ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಜಾತಿ ಮುಕ್ತ ಮತ್ತು ಹಸಿವು ಮುಕ್ತ ಸಮಾಜ ನಿರ್ಮಾಣದಲ್ಲಿ ದಸಂಸ ಕೊಡುಗೆ ಆಪಾರ: ರಾಜ್ಯ ಮುಖಂಡ ಕೆ.ಸಿ.ರಾಜಾಕಾಂತ್

ಕಳೆದ 50 ವರ್ಷಗಳ ಸುದೀರ್ಘ ಪಯಣದಲ್ಲಿ ದಲಿತ ಸಂಘರ್ಷ ಸಮಿತಿ ಅನೇಕ ಸಾಧನೆ ಗಳನ್ನೂ ಸವಾಲುಗಳನ್ನೂ ಎದುರಿಸಿದೆ. ಜನಪರ ಹೋರಾಟಗಳ ಜೊತೆಗೆ ಭೂಮಿಗಾಗಿ ಕಡ್ಡಾಯ ಶಿಕ್ಷಣಕ್ಕಾಗಿ, ಸೂರಿಗಾಗಿ, ಸೇಂದಿ ಮುಕ್ತ ರಾಜ್ಯಕ್ಕಾಗಿ, ಶೋಷಣೆಯ ವಿಮುಕ್ತಿಗಾಗಿ ವಿಶ್ರಾಂತವಾಗಿ ಹೋರಾಟಗಳನ್ನು ಕಟ್ಟಿದೆ.

ಹಸಿವು ಮುಕ್ತ ಸಮಾಜ ನಿರ್ಮಾಣದಲ್ಲಿ ದಸಂಸ ಕೊಡುಗೆ ಆಪಾರ

-

Ashok Nayak
Ashok Nayak Mar 13, 2026 11:00 PM

ಚಿಕ್ಕಬಳ್ಳಾಪುರ: ಕಳೆದ 50 ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ದಲಿತರು ಮತ್ತು ದಮನಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ಜೊತೆಗೆ ಜಾತಿಮುಕ್ತ ಮತ್ತು ಹಸಿವು ಮುಕ್ತ ಸಮಾಜವನ್ನು ನಿರ್ಮಿಸುವ ದಿಕ್ಕಿನಲ್ಲಿ ನಿರಂತರವಾಗಿ ತನ್ನ ಹೋರಾಟವನ್ನು ಮುಂದುವರಿಸುತ್ತಾ ಬಂದಿದೆ ಎಂದು ದಸಂಸ ರಾಜ್ಯ ಮುಖಂಡ ಕೆ.ಸಿ. ರಾಜಕಾಂತ್ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿ ಶೇಟ್ ದಿನ್ನೆ ಬಳಿ ದಸಂಸ ವತಿಯಿಂದ ಏರ್ಪಡಿಸಿದ್ದ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವ ಸಭೆಯನ್ನು ದ್ದೇಶಿಸಿ ಮಾತನಾಡಿದರು.

ಕಳೆದ 50 ವರ್ಷಗಳ ಸುದೀರ್ಘ ಪಯಣದಲ್ಲಿ ದಲಿತ ಸಂಘರ್ಷ ಸಮಿತಿ ಅನೇಕ ಸಾಧನೆ ಗಳನ್ನೂ ಸವಾಲುಗಳನ್ನೂ ಎದುರಿಸಿದೆ. ಜನಪರ ಹೋರಾಟಗಳ ಜೊತೆಗೆ ಭೂಮಿಗಾಗಿ ಕಡ್ಡಾಯ ಶಿಕ್ಷಣಕ್ಕಾಗಿ, ಸೂರಿಗಾಗಿ, ಸೇಂದಿ ಮುಕ್ತ ರಾಜ್ಯಕ್ಕಾಗಿ, ಶೋಷಣೆಯ ವಿಮುಕ್ತಿಗಾಗಿ ವಿಶ್ರಾಂತವಾಗಿ ಹೋರಾಟಗಳನ್ನು ಕಟ್ಟಿದೆ. ಇವೆಲ್ಲಾ ಹೋರಾಟಗಳು ದಲಿತ ಚಳುವಳಿಯ ಇಚ್ಛಾಶಕ್ತಿಯ ಮೆರುಪರ್ವತಗಳಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ದ.ಸಂ.ಸದಲ್ಲಿ ಹೊಸ ವಾತಾವರಣ, ಹೊಸ ನಾಯಕತ್ವ ಮತ್ತು ಹೊಸ ಚಿಂತನೆಗಳನ್ನು ರೂಪಿಸಿ ಪುನರ್‌ ಸಂಘಟನೆ ಅಗತ್ಯವಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Chikkaballapur Congress: ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮೆರವಣಿಗೆ

