ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಎಚ್‌ಎನ್ ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ ಸರಕಾರದ ಜವಾಬ್ದಾರಿ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ರಾಜ್ಯ ಸರ್ಕಾರ ಜಿಲ್ಲೆಯ ಕೆರೆಗಳಿಗೆ ಹೆಚ್.ಎನ್ ವ್ಯಾಲಿಯ ಕೊಳಚೆ ನೀರನ್ನು 2ನೇ ಹಂತ ದಲ್ಲಿ ಶುದ್ಧೀಕರಿಸಿ ಹರಿಸುತ್ತಿದೆ. ಈ ಶುದ್ಧೀಕರಣದ ಬಗ್ಗೆಯೂ ನಾಗರೀಕರಿಗೆ ಅನುಮಾನವಿದೆ. ಆದರೂ ಕೂಡ ಸರಕಾರ ಎರಡನೇ ಹಂತದಲ್ಲಿ ಈ ಯೋಜನೆಗೆ ಚಾಲನೆ ನೀಡಿ ಇನ್ನೂ ಹಲವು ಕೆರೆಗಳಿಗೆ ವ್ಯಾಲಿಯ ನೀರು ಹರಿಸಲು ಅನುದಾನ ನೀಡಿದೆ.

ಎಚ್‌ಎನ್ ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ ಸರಕಾರದ ಜವಾಬ್ದಾರಿ

-

Ashok Nayak
Ashok Nayak Mar 13, 2026 10:04 PM

ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ(H.N.Valley) ಸಂಸ್ಕರಿತ ನೀರನ್ನು 3ನೇ ಹಂತದಲ್ಲಿ ಶುದ್ಧೀ ಕರಿಸಲು ವಿವಿಧ ಸಂಘಟನೆಗಳು, ಹೋರಾಟಗಾರರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ರಾಜ್ಯ ಸರ್ಕಾರ ಇಚ್ಛಾಶಕ್ತಿ ತೋರದಿರುವುದು ದುರಂತವಾಗಿದೆ.ಇದು ಸರಕಾರದ ಆಧ್ಯ ಕರ್ತವ್ಯವಾಗಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಬೇಸರ ವ್ಯಕ್ತಪಡಿಸಿದರು.

ನಗರದ ವಾಪಸಂದ್ರದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಜಿಲ್ಲೆಯ ಕೆರೆಗಳಿಗೆ ಹೆಚ್.ಎನ್ ವ್ಯಾಲಿಯ ಕೊಳಚೆ ನೀರನ್ನು 2ನೇ ಹಂತ ದಲ್ಲಿ ಶುದ್ಧೀಕರಿಸಿ ಹರಿಸುತ್ತಿದೆ. ಈ ಶುದ್ಧೀಕರಣದ ಬಗ್ಗೆಯೂ ನಾಗರೀಕರಿಗೆ ಅನುಮಾನ ವಿದೆ. ಆದರೂ ಕೂಡ ಸರಕಾರ ಎರಡನೇ ಹಂತದಲ್ಲಿ ಈ ಯೋಜನೆಗೆ ಚಾಲನೆ ನೀಡಿ ಇನ್ನೂ ಹಲವು ಕೆರೆಗಳಿಗೆ ವ್ಯಾಲಿಯ ನೀರು ಹರಿಸಲು ಅನುದಾನ ನೀಡಿದೆ. ಅದೇ ಅನುದಾನವನ್ನು ಪ್ರಸ್ತುತ ಹರಿಸುತ್ತಿರುವ ನೀರಿನ ಮೂರನೇ ಹಂತದ ಶುದ್ಧೀಕರಣಕ್ಕೆ ಬಳಸಿದ್ದರೆ ಜನರ ಆರೋಗ್ಯ ಸುಧಾರಿಸುತ್ತಿತ್ತು. ಆದರೆ ಸರ್ಕಾರ ಆ ನಿಟ್ಟಿನಲ್ಲಿ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಇದನ್ನೂ ಓದಿ: HN Valley: ಹೆಚ್.ಎನ್.ವ್ಯಾಲಿ ಶುದ್ಧೀಕರಣಕ್ಕೆ ಆಗ್ರಹಿಸಿ ಸಚಿವರಿಗೆ ಕೊಳಚೆ ನೀರು ಕಳಿಸಿ ಆಕ್ರೋಶ ವ್ಯಕ್ತಪಡಿಸಿದ ಹರೀಶ್‌ರೆಡ್ಡಿ

ಬೆಂಗಳೂರಿನಿಂದ ಬರುತ್ತಿರುವ ತ್ಯಾಜ್ಯ ನೀರಿನಲ್ಲಿ ಆಸ್ಪತ್ರೆ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಸೇರಿ ಆ ತ್ಯಾಜ್ಯ ನೀರಿನಲ್ಲಿ ರಾಸಾಯನಿಕ ಹೆಚ್ಚಾಗಿವೆ. ಇದು ಜನರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಜಿಲ್ಲೆಯಲ್ಲಿ ಬೆಳೆಯುವ ತರಕಾರಿಯಲ್ಲೂ ಅಪಾಯಕಾರಿ ಲವಣಾಂಶ ಭಾರಲೋಹದ ಅಂಶಗಳಿರುವ ಬಗ್ಗೆ  ಮಾತುಗಳು ಕೇಳಿಬಂದಿದ್ದು, ಜಿಲ್ಲೆಯ ರೈತರು ಬೆಳೆದ ತರಕಾರಿ ಬಳಸಬಾರದೆಂದು ಹೇಳಿದರೆ ರೈತರ ಸ್ಥಿತಿ ಏನಾಗಬಹುದು ಎಂಬುದನ್ನು ಜನಪ್ರತಿನಿಧಿಗಳು ಸರಕಾರ ಯೋಚಿಸಬೇಕು ಎಂದು ಪ್ರಶ್ನಿಸಿದರು.

ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್‌ರೆಡ್ಡಿ ನಾನು ಬಿಜೆಪಿಯ ಶಿಸ್ತಿನ ಕಾರ್ಯಕರ್ತ ಎನ್ನುತ್ತಾರೆ. ಆದರೆ ಬಂದ್ ವಿಚಾರದಲ್ಲಿ ಅವರು ತಮ್ಮ ಜೊತೆ ಚರ್ಚೆ ನಡೆಸದೆ ದಿನಾಂಕ ನಿಗಧಿ ಮಾಡಿದ್ದಾರೆ. ಭಾನುವಾರ ಎಲ್ಲರೂ ರಜೆಯಲ್ಲಿರುವ ಕಾರಣ ಅಂದು ಬಂದ್ ಮಾಡಿದರೂ ಯಾವುದೇ ಉಪಯೋಗವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರಿಯಾದ ದಿನ ಮಾಡಬಹುದಿತ್ತು. ವಿದ್ಯಾರ್ಥಿಗಳಿಗೆ ಪರೀಕ್ಷೆ, ನಾಗರೀಕ ರಿಗೆ ಹಬ್ಬ ಹರಿದಿನ ಹತ್ತಿರವಿರುವ ಸಂದರ್ಭದಲ್ಲಿ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ. ಅವರ ಉದ್ದೇಶ ಸರಿಯಾಗಿದೆ.ಆದರೆ ಸಂಧರ್ಭ ಸರಿಯಿಲ್ಲ ಅಷ್ಟೇ. ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ  ಬಂದ್‌ಗೆ ನಮ್ಮ ಸಹಮತ ಇದೆ ಎಂದರು.

3ನೇ ಹಂತದ ಶುದ್ಧೀಕರಣ ವಿಚಾರದಲ್ಲಿ ಬಂದ್ ಯಾರೇ ಮಾಡಲಿ ಸರ್ಕಾರಕ್ಕೆ ಚುರುಕು ಮುಟ್ಟಿಸುವ ರೀತಿ ಬಂದ್ ಮಾಡಬೇಕು. ಆದರೆ ಸಂದೀಪ್ ಭಾನುವಾರ ಬಂದ್ ಮಾಡುವು ದರಿಂದ ಸರ್ಕಾರಕ್ಕೆ ಬಿಸಿ ಮುಟ್ಟಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳನ್ನು ಸೇರಿಸಿಕೊಂಡು ರಾಜ್ಯ ನಾಯಕ ರನ್ನು ಕರೆಯಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಜಿಲ್ಲೆಯ ಜನರು ಸೇವಿಸುವ ಊಟವೇ ವಿಷವಾಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಚರ್ಮ ಮಂದವಾಗಿದೆ. ಮೂರನೇ ಹಂತದ ಶುದ್ಧೀಕರಣ ಮಾಡದಿದರೆ ಮುರೂ ಜಿಲ್ಲೆಗಳ ಜನರನ್ನು ಸೇರಿಸಿ ಮುಂದಿನ ದಿನಗಳಲ್ಲಿ ಪಕ್ಷಾತೀತ ಹೋರಾಟಕ್ಕೆ ಸಿದ್ಧತೆ ಮಾಡಲಾಗು ವುದು ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಪಕ್ಷದ ಕಚೇರಿ ಮಾಡಬೇಕಿತ್ತು. ನೂತನ ಕಚೇರಿಯನ್ನು ವಾಪಸಂದ್ರದಲ್ಲಿ ಮಾಡಿದ್ದು ಪಕ್ಷದ ವರಿಷ್ಠರನ್ನು ಕರೆಯಿಸಿ ಮಾ.15ರ ಭಾನುವಾರ ಉದ್ಘಾಟನೆ ನೆರವೇರಿಸಬೇಕಿತ್ತು. ಆದರೆ ಬಂದ್ ಹಿನ್ನಲೆ ಕಚೇರಿ ಉದ್ಘಾಟನೆ ಮುಂದೂಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳಿಧರ್, ಕೊಂಡೇನಹಳ್ಳಿ ಕೆ.ಬಿ.ಮುರಳಿ, ಮಧು ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ರಾಜ್ಯ ಪರಿಷತ್ ಸದಸ್ಯರ ಎಬಿ ಬೈರೇಗೌಡ ಜಿಲ್ಲಾ ಕಾರ್ಯದರ್ಶಿ ಅಶೋಕ್, ಲಕ್ಷ್ಮಿಪತಿ, ವಿ.ಮಧು ಚಂದ್ರ, ಪ್ರಭಾಕರ್ ರೆಡ್ಡಿ, ಸೀಕಲ್ ಆನಂದ್ ಗೌಡ, ದೇವರಾಜ್, ತೇಜೇಂದ್ರ ಪಾಪು, ವೇಣು ಮಾಧವ್, ಗೋವಿಂದರಾಜು, ಬಾಗೇಪಲ್ಲಿ ಪ್ರತಾಪ್, ಗಂಗರೆಡ್ಡಿ ಇದ್ದರು.