3ನೇ ಹಂತದ ಶುದ್ಧೀಕರಣ ಆಗದಿರಲು ಕೇಂದ್ರ ಸರಕಾರವೇ ಹೊಣೆಯಾಗಿದೆ: ಬಿ.ಎಸ್.ರಫಿವುಲ್ಲಾ ಆರೋಪ
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ನೇತೃತ್ವದ ಎನ್.ಡಿ.ಎ.ಸರ್ಕಾರ ರಾಜ್ಯಕ್ಕೆ ನ್ಯಾಯೋಚಿತವಾಗಿ ಸಲ್ಲಬೇಕಾದ ಜಿಎಸ್‌ಟಿ (GST)ನೀಡದೆ ಇರುವುದು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾಗಿದ್ದ ಸುಮಾರು 10 ಸಾವಿರ ಕೋಟಿ ಜಿಎಸ್‌ಟಿ ಹಣ ತಾರತಮ್ಯ ಇಲ್ಲದೆ ನೀಡಿದ್ದರೆ ಆರ್ಥಿಕ ಸೌಲಭ್ಯ ದೊರೆಯುತ್ತಿತ್ತು
ಬಿ.ಎಸ್.ರಫಿವುಲ್ಲಾ -
ಚಿಕ್ಕಬಳ್ಳಾಪುರ : ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸುಮಾರು 65 ಲಕ್ಷ ಜನತೆಯ ದೀರ್ಘಕಾಲದ ಬೇಡಿಕೆ ಹೆಚ್.ಎನ್. ವ್ಯಾಲಿ ಮತ್ತು ಕೆ.ಸಿ.ವ್ಯಾಲಿ(H.N. Valley and K.C. Valley) ಮೂರನೇ ಹಂತದ ಶುದ್ಧೀಕರಣ ಆಗದೆ ಇರಲು ಪ್ರಮುಖ ಕಾರಣ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್.ಡಿ.ಎ ಸರ್ಕಾರ(NDA government)ವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಕೆಪಿಸಿಸಿ(KPCC) ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎಸ್ .ರಫಿವುಲ್ಲಾ ನೇರವಾಗಿ ಆರೋಪಿಸಿದರು.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ವಿಚಾರ ತಿಳಿಸಿರು ಅವರು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ವೀರಪ್ಪ ಮೋಯ್ಲಿ (Veerappa Moily)ಅವರ ಜೀವನದ ಕನಸಿನ ಕೂಸು ಎತ್ತಿನಹೊಳೆ ಯೋಜನೆಯ ಮುಂದಿನ 2 ವರ್ಷಗಳಲ್ಲಿ ಪೂರ್ಣ ಗೊಳ್ಳುವುದು ಶತಸಿದ್ಧ ಎಂದು ತಿಳಿಸಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ನೇತೃತ್ವದ ಎನ್.ಡಿ.ಎ.ಸರ್ಕಾರ ರಾಜ್ಯಕ್ಕೆ ನ್ಯಾಯೋಚಿತವಾಗಿ ಸಲ್ಲ ಬೇಕಾದ ಜಿಎಸ್‌ಟಿ(GST)ನೀಡದೆ ಇರುವುದು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾಗಿದ್ದ ಸುಮಾರು 10 ಸಾವಿರ ಕೋಟಿ ಜಿಎಸ್‌ಟಿ ಹಣ ತಾರತಮ್ಯ ಇಲ್ಲದೆ ನೀಡಿದ್ದರೆ ಆರ್ಥಿಕ ಸೌಲಭ್ಯ ದೊರೆಯುತ್ತಿತ್ತು ಆ ಸೌಲಭ್ಯದಿಂದ ಸುಮಾರು 4500 ರಿಂದ 6000 ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಪರಿಷ್ಕರಣೆ ಆಗುತ್ತಿತ್ತು. ಈಗ ಆರ್ಥಿಕ ಸಂಕಷ್ಟ ಇರುವ ಕಾರಣ ಕೆ.ಸಿ.ಮತ್ತು ಹೆಚ್ ಎನ್ ವ್ಯಾಲ್ಯೂ ಮೂರನೇ ಹಂತದ ಶುದ್ಧೀಕರಣ ಮಾಡಲು ಸಾಧ್ಯವಾಗಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನತೆಗೆ ಅಂತರ್ಜಲ ವೃದ್ಧಿಗಾಗಿ ಹೆಚ್‌ಎನ್ ವ್ಯಾಲಿ ಮತ್ತು ಕೆಸಿ ವ್ಯಾಲಿ ಎಂಬ ಎರಡು ಸಾವಿರ ಕೋಟಿರುಗಳ ವೆಚ್ಚದ ಎರಡು ಯೋಜನೆಗಳನ್ನು ಜಾರಿಗೆ ತಂದಿತು. ಆಗ ಸರ್ಕಾರದ ಮುಂದೆ ಮೂರನೇ ಹಂತದ ಶುದ್ಧೀಕರಣದ ಯೋಚನೆ ಇರಲಿಲ್ಲ.