ಈ ಸಭೆಯ ಉದ್ಘಾಟನಾ ಭಾಷಣ ಮಾಡಿದ ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ಎನ್.ಎ ವೆಂಕಟೇಶ್ ದಲಿತರ ಮೇಲಿನ ದೌರ್ಜನ್ಯಗಳನ್ನು ಗಟ್ಟಿದನಿಯಲ್ಲಿ ತಡೆಯುವ ಕೆಲಸ ಮಾಡುವ ಜೊತೆಜೊತೆಗೆ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಮೂಲಸಮಸ್ಯೆಗಳಾದ ನೀರು, ನಿವೇಶನ ಮತ್ತು ಭೂಮಿ ಹಕ್ಕು ಗಳಿಗಾಗಿ ದ.ಸಂ.ಸ ಹಲವು ಶಾಂತಿಯುತ ಹೋರಾಟಗಳನ್ನು ನಡೆಸಿದೆ, ಈ ಹೋರಾಟಗಳ ಮೂಲಕ ಸರ್ಕಾರದ ಸೌಲಭ್ಯಗಳನ್ನು ದಮನಿತರ ಬಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕ ವಾಗಿ ಮಾಡಿದೆ ಎಂದರು.

ಸಭೆಯಲ್ಲಿ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ದಸಂಸ ಸಂವಿಧಾನವನ್ನು ಬೋಧಿಸಲಾಯಿತು.

cbpm2p

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಸಂಚಾಲಕರಾದ ಎನ್.ಪರಮೇಶ್, ಶಿಡ್ಲಘಟ್ಟ ತಾಲ್ಲೂಕು ಸಂಚಾಲಕರಾದ ತಿರುಮಲಪ್ಪ, ಬಾಗೇಪಲ್ಲಿ ತಾಲ್ಲೂಕು ಸಂಚಾಲಕ ರಾದ ಪೈಪಾಳ್ಯ ರವಿ, ಗುಡಿಬಂಡೆ ತಾಲ್ಲೂಕು ಸಮಿತಿಯ ಇಸುಕೂಲಪ್ಪ, ವರ್ಲಕೊಂಡ ರಾಜು,ಗುಡಿಬಂಡೆ  ಅದಿನಾರಾಯಣಪ್ಪ,ನಾಗರಾಜಪ್ಪ, ಗಡಿನಾಡು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು ಸೇರಿದಂತೆ ಚಿಕ್ಕಬಳ್ಳಾಪುರ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಹೋಬಳಿ ಮಟ್ಟದ ನೂತನ ಸಮಿತಿ ಪದಾಧಿಕಾರಿಗಳು
ವಿ.ವೆಂಕಟೇಶ್ ದಿನ್ನೆಹೊಸಹಳ್ಳಿ ಸಂಚಾಲಕರು, ಲಕ್ಷ್ಮಣ ವನಗಿರಿಯಪ್ಪನಹಳ್ಳಿ- ಸಂಘ ಟನಾ ಸಂಚಾಲಕರಾಗಿ ಮುನಿಕೃಷ್ಣಪ್ಪ ಪಟ್ರೇನಹಳ್ಳಿ, ಸಿಂಹಾದ್ರಿ ನರಸಿಂಹಪ್ಪ ಚಲಕಾಯ ಲಪರ್ತಿ, ಲಕ್ಷ್ಮೀನಾರಾಯಣ ತಿಪ್ಪೇನಹಳ್ಳಿ,ಸಹ ಸಂಘಟನಾ ಸಂಚಾಲಕರಾಗಿ ನಾರಾಯಣ ಸ್ವಾಮಿ ವನಗಿರಿಯಪ್ಪನಹಳ್ಳಿ,ಖಜಾಂಚಿಯಾಗಿ ಶ್ರೀನಿವಾಸ್ ಮುಷ್ಟೂರು ಆಯ್ಕೆಯಾಗಿ ದ್ದಾರೆ.

ಇದೇ ವೇಳೆ ಸಲಹಾ ಸಮಿತಿ ಸದಸ್ಯರಾಗಿ ಮನೋಜ್ ಜಡೇನಹಳ್ಳಿ, ಪುಟ್ಟಣ್ಣ ಕರಿಗಾನ ಪಾಳ್ಯ, ಆನಂದ್ ಇನಮಿಂಚೇನಹಳ್ಳಿ, ರಾಮಾಂಜಿ ಜಡೇನಹಳ್ಳಿ,ಶಿವಣ್ಣ ಗುಂತಪ್ಪನಹಳ್ಳಿ, ವೆಂಕಟಸ್ವಾಮಿ ಈತಮಾಕಲಹಳ್ಳಿ, ಸತ್ಯಪ್ಪ ಹೊನ್ನೇನಹಳ್ಳಿ, ಮುನಿಯಪ್ಪ ಆವಲಗುರ್ಕಿ, ವೆಂಕಟರಾಯಪ್ಪ ಆವಲಗುರ್ಕಿ, ವೆಂಕಟಪ್ಪ ಸೇಠ್‌ದಿನ್ನೆ,ಗೋಪಿ ಗುವ್ವಲಕಾನಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.