ಕೆ ಬಂದಿದೆ

ಕೆ.ಪಿ.ಪದ್ಮರಾಜ್ ಜೈನ್ ಕುದುರೆ ಬ್ಯಾಲ್ಯ ಅವರು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು ೮೩೧೫ ಸಹಿ ಸಂಗ್ರಹಣೆ ಮಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀವಿಜಯ ಮುಳುಗುಂದ್ ರವರಿಗೆ ಹಸ್ತಾಂತರಿಸಿದ್ದಾರೆ. -

Ashok Nayak
Ashok Nayak Dec 3, 2025 10:47 PM

ಗೌರಿಬಿದನೂರು: ಕೇಂದ್ರ ಬಿಜೆಪಿ ಸರ್ಕಾರವು ಸಂವಿಧಾನ ಬಾಹಿರವಾಗಿ ಮೂರನೇ ಬಾರಿ ಚುನಾವಣಾ ಅಕ್ರಮ ನಡೆಸಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಜೈನ್ ಆರೋಪಿಸಿದರು.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು  ಎಐಸಿಸಿ ಮುಖಂಡರು ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಪದೇ ಪದೇ ಇದರ ವಿರುದ್ಧ ವೋಟ್ ಚೋರಿ ಎಂದು ದಾಖಲಾತಿಗಳ ಮುಖಾಂತರ ದೇಶದ ಜನತೆಯ ಮುಂದೆ ಹೇಳುತ್ತಿದ್ದರೂ ಕೂಡ ಕೇಂದ್ರ ಸರ್ಕಾರ ವಾಗಲಿ ಅಥವಾ ಚುನಾವಣಾ ಆಯೋಗವಾಗಲಿ ಇದರ ಬಗ್ಗೆ ಗಮನಹರಿಸಿರುವುದಿಲ್ಲ.

ಇದನ್ನೂ ಓದಿ: Chikkaballapur News: ಎಚ್.ಐ.ವಿ ಸೋಂಕು ಹರಡುವಿಕೆ ತಡೆಗಟ್ಟಲು ಜಾಗೃತಿ ಮೂಡಿಸಿ: ನ್ಯಾ.ಟಿ.ಪಿ.ರಾಮಲಿಂಗೇಗೌಡ

ಆದ್ದರಿಂದ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂಬ ಉದ್ದೇಶದಿಂದ  ವೋಟ್ ಚೋರಿ ಬಗ್ಗೆ ಸಹಿ ಸಂಗ್ರಹಣ ಕಾರ್ಯಕ್ರಮ ಜಾರಿಗೆ ತಂದಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುತ್ತಿರುವುದು ಸಂತೋಷದ ಸಂಗತಿ ಎಂದರು.

ಸಹಿಸಂಗ್ರಹದ ಭಾಗವಾಗಿ ಕೆ.ಪಿ.ಪದ್ಮರಾಜ್ ಜೈನ್ ಕುದುರೆ ಬ್ಯಾಲ್ಯ ಅವರು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು ೮೩೧೫ ಸಹಿ ಸಂಗ್ರಹಣೆ ಮಾಡಿ ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿಗಳಾದ ಶ್ರೀವಿಜಯ ಮುಳುಗುಂದ್ ರವರಿಗೆ ಹಸ್ತಾಂತರಿಸಿದ್ದಾರೆ.