ಹೆಚ್‌ಎನ್ ವ್ಯಾಲಿ ಇಲ್ಲಿಗೆ ಹರಿದು ಬರಲು ಮೂಲ ಕಾರಣವೇ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ. ಸುಧಾಕರ್(Dr K Sudhakar). ಬದಲಾದ ರಾಜಕಾರಣದಲ್ಲಿ ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾದರು. ಈಗ ಅವರೇ ತಂದಿದ್ದ ಹೆಚ್.ಎನ್.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಸ್ಪದ ಎಂದರು.
ರಾಜ್ಯದಿAದ ಭಾರತೀಯ ಜನತಾ ಪಕ್ಷದ 25 ಮಂದಿ ಸಂಸದರು ಆಯ್ಕೆ ಆಗಿದ್ದು ಇವರುಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣವನ್ನು ತರಲು ಏಕೆ ಪ್ರಯತ್ನಿಸುತ್ತಿಲ್ಲ ಈ ಕಾರಣದಿಂದಾಗಿ ಸಂಸದರು ಕೂಡ ಈ ವಿಚಾರದಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಕೆ.ಸಿ.ವ್ಯಾಲಿ ಹಾಗೂ ಹೆಚ್.ಎನ್ ವ್ಯಾಲಿ ನೀರಿಗೆ ಮೂರನೇ ಹಂತದ ಶುದ್ದೀಕರಣ ಅತ್ಯವಶ್ಯಕ ಎಂದು ತಿಳಿದಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ರೈತ ಸಂಘಗಳ ಸಹಚರರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ವಿರೋಧ ಲೆಕ್ಕಿಸದ ಡಾ ಕೆ ಸುಧಾಕರ್ ಆತುರದಿಂದ ಜನ ಬಳಕೆಗೆ ಯೋಗ್ಯವಿಲ್ಲದ, ಕೃಷಿಗೂ ದೊರೆಯದ ನೀರನ್ನು ತಂದ ಕೀರ್ತಿಗೆ ಪಾತ್ರವಾಗಿದ್ದಾರೆ ಎಂದು ದೂರಿದರು.
ಪ್ರಸ್ತುತ ಕೆ.ಸಿ & ಹೆಚ್ ಎನ್ ವ್ಯಾಲಿಯ ಮೂಲ ರೂವಾರಿ ಡಾ ಕೆ ಸುಧಾಕರ್ ಆಂಧ್ರ ಪ್ರದೇಶದ ಕೃಷ್ಣ ನದಿಯ ನೀರನ್ನು ತರುವ ವ್ಯರ್ಥ ಭರವಸೆ ನೀಡುತ್ತಿರುವುದು ನಮ್ಮ ಕ್ಷೇತ್ರದ ದೌರ್ಭಾಗ್ಯ ಎಂದರು